19.1 C
Bengaluru
Friday, December 27, 2024

ಇಂದಿನಿಂದ 5 ದಿನಗಳ ವಿಶೇಷ ಸಂಸತ್‌ ಅಧಿವೇಶನ

#5 day #special #session # Parliament # today

ನವದೆಹಲಿ;ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ(Special session) ಇಂದು ಆರಂಭವಾಗಲಿದೆ.ಮಂಗಳವಾರದಿಂದ ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನದ ಕಾರ್ಯಕಲಾಪಗಳು ಮುಂದುವರಿಯಲಿವೆ.ಸೋಮವಾರ ಹಳೇ ಕಟ್ಟಡದಲ್ಲಿ 5 ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ 75 ವರ್ಷಗಳ ಸಂಸತ್‌ ಭವನದ ಇತಿಹಾಸದ ಬಗ್ಗೆ ಚರ್ಚೆಯಾಗಲಿದೆ. 5 ದಿನಗಳ ವಿಶಿಷ್ಟ ಅಧಿವೇಶನಕ್ಕಾಗಿ ಹಳೆಯ-ಹೊಸ ಸಂಸತ್ ಭವನ ಗಳೆರಡೂ ಪೂರ್ಣ ಸಜ್ಜಾಗಿವೆ. ಸಂವಿಧಾನ್‌ ಸಭಾ’ದೊಂದಿಗೆ ಅಧಿವೇಶನದ ಕಲಾಪ ಶುರುವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಅಧಿ ವೇಶನದ ಆರಂ ಭದ ದಿನ ಹಳೆಯ ಸಂಸತ್ ಭವನ ದಲ್ಲಿ, ನಂತರದ 4 ದಿನ ನೂತನ ಸಂಸತ್ ಭವನದಲ್ಲಿ ಕಲಾಪ ನಡೆಯು ವಂತೆ ಯೋಜಿಸಲಾಗಿದೆ.ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ದಟ್ಟ ವಾಗಿದೆ.

ವಕೀಲರ (ತಿದ್ದುಪಡಿ) ಮಸೂದೆ, ನಿಯತಕಾಲಿಕೆಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ, ಅಂಚೆ ಕಚೇರಿ ಬಿಲ್‌(Post Office Bill), ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು ಮಸೂದೆಗಳ(bills) ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿ ನಿಯಂತ್ರಿಸುವ ಹೊಸ ಮಸೂದೆ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ ನಡೆಯಲಿದ್ದು, ಈ ಮಸೂದೆಯ ಪ್ರಕಾರ ಚುನಾವಣಾ ಆಯುಕ್ತರನ್ನು ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸೋಮವಾರ ಆರಂಭವಾಗಲಿರುವ 5 ದಿನಗಳ ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲು ವಿಧೇಯಕವನ್ನು ತಪ್ಪದೇ ಅಂಗೀಕರಿಸಬೇಕು ಎಂದು ಕಾಂಗ್ರೆಸ್  ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

Related News

spot_img

Revenue Alerts

spot_img

News

spot_img