20.8 C
Bengaluru
Thursday, December 19, 2024

ವಯಕ್ತಿಕ ಸಾಲ ನೀಡುವ ಆಪ್‌ ಗಳ ಬಗ್ಗೆ ಈ ಒಂದು ಮಾಹಿತಿ ತಿಳಿಯಿರಿ..

ಬೆಂಗಳೂರು, ಆ. 10 : ವಯಕ್ತಿಕ ಸಾಲಗಳನ್ನು ನೀಡುವ ನೂರಾರು ಅಪ್ಲಿಕೇಶನ್ ಗಳು ಇವೆ. ಆದರೆ, ಇವುಗಳಲ್ಲಿ ಅಪ್ಲಿಕೇಶನ್ ಗಳು ವ್ಯಕ್ತಿಯ ವಯಕ್ತಿಕ ವಿಚಾರಗಳು, ಫೋಟೋ, ವೀಡಿಯೋ ಹಾಗೂ ಸಂಪರ್ಕಗಳು, ಕರೆ ಲಾಗ್ ಗಳು ಸೇರಿದಂತೆ ಇತರೆ ಮಾಹಿತಿಯನ್ನು ಪಡೆಯುತ್ತದೆ. ಹೀಗಾಗಿ ಇದರಿಂದ ಯಾವುದೇ ಸಮಸ್ಯೆಗಳು ಎದುರಾಗಬಾರದು ಎಂದು ಗೂಗಲ್ ಹೊಸ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ.

ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ಫಿಲಿಪೈನ್ಸ್, ಕೀನ್ಯಾ ಮತ್ತು ನೈಜೀರಿಯಾದ ದೇಶಗಳಲ್ಲಿ ಬಳಕೆದಾರರಿಗೆ ತನ್ನ ವೈಯಕ್ತಿಕ ಸಾಲ ನೀತಿಯನ್ನು ನವೀಕರಿಸಲು ಗೂಗಲ್ ಮುಂದಾಗಿದೆ. ಈ ಬಗ್ಗೆ ಗೂಗಲ್ ಅಧಿಕೃತ ಮಾಹಿತಿಯನ್ನು ನೀಡಿದೆ. ಈ ನೀತಿಯು ಬಳಕೆದಾರರ ಸಂಪರ್ಕಗಳು ಅಥವಾ ಫೋಟೋಗಳ ಮಾಹಿತಿಯನ್ನು ವೈಯಕ್ತಿಕ ಸಾಲದ ಅಪ್ಲಿಕೇಶನ್ಗಳು ಪಡೆಯುವುದನ್ನು ನಿರ್ಬಂಧಿಸುತ್ತದೆ. ಈ ನೀತಿಯು ಮೇ 31 ರಿಂದ ಜಾರಿಗೆ ಬರಲಿದೆ ಎಂದು ಗೂಗಲ್ ಹೇಳಿದೆ.

ವೈಯಕ್ತಿಕ ಸಾಲಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಅಪ್ಲಿಕೇಶನ್ಗಳು ಗ್ರಾಹಕರ ವಯಕ್ತಿಕ ವಿಚಾರಗಳು ಹಾಗೂ ಮೊಬೈಲ್ ಡೇಟಾವನ್ನು ಪಡೆಯುವನ್ನು ನಿಷೇಧಿಸಲಾಗಿದೆ. ಅಪ್ಲಿಕೇಶನ್ಗಳಿಗಾಗಿ ಟೆಕ್ ದೈತ್ಯ ತನ್ನ ವೈಯಕ್ತಿಕ ಸಾಲ ನೀತಿಯಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಭಾರತದಲ್ಲಿ, ಕಂಪನಿಗಳು ಈಗ ಪರ್ಸನಲ್ ಲೋನ್ ಆಪ್ ಡಿಕ್ಲರೇಶನ್ ಅನ್ನು ಪೂರ್ಣ ಗೊಳಿಸಬೇಕು. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಪರವಾನಗಿ ಪಡೆದಿದ್ದರೆ, ಪರಿಶೀಲನೆಗಾಗಿ ಪರವಾನಗಿಯ ಪ್ರತಿಯನ್ನು ಸಲ್ಲಿಸಬೇಕು ಎಂದು ಗೂಗಲ್ ಹೇಳಿದೆ.

Related News

spot_img

Revenue Alerts

spot_img

News

spot_img