#bescom #Assistant engineer #Lokayukta #trap
ಬೆಂಗಳೂರು : ಬೆಂಗಳೂರಿನಲ್ಲಿ ಬೆಸ್ಕಾಂ ಎಇಇ ಧನಂಜಯ್ ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ.ಕಟ್ಟಡವೊಂದಕ್ಕೆ 23 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಲು 3.5 ಲಕ್ಷ ರು ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಸ್-1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್(AE) ಧನಂಜಯ ವಿ. ಮತ್ತು ಅವರ ಪರವಾಗಿ ಹಣ ಪಡೆದ ಸೈಯದ್ ನಿಜಾಮ್ ಎಂಬ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದರು,23 ಕೆವಿ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕೋರಿ ಭರತ್ ಕುಮಾರ್ ಎನ್.ಎಂ. ಎಂಬ ಎಲೆಕ್ಟ್ರಿಕ್ ಕಾಮಗಾರಿಗಳ ಗುತ್ತಿಗೆದಾರ ಬೆಸ್ಕಾಂನ ಜಯನಗರ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.ಮಂಜೂರಾತಿ ನೀಡಲು 13 ಲಕ್ಷ ರು ಲಂಚ ನೀಡುವಂತೆ ಧನಂಜಯ ಬೇಡಿಕೆ ಇಟ್ಟಿದ್ದರು. 3.5 ಲಕ್ಷವನ್ನು ಬುಧವಾರವೇ ತಲಪಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.ಭರತ್ ಕುಮಾರ್ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು.ಲಂಚದ ಹಣವನ್ನು ಸೈಯದ್ ನಿಜಾಮ್ ಅವರಿಗೆ ತಲುಪಿಸುವಂತೆ ಅಧಿಕಾರಿ ಸೂಚಿಸಿದರು. ಭರತ್ ಕುಮಾರ್ ಹಣವನ್ನು ನೀಡಿದರು. ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಧನಂಜಯ ಮತ್ತು ಸೈಯದ್ ನಿಜಾಮ್ ಹಣ ಪಡೆಯುವಾಗ ದಾಳಿ ನಡೆಸಿ ಸಾಕ್ಷಿ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಎಂದು ಲೋಕಾಯುಕ್ತ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ್ ಕೆ., ವಿಜಯಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಹೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ
ಬಾಗಲಕೋಟೆ;ರೈತರ ಜಮೀನಿಗೆ ಟಿಸಿ ನೀಡಲು ಇಪ್ಪತ್ತು ಸಾವಿರ ಹಣ ಬೇಡಿಕೆ ಇಟ್ಟಿದ ಹೆಸ್ಕಾಂ ಇಲಾಖೆ ಸೆಕ್ಷನ್ ಆಫೀಸರ್ (SO) ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.ತೊಗಲಬಾಗಿ ಗ್ರಾಮದ ಸೆಕ್ಷನ್ ಆಫೀಸರ್ ಪಡಿಯಪ್ಪ ಲಕ್ಷ್ಮಣ ಭಜಂತ್ರಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.ಕಣ್ಣವ್ವ ಬಬಲಾದಿ ಮತ್ತು ಸೋಮರಾಯ ಬಬಲಾದಿ ಇವರ ಹೆಸರಿನಲ್ಲಿರುವ ಚಿಕ್ಕಲಕಿ ಗ್ರಾಮದ ಜಮಿನಿಗೆ ಹೆಸ್ಕಾಂ ಇಲಾಖೆಯವರು ಟಿಸಿ ನೀಡಬೇಕಿತ್ತು. ಟಿಸಿ ನೀಡಲು ರೂ 20,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಲಂಚಕ್ಕೆ ಬೇಸತ್ತು ಜಮೀನು ಮಾಲೀಕರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೆಸ್ಕಾಂ ಅಧಿಕಾರಿ ಲಂಚದ ಹಣ ಪಡೆಯುವ ವೇಳೆ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಅವರ ನೇತೃತ್ವದಲ್ಲಿ ಸಿಪಿಐ ಮಲ್ಲಪ್ಪ ಬಿದರಿ,ಬಸವರಾಜ್ ಅವಟಿ, ಬಸನಗೌಡ ಪಾಟೀಲ ದಾಳಿ ನಡೆಸಿ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.