25 C
Bengaluru
Monday, December 23, 2024

ಮಧುಗಿರಿ ಜೈಲು ಸೂಪರಿಂಟೆಂಡೆಂಟ್ ದೇವೇಂದ್ರ ಕೋಣಿ ಲೋಕಾಯುಕ್ತ ಬಲೆಗೆ

#Madhugiri#Jail #Superintendent #Devendra Koni #Lokayukta trap

ತುಮಕೂರು, ಆ.29:ಜೈಲು ಸೂಪರಿಂಟೆಂಡೆಂಟ್(Jail superintendent) ದೇವೇಂದ್ರ ಕೋಣಿ ಎಂಬುವವರು ಕೈದಿ ನೋಡಲು ಬಂದಿದ್ದ ವ್ಯಕ್ತಿ ಬಳಿ ಲಂಚ ಪಡಿಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಯನ್ನು ಹಿಡಿದಿದ್ದಾರೆ.ಜೈಲಿನಲ್ಲಿದ್ದ ತಂದೆಯನ್ನು ನೋಡಲು ಬಂದ ಮಗನಿಂದ ಲಂಚ ಪಡೆಯುತ್ತಿದ್ದ ಮಧುಗಿರಿ ಸಬ್‌ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತಾ ಬಲೆಗೆ‌ ಬಿದ್ದಿದ್ದಾರೆ.ಕಳೆದ ಐದು ದಿನಗಳ ಹಿಂದೆ ಶಿರಾ‌ ಪೊಲೀಸ್ ಠಾಣೆ ಯಿಂದ 307 ಕೇಸ್ ಅಡಿ ಆರೋಪಿ ಇಂತಿಯಾಜ್‌ ಜೈಲಿಗೆ ಬಂದಿದ್ದನು. ಇಂತಿಯಾಜ್ ನೋಡಲು ಮಗ ಅರ್ಬಾಜ್ ಬಂದಿದ್ದ. ಪ್ರತಿದಿನ ಜೈಲಿಗೆ ಬರುವಾಗ ಜೈಲ್ ಸೂಪರಿಂಟೆಂಡೆಂಟ್ ಹಣ ಪಡೆಯುತ್ತಿದ್ದು, ಇದುವರೆಗೆ ಹತ್ತು ಸಾವಿರದವರೆಗೂ ದೇವೇಂದ್ರ ಹಣ ಪಡೆದಿದ್ದರು.ಇಂದು ಉಳಿದ ಐದು ಸಾವಿರ ಹಣ ಪಡೆಯುವಾಗ ತುಮಕೂರು ಲೋಕಾಯುಕ್ತ ಡಿವೈಎಸ್ ಪಿ ಗಳಾದ ಮಂಜುನಾಥ್ ಹರೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಇದೀಗ ಜೈಲ್ ಸೂಪರಿಂಟೆಂಡೆಂಟ್ ದೇವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Related News

spot_img

Revenue Alerts

spot_img

News

spot_img