ಬೆಂಗಳೂರು, ಆ. 19 : ಮನೆಯ ಮೂಲೆಗಳು ಬ್ಲಾಕ್ ಆಗಿದ್ದರೆ ಏನಾಗುತ್ತದೆ ? ಈಶಾನ್ಯ ಮೂಲೆ ಬ್ಲಾಕ್ ಆಗಿದ್ದರೆ ಗಂಡಾಂತರ ಎದುರಾಗುತ್ತದೆಯೇ ? ಬ್ಲಾಕ್ ಆಗಿರುವ ಮೂಲೆಗಳನ್ನು ವಾಸ್ತು ಪ್ರಕಾರ ಸರಿಪಡಿಸೋದು ಹೇಗೆ ? ಮೂಲೆಗಳ ಬ್ಲಾಕ್ ಆಗಿದ್ದರೆ ವಾಸ್ತು ಪರಿಹಾರ ಮಾಡಬಹುದೇ ? ಮನೆ ಮೂಲೆಗಳ ಬ್ಲಾಕ್ ಪತ್ತೆ ಮಾಡುವುದೇಗೆ ? ಮೂಲೆಗಳ ಬ್ಲಾಕ್ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ವಾಸ್ತು ತಜ್ಞರಿಂದ ತಿಳಿಯಿರಿ.
ಒಂದು ಮನೆಯ ನಿವೇಶನದಲ್ಲಿ ಮೂಳೆಗಳನ್ನು ಬ್ಲಾಕ್ ಮಾಡುವುದಾಗಲಿ ಅಥವಾ ಕಡಿತಗೊಳಿಸುವುದಾಗಲೀ ಎರಡೂ ಸೂಕ್ತವಲ್ಲ. ಇವೆರಡೂ ಕೂಡ ಮನೆಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಎಕ್ಸ್ಟೆನ್ಷನ್ ಅನ್ನು ಈಶಾನ್ಯ ಬಿಟ್ಟು ಬೇರೆಲ್ಲೂ ಮಾಡಲು ಸಾಧ್ಯವಿಲ್ಲ. ಇನ್ನು ಮೂಲೆಯಲ್ಲಿ ಕಡಿತ ಎಂದು ಬಂದಾಗ ಸಾಮಾನ್ಯವಾಗಿ ಸ್ಕ್ವಯರ್ ಅಥವಾ ರೆಕ್ಟ್ಯಾಂಗುಲರ್ ಶೇಪ್ ಗಳಲ್ಲೇ ಮನೆಯನ್ನು ಕಟ್ಟಿ ಎಂದು ಹೇಳಲಾಗುತ್ತದೆ. ಮನೆಯ ಆಕಾರ ಅಂತ ಬಂದಾಗ ಯಾವುದೇ ದಿಕ್ಕಿನಲ್ಲಿ ಕಡಿತಗೊಳಿಸುವುದು ಒಳ್ಳೆಯದಲ್ಲ.
ಎಕ್ಸ್ಟೆನ್ಷನ್ ಅಂತ ಬಂದಾಗ ಈಶಾನ್ಯದಲ್ಲಿ ಹೆಚ್ಚಿಸುವ ಅವಕಾಶ ಇರುತ್ತದೆ ಬಿಟ್ಟರೆ, ಬೇರೆಲ್ಲೂ ಇರುವುದಿಲ್ಲ. ಕಡಿತ ಎನ್ನುವುದು ಮನೆಯ ಯಾವುದೇ ದಿಕ್ಕು ಕೂಡ ಸೂಕ್ತವಲ್ಲ. ಇನ್ನು ಬಿಲ್ಡಿಂಗ್ ಅಂತ ಬಂದಾಗ ಡಿಸೈನ್ ಮಾಡುವಾಗ ಸ್ವಲ್ಪವೇ ಸ್ವಲ್ಪ ಒಳಗೆ ತೆಗೆದುಕೊಳ್ಲಬಹುದು. ಆದರೆ, ಚೌಕಟ್ಟಿನಲ್ಲಿ ಮನೆ ನಿರ್ಮಾಣದ ಡಿಸೈನ್ ಮಾಡಲಾಗುತ್ತದೆ. ಕೆಲವು ಅಡಿಗಳು ಹಿಂದೆ ಮುಂದೆ ಬಂದರೆ ಯಾವುದೇ ತೊಂದರೆಯನ್ನು ಕೊಡುವುದಿಲ್ಲ.
