ಬೆಂಗಳೂರು, ಆ. 12 : ಈಗಾಗಲೇ ಐಡಿಎಫ್ ಸಿ, ಎಸ್ ಬಿಐ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳಲ್ಲಿ ಹೊಸ ಬಗೆಯ ಸ್ಕೀಮ್ ಗಳನ್ನು ಪ್ರಾರಂಭಿಸಲಾಗಿದೆ. ಅದೇ ರೀತಿ ಇಂಡಿಯನ್ ಗ್ರಾಹಕರಿಗಾಗಿ ಈ ವರ್ಷದ ಆರಂಬದಲ್ಲಿ ಇಂಡ್ ಸೂಪರ್ ಎಂಬ 400 ದಿನಗಳ ಯೋಜನೆಯನ್ನು ಪರಿಚಯಿಸಿತ್ತು. ಇದು ಹಿರಿಯ ನಾಗರಿಕರಿಗೆ ಶೇಕಡಾ 7.75 ಮತ್ತು ಇತರರಿಗೆ ಶೇಕಡಾ 7.25 ರ ಬಡ್ಡಿದರವನ್ನು ನೀಡುತ್ತದೆ ಹಾಗೂ ಸೂಪರ್ ಸೀನಿಯರ್ಸ್ ಗೆ ಶೇ. 8 ರಷ್ಟು ಇಂಟರೆಸ್ಟ್ ಅನ್ನು ನೀಡುತ್ತಿದೆ.
ಇದರ ಜೊತೆಗೆ ಈಗ ಮತ್ತೊಂದು ಹೊಸ ಯೋಜನೆಯನ್ನು ಪ್ರಾರಂಭಿಸಿದೆ ಅದು 300 ದಿನಗಳ ಠೇವಣಿಗೆ ನಾಗರೀಕರಿಗೆ ಶೇ. 7.5 ರಷ್ಟು, ಹಿರಿಯ ನಾಗರಿಕರಿಗೆ ಶೇ. 7.55 ರಷ್ಟು ಹಾಗೂ ಸೂಪರ್ ಸೀನಿಯರ್ಸ್ ಗೆ ಶೇ. 7.80 ರಷ್ಟು ಬಟ್ಟಿಯನ್ನು ನೀಡಲಿದೆ. ಈ ಯೋಜನೆಗೆ ಇಂಡ್ ಸುಪ್ರೀಂ ಎಂದು ಹೆಸರನ್ನಿಡಲಾಗಿದೆ.
ಈ ಎರಡೂ ಯೋಜನೆಗೆ ಇಂಡಿಯನ್ ಬ್ಯಾಂಕ್ ಆಗಸ್ಟ್ 30ರವರೆಗಳನ್ನು ಕಾಲಾವಕಾಶ ನೀಡಿದೆ. ಇಂಡ್ ಸೂಪರ್ ಯೋಜನೆ ಅಡಿ ಟರ್ಮ್ ಡೆಪಾಸಿಟ್ ಮಾಡಲು ಕನಿಷ್ಠ 10,000 ರೂಪಾಯಿ ಅನ್ನು ಠೇವಣಿ ಮಾಡಬೇಕಿತ್ತು. ಆದರೆ ಈಗ ಇಂಡ್ ಸುಪ್ರೀಂ ಯೋಜನೆಯಲ್ಲಿ 5,000 ರೂಪಾಯಿಯಿಂದ ಎರಡು ಕೋಟಿವರೆಗೂ ಹಣವನ್ನು ಠೇವಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಇಂಡ್ ಸೂಪರ್ ಯೋಜನೆಯನ್ನು ಇಂಡಿಯನ್ ಬ್ಯಾಂಕ್ ಮಾರ್ಚ್ ತಿಂಗಳಲ್ಲಿ ಲಾಂಚ್ ಮಾಡಿತ್ತು. ಮೊದಲ ಬಾರಿಗೆ ಒಂದು ತಿಂಗಳ ಗಡುವು ನೀಡಿತ್ತು. ಬೇಡಿಕೆ ಹೆಚ್ಚಿದ ಹಿನ್ನೆಲೆ ಪುನಃ ಜೂನ್ ಕೊನೆಯವರೆಗೂ ಈ ಯೋಜನೆಯನ್ನು ಮಾನ್ಯ ಮಾಡಲಾಯ್ತು. ಆದರೆ, ಈಗ ಇಂಡ್ ಸೂಪರ್ ಯೋಜನೆಗೆ ಮತ್ತೆ ಗಡುವು ವಿಸ್ತರಣೆ ಮಾಡಲಾಗಿದೆ. ಆಗಸ್ಟ್ 30 ರವರೆಗೂ ಸಮಯ ವಿಸ್ತರಿಸಿದೆ. ಇನ್ನು ಇದರೊಂದಿಗೆ ಇಂಡ್ ಸುಪ್ರೀಂ ಯೋಜನೆಯನ್ನೂ ಪ್ರಾರಂಭಿಸಿದ್ದು, ಇದೂ ಕೂಡ ಆಗಸ್ಟ್ ನಲ್ಲಿ ಅಂತ್ಯವಾಗಲಿದೆ.