ಬೆಂಗಳೂರು, ಜು. 27 : ಮೊದಲೆಲ್ಲಾ ಶಾಪಿಂಗ್ ಎಂದರೆ, ಹೊಸ ಮನೆಗೆ ತೆರಳುವಾಗ, ಹಬ್ಬ-ಹರಿದಿನಗಳಲ್ಲಿ ಮಾತ್ರವೇ ಶಾಪಿಂಗ್ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸ್ಮಾರ್ಟ್ ಫೋನ್ ಗಳ ಆಗಮನದಿಂದಾಗಿ ಪ್ರತಿಯೊಬ್ಬರ ಬದುಕು ಬದಲಾಗಿದೆ. ಮೊದಲೆಲ್ಲಾ ಮನೆಯವರೆಲ್ಲಾ ಸೇರಿ ಶಾಪಿಂಗ್ ಮಾಡುತ್ತಿದ್ದರು. ಈಗ ಒಬ್ಬೊಬ್ಬರೆ ತಮಗೆ ಬೇಕಾದ್ದನ್ನು ಖರೀದಿ ಮಾಡುತ್ತಿರುತ್ತಾರೆ. ಅದೂ ಕೂಡ ಮೊಬೈಲ್ ಕೈಯಲ್ಲಿಡಿದು ಆನ್ ಲೈನ್ ನಲ್ಲೇ ಶಾಪಿಂಗ್ ಮಾಡುತ್ತಾರೆ. ಸುತ್ತಾಡಿಕೊಂಡು ಖರೀದಿಸುವ ತಾಳ್ಮೆಯೇ ಭಾರತೀಯರಲ್ಲಿ ಮಅಯವಾಗಿ ಬಿಟ್ಟಿದೆ.
ಈಗ ಸಾಕಷ್ಟು ಆಪ್ ಗಳು ಇದ್ದು, ಅಮೇಜಾನ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಬ್ಲಿಂಕ್ ಇಟ್, ಮಿಂತ್ರಾ, ಬಿಗ್ ಬಾಸ್ಕೆಟ್, ಡಂಜೋ ನಂತಹ ಸಾಕಷ್ಟು ಆಪ್ ಗಳಿಂದ ನಿಮ್ಮಿಷ್ಟದ ಬಟ್ಟೆ, ಗ್ಯಾಜೆಟ್ ಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಹೀಗಾಗಿ ಪ್ರತಿಯೊಬ್ಬರೂ ನಿತ್ಯ ಒಂದಲ್ಲ ಒಂದು ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಆದರೆ, ಭಾರತೀಯರು ಶಾಪಿಂಗ್ ಮಾಡುವ ಭರದಲ್ಲಿ ಆತು ಬೀಳುವುದೇ ಹೆಚ್ಚು. ಆರ್ಡರ್ ಮಾಡಿದ ವಸ್ತು ಒಂದೇ ದಿನದಲ್ಲಿ ಕೈ ಸೇರಬೇಕು ಎಂದು ಬಯಸುತ್ತಾರೆ.
ಇನ್ನು ಎಕ್ಸ್ ಚೇಂಜ್ ಮಾಡಿದರೂ ಕೂಡ ಆದಷ್ಟು ಬೇಗ ಆಗಲಿ ಎಂದು ಬಯಸುತ್ತಾರೆ. ಈ ಬಗ್ಗೆ ಭಾರತದಲ್ಲಿ ಶೇ. 45ರಷ್ಟು ಡಿಜಿಟಲ್ ಉತ್ಪನ್ನಗಳು ಆನ್ಲೈನ್ನಲ್ಲೇ ಖರೀದಿಸುತ್ತಾರಂತೆ. ವಂಡರ್ಮ್ಯಾನ್ ಥಾಂಪ್ಸನ್ ಅನ್ನೋ ರಿಸರ್ಚ್ ಕಂಪನಿ ಸಮೀಕ್ಷೆ ನಡೆಸಿದ್ದು, ಈ ವಿಚಾರವನ್ನು ಬಯಲು ಮಾಡಿದೆ. ಇದರಲ್ಲಿ ಶೇ. 38ರಷ್ಟು ಮಂದಿ ಆತುರ ಬೀಳುತ್ತಾರಂತೆ. ಇನ್ನು ಶೇ. 37ರಷ್ಟು ಉತ್ಪನ್ನಗಳನ್ನು ಭಾರತೀಯರು ರಿಟರ್ನ್ ಮಾಡುತ್ತಾರಂತೆ. ಭಾರತೀಯರು ಗುಣಮಟ್ಟದ ವಿಚಾರದಲ್ಲಿ ಬಹಳ ತಕರಾರು ಮಾಡುತ್ತಾರೆ ಎಂದು ವರದಿ ತಿಳಿಸಿದೆ.