25.5 C
Bengaluru
Thursday, December 19, 2024

ಇ.ಡಿ. ನಿರ್ದೇಶಕ ಸಂಜಯ್ ಮಿಶ್ರಾ ಅಧಿಕಾರಾವಧಿ ವಿಸ್ತರಿಸಿದ ಸುಪ್ರೀಂಕೋರ್ಟ್

ನವದೆಹಲಿ:ಜಾರಿ ನಿರ್ದೇಶನಾಲಯದ (ಇ.ಡಿ.) ನಿರ್ದೇಶಕ ಸಂಜಯ್ ಮಿಶ್ರಾರ ಅಧಿಕಾರಾವಧಿಯನ್ನು ಗುರುವಾರ ಸುಪ್ರೀಂಕೋರ್ಟ್‌ ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲು ಸುಪ್ರೀಂ ಕೋರ್ಟ್(supremecourt) ಅನುಮತಿ ನೀಡಿದೆ. ಸಂಜಯ್‌ ಕುಮಾರ್ ಮಿಶ್ರಾ ಅಧಿಕಾರ ಅವಧಿ ವಿಸ್ತರಣೆಗೆ ಅನುಮತಿ ನೀಡಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಇದೇ ಕೊನೆ. ಮತ್ತೆ ಅವಧಿ ವಿಸ್ತರಣೆ ಸಾಧ್ಯವಿಲ್ಲ ಸ್ಪಷ್ಟಪಡಿಸಿದೆ.ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಈ ಮಟ್ಟಿಗೆ ಅವಕಾಶ ನೀಡಲಾಗುತ್ತಿದ್ದು,ಮತ್ತೊಮ್ಮೆ ವಿಸ್ತರಿಸುವ ಉದ್ದೇಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮಿಶ್ರಾ ಸೆಪ್ಟೆಂಬರ್ 15ರ ಮಧ್ಯ ರಾತ್ರಿ ವರೆಗೆ ಮಾತ್ರವೇ ಇ.ಡಿ. ನಿರ್ದೇಶಕರಾಗಿ ಇರಲಿದ್ದಾರೆ ಎಂದು ಜಸ್ಟಿಸ್ ಗವಾಯಿ ಹೇಳಿದರು.ಸಂಜಯ್‌ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸಲು ಕೇಂದ್ರದ ಮನವಿಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

Related News

spot_img

Revenue Alerts

spot_img

News

spot_img