26.4 C
Bengaluru
Thursday, December 19, 2024

ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ, ದಾಖಲೆಗಳ ಪರಿಶೀಲನೆ

#Lokayukta #officials #Belagavi #Corporation Assistant Commissioner
ಧಾರವಾಡ;ರಾಜ್ಯಾದ್ಯಂತ ನಾನಾ ಕಡೆ ಭ್ರಷ್ಟರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ – ಧಾರವಾಡದಲ್ಲಿರುವ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್ ಆನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ,ಸಪ್ತಾಪುರ್ ಬಡಾವಣೆಯ ಮಿಚಿಗನ್ ಲೇಔಟ್ ನಲ್ಲಿರುವ ಮನೆ ಮೇಲೆ ಅಧಿಕಾರಿಗಳು ನಡೆಸಿದ್ದಾರೆ.ಈ ಮೊದಲು ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿದ್ದ ಸಂತೋಷ್ ಅನಿ ಶೆಟ್ಟರ್ ಪ್ರಸ್ತುತ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಸಂತೋಷ್ ಅನಿ ಶೆಟ್ಟರ್ ಮನೆಯಲ್ಲಿ ಬ್ರಿಟಿಷರ ಕಾಲದ ವಸ್ತು ಪತ್ತೆಯಗಿದೆ, ಸಂತೋಷ್ ಅವರು ಅಪರೂಪದ ಬೀಗಗಳ ಸಂಗ್ರಹಣೆ ಹವ್ಯಾಸ ಹೊಂದಿದ್ದರು. ಅವರ ಮನೆಯಲ್ಲಿ ಪ್ರಾಚ್ಯ ಕಾಲದ ಅನೇಕ ಮೂರ್ತಿಗಳು ಪತ್ತೆಯಾಗಿವೆ.ರಾಜ್ಯ ಪ್ರಾಚ್ಯ ವಸ್ತು ಅಧಿಕಾರಿಗಳನ್ನು ಕರೆಸಲು ಮುಂದಾದ ಅಧಿಕಾರಿಗಳು ಸಪ್ತಾಪುರ ಬಡಾವಣೆಯ ಮಿಚಿಗನ್ ನಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು, ನಗದು ವಶಪಡಿಸಿಕೊಂಡಿವೆ. ಅಲ್ಲದೆ ಬಿಜಿಎಸ್ ಶಾಲೆ ಬಳಿ ಇರುವ ಸಂತೋಷ್ ಸಹೋದರನ ನಿವಾಸದ ಮೇಲು ದಾಳಿ ನಡೆಸಿದ್ದಾರೆ ಎನ್ನಲಾಗಿದೆ

Related News

spot_img

Revenue Alerts

spot_img

News

spot_img