#New Education #Policy #Students #board exams
ನವದೆಹಲಿ;ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನ್ವಯ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ನೆರವಾಗಲಿದೆ ಎಂದು ಹೇಳಿದೆ.ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ದೃಷ್ಟಿಯಲ್ಲಿ ಅಭಿವೃದ್ಧಿಪಡಿಸಲಾದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಎನ್‌ಸಿಎಫ್(NCF) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಪ್ರಕಟಿಸಿದ್ದಾರೆ. – ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಸಮಯ ಮತ್ತು ಅವಕಾಶವನ್ನು ಬಳಸಿಕೊಳ್ಳಬೇಕು. ಇದರಿಂದಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನೀಡಲಾಗುತ್ತದೆ, ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ತಮ್ಮ ತರಗತಿಯ ಕಲಿಕೆಯನ್ನು ಪೂರ್ಣಗೊಳಿಸುತ್ತಾರೋ ಆ ವಿಷಯಗಳಲ್ಲಿ ಬೋರ್ಡ್ ಪರೀಕ್ಷೆ(Board exam) ಬರೆಯಬಹುದು, 11 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಒಂದು ಭಾಷೆಯನ್ನು ಕಲಿಯುವ ಬದಲು ಎರಡು ಭಾಷೆಯನ್ನು ಅಧ್ಯಯನ ಮಾಡುವ ಅಗತ್ಯವಿದೆ. ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ನ್ಯಾಷನಲ್ ಕರಿಕ್ಯುಲಮ್ ಫ್ರೇಮ್‌ವರ್ಕ್ ತಿಳಿಸಿದೆ. ಇದೇ ರೀತಿ 11 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಎಂಬ ಸ್ಟ್ರೀಮ್‌ಗಳ ಮಿತಿ ಇರಬಾರದು. ಅವರಿಗೆ ಯಾವ ವಿಷಯಗಳನ್ನು ಕಲಿಯಬೇಕೆಂದು ಅನಿಸುತ್ತದೆಯೋ ಅದನ್ನು ಕಲಿಯಲು ಅವಕಾಶ ಇರಬೇಕು ಎಂದು ಎನ್‌ಸಿಎಫ್ ತಿಳಿಸಿದೆ.ಬೋರ್ಡ್ ಪರೀಕ್ಷೆಗಳ ಮಹತ್ವವು ವಿದ್ಯಾರ್ಥಿಗಳ ವಿಷಯಗಳ ಗ್ರಹಿಕೆಯನ್ನು ಮೌಲ್ಯಮಾಪನ ಮಾಡುವುದರ ಮೇಲೆ ಇರುತ್ತದೆ. ಇದು ವ್ಯಾಪಕವಾದ ತರಬೇತಿ ಮತ್ತು ಕಂಠಪಾಠದ ಅಗತ್ಯವನ್ನು ಕಡಿಮೆ ಮಾಡುತ್ತದೆ.