ಬೆಂಗಳೂರು;ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆಯ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ. ಹೈಕೋರ್ಟ್ ಸಲಹೆಯಂತೆ ಶಾಲಾ ಅವಧಿಯನ್ನ ಬೆಳಗ್ಗೆ 9ರ ಬದಲಿಗೆ 8ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ ಎಂಬ ಬಗ್ಗೆ ವರದಿಯಾಗಿದೆ. ಇದರ ಬೆನ್ನಲ್ಲೇ ಪೋಷಕರು, ಶಾಲಾ ಆಡಳಿತ ಮಂಡಳಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈಗಿರುವ ಶಾಲಾ ಸಮಯವೇ ವೈಜ್ಞಾನಿಕವಾಗಿ ತುಂಬಾ ಉತ್ತಮವಾಗಿದೆ, ಎಂದು ಪೋಷಕರು ಮತ್ತು ಆಡಳಿತ ಮಂಡಳಿಗಳು ಹೇಳುತ್ತಿವೆ. ಆದರೆ ಶಾಲಾ ಸಮಯದ ಬದಲಾವಣೆ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.ಪ್ರಸ್ತುತ, ಶಾಲೆಗಳ ಸಮಯ ಬೆಳಿಗ್ಗೆ 8.45 – 9 ರಿಂದ 3.45 – 4 ರವರೆಗೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಕಚೇರಿಗಳು ಬೆಳಿಗ್ಗೆ 10 ಗಂಟೆಗೆ ಅರಂಭವಾಗುತ್ತವೆ. ಗಾರ್ಮೆಂಟ್ಸ್ ಸೇರಿದಂತೆ ಇತರ ಖಾಸಗಿ ಉದ್ಯಮಗಳು ಬೆಳಿಗ್ಗೆ 9 ರಿಂದ 9.30 ರವರೆಗೆ ತೆರೆದಿರುತ್ತವೆ. ಈ ರೀತಿ ಶಾಲಾ ಸಮಯ ಬದಲಾವಣೆ ಮಾಡಿದರೆ ಟ್ರಾಫಿಕ್ ನಿಯಂತ್ರಣ ಮಾಡಬಹುದು ಎಂಬ ವಿಚಾರವನ್ನು ತಿಳಿಸಿದೆ. ಈ ಸಮಯ ಬದಲಾವಣೆ ಬೆಂಗಳೂರಿನ ಶಾಲೆಗಳಿಗೆ ಅನ್ವಯವಾಗಲಿದ್ದು, ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಶಾಲಾ ಸಮಯ ಬದಲಾವಣೆ ಮಾಡಲು ಯೋಜನೆ ರೂಪಿಸಲಾಗಿದೆ.ಬೆಂಗಳೂರಿಗೆ ಮಾತ್ರ ಸಮಯ ಬದಲಾವಣೆ ಮಾಡಬೇಕೆ ಅಥವಾ ರಾಜ್ಯಾದ್ಯಂತ ಅನ್ವಯಿಸಬೇಕೇ ಎನ್ನುವ ಕುರಿತಾಗಿಯೂ ಇಲಾಖೆಯು ಸಭೆ ಬಳಿಕವೇ ತೀರ್ಮಾನ ಕೈಗೊಳ್ಳಲಿದೆ