20.2 C
Bengaluru
Thursday, December 19, 2024

ಎಫ್ ಡಿಯಲ್ಲಿ ಹೂಡಿಕೆ ಮಾಡಲು ಬ್ಯಾಂಕ್‌ ಗೆ ಹೋಗಬೇಕಿಲ್ಲ.. ಮನೆಯಲ್ಲೇ ಸ್ಥಿತ ಠೇವಣಿ ಖಾತೆ ತೆರೆಯಬಹುದು

ಬೆಂಗಳೂರು, ಆ. 10 : ಎಫ್ ಡಿ ಖಾತೆಯನ್ನು ನೀವು ತೆರೆಯುವುದು ಹಾಗೂ ಕ್ಲೋಸ್ ಮಾಡುವುದು ಈಗ ಮೊದಲಿನಷ್ಟು ಕಷ್ಟವೇನಿಲ್ಲ. ಬಹಳ ಸುಲಭವಾಗಿದೆ. ಈಗ ಎಲ್ಲವೂ ಆನ್ ಲೈನ್ ಮೂಲಕವೇ ಮಾಡಬಹುದಾಗಿದೆ. ಸ್ಥಿರ ಠೇವಣಿಯು ಸುರಕ್ಷತೆಯಾಗಿದ್ದು, ಎಫ್ ಡಿ ಗ್ರಾಹಕರಲ್ಲಿ ಉಳಿತಾಯದ ಅಭ್ಯಾಸವನ್ನು ಹುಟ್ಟುಹಾಕುತ್ತದೆ. ಎಲ್ಲಾ ವಯಸ್ಸಿನವರೂ ಜೀವನದ ಪ್ರತೀ ಹಂತದಲ್ಲೂ ಊಳಿತಾಯವನ್ನು ಮಾಡಲು ಸಹಕಾರಿಯಾಗಿದೆ. ಇದು ಆರ್ಥಿಕ ತುರ್ತು ಪರೀಸ್ಥಿತಿಯಲ್ಲಿ ಸಹಾಯ ಮಾಡುತ್ತದೆ.

ಹಾಗಾಗಿಯೇ ಎಫ್ ಡಿ ಅನ್ನು ಸುರಕ್ಷಿತ ಹೂಡಿಕೆಯ ಸಾಧನವಾಗಿ ಪರಿಗಣಿಸಲಾಗಿದೆ. ಇದು ಮಾರುಕಟ್ಟೆಯ ಏರಿಳಿತಗಳ ಹೊರತಾಗಿಯೂ ಸ್ಥಿರ ಆದಾಯವನ್ನು ಖಾತರಿಪಡಿಸಲಾಗುತ್ತದೆ. ಎಫ್ ಡಿ ದರಗಳು ಹೆಚ್ಚಾದಂತೆಯೇ ಜನಸಾಮಾನ್ಯರಿಗೆ ಆಕರ್ಷಕ ಉಳಿತಾಯದ ಆಯ್ಕೆಯಾಗಲಿವೆ. ಅಲ್ಲದೆ, ಎಫ್ಡಿಗಳಲ್ಲಿ ಹೂಡಿಕೆ ಮಾಡುವಾಗ ಎಷ್ಟು ಅವಧಿಯ ಎಫ್ ಡಿಗಳಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ನೀವು ರಿಸ್ಕ್ ತೆಗೆದುಕೊಳ್ಳುವ ಹೂಡಿಕೆದಾರರಾಗಿದ್ದರೆ, ಅಲ್ಪಾವಧಿಯಿಂದ – ಮಧ್ಯಮಾವಧಿಯ ಎಫ್ ಡಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಧ್ಯಮ ಅವಧಿಯಲ್ಲಿ ನಿಮಗೆ ಹಣದ ಅಗತ್ಯವಿದ್ದರೆ, 2 ರಿಂದ 3 ವರ್ಷಗಳ ಅವಧಿಯ FD ಯಲ್ಲಿ ಠೇವಣಿ ಮಾಡಬಹುದು. ಅಲ್ಪಾವಧಿ ಹಾಗೂ ಧೀರ್ಘಾವಧಿ ಎಫ್ ಡಿಗಳ ಮೇಲಿನ ಬಡ್ಡಿ ದರ ಕನಿಷ್ಠ 7 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಇರುತ್ತದೆ. ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿಯ ಎಫ್ ಡಿಗಳು ಎಂದು ವರ್ಗೀಕರಿಸಲಾಗಿದೆ. 7 ದಿನಗಳಿಂದ 12 ತಿಂಗಳುಗಳ ಅವಧಿಯ ಎಫ್ಡಿಗಳು ಅಲ್ಪಾವಧಿಯದ್ದಾಗಿವೆ.

ಇನ್ನು ಎಸ್ ಬಿಐ ಬ್ಯಾಂಕ್‌ ನಲ್ಲಿ ಎಫ್‌ ಡಿ ಕ್ಲೋಸ್ ಮಾಡುವುದು ಕೂಡ ಸುಲಭ. ಎಸ್ ಬಿಐ ಅಧಿಕೃತ ವೆಬ್ ಸೈಟ್ www.sbi.co.in ಭೇಟಿ ಕೊಡಿ. ಸ್ಥಿರ ಠೇವಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಎಫ್ ಡಿ ಟ್ಯಾಬ್ ETDR/STDR (FD) ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ. Close A/C Prematurely ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಎಫ್ ಡಿಯ ಒಂದು ಪಟ್ಟಿ ಕಾಣಿಸುತ್ತದೆ. ನೀವು ನಿರ್ದಿಷ್ಟ ಎಸ್ ಬಿಐ ಎಫ್ ಡಿಯನ್ನು ಲಿಸ್ಟ್ ನಿಂದ ಅದನ್ನು ಆಯ್ಕೆ ಮಾಡುವ ಮೂಲಕ ಕ್ಲೋಸ್ ಮಾಡಬಹುದು.

ಮೆಚ್ಯುರಿಟಿ ದಿನಾಂಕ, ಮೊತ್ತ ಠೇವಣಿ ಇಟ್ಟಿರೋದು ಮುಂತಾದ ಮಾಹಿತಿಗಳ ಮೂಲಕ ನೀವು ಎಫ್ ಡಿ ಖಾತೆ ಮಾಹಿತಿಗಳನ್ನು ಪರಿಶೀಲಿಸಬಹುದು. ಖಾತೆ ಕ್ಲೋಸ್ ಮಾಡಲು ಕಾರಣವನ್ನು ನಮೂದಿಸುವ ಮೂಲಕ ‘Confirm’ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ನಮೂದಿಸಿ ಹಾಗೂ ಅದನ್ನು ಅನುಮೋದಿಸಿ. Confirm ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಎಸ್ ಬಿಐ ಎಫ್ ಡಿ ಖಾತೆಯನ್ನು ಕ್ಯಾನ್ಸಲ್ ಮಾಡಿರುವ ಬಗ್ಗೆ ನಿಮಗೆ ಇ-ಮೇಲ್ ಬರುತ್ತದೆ.

Related News

spot_img

Revenue Alerts

spot_img

News

spot_img