ಆದರೆ, ನಾಲ್ಕೂ ದಿಕ್ಕುಗಳಲ್ಲು ಕಡಿತ ಇರಬಾರದು. ಈಶಾನ್ಯ, ನೈರುತ್ಯ, ವಾಯುವ್ಯ, ಆಗ್ನೇಯ ಮೂಲೆಗಳಲ್ಲಿ ಯಾವುದೇ ರೀತಿಯ ಕಡಿತ ಇರಬಾರದು. ಈಗ ಈಶಾನ್ಯದಲ್ಲಿ ಕಡಿತವಿದ್ದರೆ, ಮನೆಯ ಎಲ್ಲರಿಗೂ ಸಮಸ್ಯೆಯನ್ನು ಉಂಟು ಮಾಡುತ್ತದೆ. ಮಕ್ಕಳ ಸ್ಥಳಕ್ಕೆ ಸಂಬಂಧ ಇರುತ್ತದೆ. ಮನೆಯ ಏಳಿಗೆಗೆ ತೊಂದರೆಯಾಗುತ್ತೆ. ಮಕ್ಕಳು ನಮಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಆಗ್ನೇಯದಲ್ಲಿ ಕಡಿತ ಬಂದರೆ, ಆ ಮನೆಯ ಹೆಣ್ಣು ಮಕ್ಕಳು ಮನೆಗೆ ಸರಿಯಾಗಿ ಸ್ಪಂದಿಸುವುದಿಲ್ಲ.
ಸದಾ ವಿರಸ ಉಂಟಾಗುತ್ತಿರುತ್ತದೆ. ನೈರುತ್ಯದಲ್ಲಿ ಕಡಿತ ಬಂದರೆ, ಮನೆಯ ಯಜಮಾನನಿಗೆ ಗೌರವ ಇರುವುದಿಲ್ಲ. ವಾಯುವ್ಯದಲ್ಲಿ ಕಡಿತವಿದ್ದರೆ, ಮನೆಯ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಎದುರಾಗುತ್ತೆ. ಇನ್ನು ಎರಡನೇಯದಾಗಿ ಮೂಲೆಗಳೆಲ್ಲಾ ಮುಚ್ಚಿ ಹೋಗಿದ್ದರೂ ಸಮಸ್ಯೆ ಎದುರಾಗುತ್ತದೆ. ಕೆಲವರು ಮನೆಯ ಕಂಪ್ಲೀಟ್ ಜಾಗವನ್ನು ಮುಚ್ಚಿ ಬಿಡುತ್ತಾರೆ. ಯಾವಾಗಲೂ ಮನೆಯ ಸುತ್ತು ಜಾಗವನ್ನು ಖಾಲಿ ಬಿಡಬೇಖು. ಈಶಾನ್ಯ ದಿಕ್ಕಿನಲ್ಲಿ ಮನೆಯನ್ನು ಎಕ್ಸ್ಟೆಂಡ್ ಮಾಡಿದ್ದರೆ ಆಗ ಮನೆಯ ಏಳಿಗೆ ಕುಂಟಿತವಾಗುವುದು ಗ್ಯಾರೆಂಟಿ.
ಯೂಟಿಲಿಟಿ ಕೂಡ ಎಕ್ಸ್ಟೆಂಡೆಡ್ ನಲ್ಲಿ ಇದ್ದರೆ ಸಮಸ್ಯೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಪೂಜಾ ಗೃಹ ಕೂಡ ಎಕ್ಸೆಂಡ್ ಏರಿಯಾದಲ್ಲಿದ್ದರೂ ಸಮಸ್ಯೆ ಆಗುತ್ತದೆ. ಕಿಚನ್ ನ ಅನ್ನು ಹೆಚ್ಚಿಸಿದ ಜಾಗದಲ್ಲಿದ್ದರೆ, ಗಂಡ ಹೆಂಡತಿ ನಡುವೆ ಸಮಸ್ಯೆ ಆಗುತ್ತದೆ. ಸೌತ್ ವೆಸ್ಟ್ ನಲ್ಲಿ ಎಕ್ಸ್ಟೆಂಡ್ ಏರಿಯಾ ಇದ್ದರೆ, ಮನೆಯ ಯಜಮಾನನ ಮೇಲೆ ಎಲ್ಲರಿಗೂ ಸಮಸ್ಯೆ ಆಗುತ್ತದೆ. ವಾಯುವ್ಯದಲ್ಲಿ ಹೆಚ್ಚಿದ್ದರೆ, ಮನೆಗೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಆಗುತ್ತದೆ.
ಮನೆಗೆ ಬರುವ ಹಣ ಉಳಿಯದೇ ಖರ್ಚಾಗುತ್ತಲೇ ಇರುತ್ತದೆ. ಇನ್ನು ಯಾವುದೇ ಕಾರಣಕ್ಕೂ ಬಿಲ್ಡಿಂಗ್ ನಲ್ಲಿ ಜಾಗವನ್ನು ಹೆಚ್ಚಿಸಿಕೊಳ್ಳುವುದು ಸಮಸ್ಯೆಗೆ ಹೆಚ್ಚಾಗುತ್ತದೆ. ಹಾಗಾಗಿ ವಾಸ್ತುವಿನಲ್ಲಿ ಮೂಲೆಗಳು ಬಹಳ ಮುಖ್ಯವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೂಲೆಗಳನ್ನು ಮುಚ್ಚುವುದಾಗಲೀ, ಅಥವಾ ಬೆಳೆಸುವುದಾಗಲಿ ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗಿದೆ.