ಬೆಂಗಳೂರು, ಆ. 01 : ದೆವ್ವದ ಊರುಗಳ ಬಗ್ಗೆ ಕೇಳಿದ್ದೀರಾ..? ಸಾಮಾನ್ಯವಾಗಿ ಫಾರಿನ್ ಗಳಲ್ಲಿ ದೆವ್ವದ ಊರುಗಳು ಇರುವ ಬಗ್ಗೆ ಕೇಳಿರುತ್ತೀರಾ. ಇಡೀ ಊರಿಗೆ ಊರೇ ಖಾಲಿ ಇರುತ್ತದೆ. ಅಲ್ಲಿ ದೆವ್ವಗಳು ವಾಸ ಇವೆ. ಹಾಗಾಗಿ ಆ ಊರಿಗೆ ಯಾರೂ ಹೋಗುವುದಿಲ್ಲ ಎಂದೆಲ್ಲಾ ಕೇಳಿರುತ್ತೀರಾ. ಇನ್ನು ಕೆಲ ಬಿಲ್ಡಿಂಗ್ ಗಳಲ್ಲಿ ದೆವ್ವ ಇದೆ ಎಂಬ ಸಿನಿಮಾಗಳನ್ನೂ ನೋಡಿರುತ್ತೀರಾ. ನಾವೀಗ ಅಂತಹದ್ದೇ ಒಂದು ದೆವ್ವದ ಊರಿನ ಬಗ್ಗೆ ಪರಿಚಯಿಸುತ್ತೀವಿ. ಅದೂ ಕೂಡ ಚೀನಾ ದೇಶದಲ್ಲಿ.
ದೆವ್ವದ ಊರಿನ ಬಗ್ಗೆ ರೆವೆನ್ಯೂಫ್ಯಾಕ್ಸ್ ವೆಬ್ ಸೈಟ್ ನಲ್ಲಿ ಯಾಕೆ ಅಂತ ಯೋಚಿಸ್ತಿದ್ದೀರಾ.? ಅಷ್ಟಕ್ಕೂ ಇದು ದೆವ್ವದ ಊರು ಅಲ್ಲ. ಆದರೆ, ಚೀನಾದಲ್ಲಿ ಈ ಊರನ್ನು ವಿಲೇಜ್ ಆಫ್ ಗೋಸ್ಟ್ ಅಥವಾ ಗೋಸ್ಟ್ ಟೌನ್ ಎಂದು ಕರೆಯುತ್ತಾರೆ. ಕಾರಣ ಅಲ್ಲಿ ದೆವ್ವಗಳಿವೆ ಎಂದಲ್ಲ. ಬದಲಿಗೆ ಗ್ರೀನ್ ಲ್ಯಾಂಡ್ ನಿರ್ಮಾಣ ಮಾಡಿದ ಐಷಾರಾಮಿಯ ವಿಲ್ಲಾಗಳು ಪಾಳು ಬಿದ್ದಿರುವುದಕ್ಕೆ. ಹೌದು.. ಚೀನಾ ಶೆಂಘ್ಯಾನ್ ಎಂಬ ಬೆಟ್ಟದ ಬಳಿ ಈ ಗ್ರೀನ್ ಲ್ಯಾಂಡ್ ಐಷಾರಾಮಿಯಾಗಿ ನೂರಾರು ವಿಲ್ಲಾಗಳನ್ನು ನಿರ್ಮಾಣ ಮಾಡಿದೆ.
ಈ ವಿಲ್ಲಾಗಳು ಅರಮನೆಯಂತಿದ್ದು, ಈ ಮನೆಯ ಲೈಟ್ಸ್, ಟೈಲ್ಸ್ ಸೇರಿದಂತೆ ಪ್ರತಿಯೊಂದು ವಸ್ತುಗಳು ಕೂಡ ಬಹಳ ಕಾಸ್ಟ್ಲಿಯಾದದ್ದಾಗಿವೆ. ಶ್ರೀಮಂತರಿಗಾಗಿ ಗ್ರೀನ್ ಲ್ಯಾಂಡ್ ಬಹಳ ಖರ್ಚು ಮಾಡಿ ಈ ವಿಲ್ಲಾಗಳನ್ನು ನಿರ್ಮಾಣ ಮಾಡಿದೆ. ಇಲ್ಲಿ ನೂರಕ್ಕೂ ಹೆಚ್ಚು ವಿಲ್ಲಾಗಳಿದ್ದು, ಒಂದರಲ್ಲೂ ಯಾರೂ ವಾಸವಿಲ್ಲ. ಹಲವು ವರ್ಷಗಳಿಂದ ಈ ಜಾಗ ಸಂಪೂರ್ಣವಾಗಿ ಪಾಳು ಬಿದ್ದಿದೆ. ಇದಕ್ಕೆ ಸರಿಯಾದ ಕಾರಣ ತಿಳಿಯದೇ ಇದ್ದರೂ ಕೂಡ ಸ್ಥಳೀಯರ ತಮಗೆ ಬೇಕಾದಂತಹ ಉತ್ತರಗಳನ್ನು ಕಂಡುಕೊಂಡಿದ್ದಾರೆ.
ಈಗ ಈ ಪಾಳು ಬಿದ್ದ ಜಾಗದಲ್ಲಿ ರೈತರು ವ್ಯವಸಾಯ ಮಾಡಲು ಮುಂದಾಗಿದ್ದಾರೆ. ಅಲ್ಲದೇ ವಿಲ್ಲಾಗಳಲ್ಲಿ ತಮ್ಮ ಹಸುಗಳನ್ನು ಕಟ್ಟುತ್ತಿದ್ದಾರೆ. ಈ ದೃಶ್ಯಗಳು ಈಗ ವೈರಲ್ ಆಗುತ್ತಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಲ್ಲಾಗಳ ಎದುರುಗಡೆ ಬೃಂದಾವನ ಇರಬೇಕಿತ್ತು ಆದರೆ, ವ್ಯವಸಾಯ ನಡೆಯುತ್ತಿದೆ. ಹಾಗೂ ಮನುಷ್ಯರು ವಾಸವಿರಬೇಕಿದ್ದ ಜಾಗದಲ್ಲಿ ಹಸುಗಳ ಕೊಟ್ಟಿಗೆಗಳು ಇವೆ ಎಂದು ಜನ ಮಾತನಾಡುತ್ತಿದ್ದಾರೆ. ಚೀನಾದಲ್ಲಿ ಇಂತಹಹಲವು ಪ್ರದೇಶಗಳಿವೆ ಎಂದು ಕೂಡ ವರದಿಯಾಗಿದೆ.