24.2 C
Bengaluru
Sunday, December 22, 2024

ಶೇ. 76 ರಷ್ಟು 2000 ರೂ. ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿಯಾಗಿದೆ ಎಂದ ಆರ್‌ ಬಿಐ

ಬೆಂಗಳೂರು, ಜು. 27 : ಭಾರತೀಯ ರಿಸರ್ವ್ ಬ್ಯಾಂಕ್ ಮೇ ತಿಂಗಳಿನಲ್ಲಿ 2 ಸಾವಿರ ರೂ. ನೋಟುಗಳನ್ನು ಹಿಂಪಡೆಯುವ ಬಗ್ಗೆ ಮಾಹಿತಿಯನ್ನು ನೀಡಿತ್ತು. ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಎರಡು ಸಾವಿರ ನೋಟುಗಳನ್ನು ಬ್ಯಾಂಕ್‌ಗೆ ಹಿಂದಿರುಗಿಸುವಂತೆ ಸೂಚನೆ ನೀಡಿತ್ತು. ಅದರಂತೆ ಸಾರ್ವಜನಿಕರು ಎರಡು ಸಾವಿರ ರೂಪಾಯಿಯ ನೋಟುಗಳನ್ನು ಬ್ಯಾಂಕ್ ಗೆ ಹಿಂದಿರುಗಿಸುತ್ತಿದ್ದಾರೆ. ಈಗಾಗಲೇ ಬ್ಯಾಂಕ್‌ ಗೆ ಶೇ. 76 ರಷ್ಟು ನೋಟುಗಳು ಜಮೆಯಾಗಿವೆಯಂತೆ.

ಈ ಬಗ್ಗೆ ಸ್ವತಃ ಆರ್‌ ಬಿಐ ವರದಿ ನೀಡಿದೆ. ಈಗಾಗಲೇ ಸಾರ್ವಜನಿಕರು ತಮ್ಮ ಬಳಿ ಇದ್ದ 2 ಸಾವಿರ ನೋಟುಗಳನ್ನು ಬ್ಯಾಂಕ್‌ ಗಳಿಗೆ ಠೇವಣಿ ಮಾಡಿದ್ದಾರೆ. ಕೆಲವರು ನೋಟುಗಳನ್ನು ಬದಲಾಯಿಸಿಕೊಂಡಿದ್ದರೆ, ಮತ್ತೆ ಕೆಲವರು ಠೇವಣಿ ಮಾಡಿದ್ದಾರೆ ಎಂದು ಆರ್‌ ಬಿಐ ತಿಳಿಸಿದೆ. ಪ್ರಕ್ರಿಯೆಗೆ ಕೊನೆಯ ದಿನಾಂಕ 30 ಸೆಪ್ಟೆಂಬರ್, 2023 ಎಂದು RBI ಹೇಳಿದೆ. ವಿನಿಮಯ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು ಎಂದು ಆರ್‌ಬಿಐ ಹೇಳಿದೆ. ಖಾತೆದಾರರಲ್ಲದವರೂ ಸಹ ಯಾವುದೇ ಬ್ಯಾಂಕ್ ಶಾಖೆಯಲ್ಲಿ ₹20,000/- ಮಿತಿಯವರೆಗಿನ ₹2000 ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ.

ಜನರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು ಮತ್ತು ಠೇವಣಿ ಮಾಡಬಹುದು ಅಥವಾ ತಮ್ಮ ₹2000 ಬ್ಯಾಂಕ್ ನೋಟುಗಳನ್ನು ಬದಲಾಯಿಸಬಹುದು ಎಂದು ಆರ್ ಬಿಐ ಉಲ್ಲೇಖಿಸಿದೆ. ಖಾತೆಗಳಿಗೆ ಠೇವಣಿ ಮತ್ತು ₹2000 ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವು ಸೆಪ್ಟೆಂಬರ್ 30, 2023 ರವರೆಗೆ ಎಲ್ಲಾ ಬ್ಯಾಂಕ್‌ಗಳಲ್ಲಿ ಲಭ್ಯವಿರುತ್ತದೆ. ವಿನಿಮಯದ ಸೌಲಭ್ಯವು ಸೆಪ್ಟೆಂಬರ್ 30 ರವರೆಗೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಲಭ್ಯವಿರುತ್ತದೆ. 2023 ಎಂದು ಆರ್‌ಬಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Related News

spot_img

Revenue Alerts

spot_img

News

spot_img