ಬೆಂಗಳೂರು, ಜು. 18 : ಬಿಡಿಎನಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಇದರ ತನಿಖೆಯನ್ನು ಎಸ್ ಐಟಿಗೆ ನೀಡಲು ಸರ್ಕಾರ ಮುಂದಾಗಿದೆ. ಕಳೆದ ಹಲವು ವರ್ಷಗಳೀಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹತ್ತು ಹಲವು ಹಗರಣಗಳು ನಡೆದಿವೆ. ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಯನ್ನು ಸೃಷ್ಟಿ ಮಾಡಿ ಕೋಟಿಗಟ್ಟಲೇ ಹಣವನ್ನು ನುಂಗಿರುವುದು ಪತ್ತೆಯಾಗಿದೆ. ಅರ್ಕಾವತಿ ಬಡಾವಣೆ, ಸೈಟ್ ಹಂಚಿಕೆ ಸೇರಿದಂತೆ ಹಲವು ರೀತಿಯಲ್ಲಿ ಹಗರಣ ಮಾಡಿ, ಲೂಟಿ ಮಾಡಿದ್ದಾರೆ.
ಸಗಟು ಸೈಟ್ ಹಂಚಿಕೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ. ಕಾರ್ನರ್ ಸೈಟ್ ಹಂಚಿಕೆ, ಸಿಎ ಸೈಟ್ ಹಂಚಕೆಯಲ್ಲಿ ಅಕ್ರಮವಾಗಿ ಕೋಟಿ ಕೋಟಿ ಲೂಟಿ ಮಾಡಿರುವ ಆರೋಪವಿದೆ. ಟಿಟಿಆರ್ ನಲ್ಲಿ ಕೋಟ್ಯಾಂತರ ರೂ ಹಗರಣ ನಡೆದಿದೆ. ಟ್ರಿನಿಟಿ ಅಸೋಸಿಯೇಷನ್ ಗೆ ಅಕ್ರಮವಾಗಿ 35 ಸೈಟ್ ಹಂಚಿಕೆ ಮಾಡಿ 100 ಕೋಟಿ ಲೂಟಿ ಮಾಡಲಾಗಿದೆ. ಕೆಂಪೇಗೌಡ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ನಕಲಿ ರೈತರಿಗೆ ಪರಿಹಾರ ನೀಡಿ ವಂಚಿಸಲಾಗಿದೆ.
ಖಾಲಿ ಜಾಗಕ್ಕೆ ಫೆನ್ಸಿಂಗ್ ಹಾಕುವುದಾಗಿ ಹೇಳಿ ಮೋಸ, -ಭೂಸ್ವಾದೀನಾ ವಿಭಾಗದಲ್ಲಿ ಒಂದೇ ಜಾಗಕ್ಕೆ ಎರಡೆರೆಡು ಬಾರಿ ಪರಿಹಾರ, ಕೆಂಪೇಗೌಡ ಬಡಾವಣೆ ಅಭಿವೃದ್ದಿಯಲ್ಲಿ ಗೋಲ್ ಮಾಲ್ ನಡೆದಿದೆ. ಅರ್ಕಾವತಿ ಬಡಾವಣೆಯಲ್ಲಿ ಸಾವಿರಾರು ನಾಗರಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.
ಬಹುತೇಕ ಎಲ್ಲಾ ಹಂಚಿಕೆದಾರರಿಗೆ ನೋಂದಣಿಯನ್ನೂ ಮಾಡಿಕೊಡಲಾಗಿತ್ತು. ಆದರೆ, ನಿವೇಶನ ಹಂಚಿಕೆಯಲ್ಲಿ ಅಕ್ರಮವನ್ನು ಮಾಡಿದೆ. ಇದೆಲ್ಲಾ ಅಕ್ರಮಗಳ ತನಿಖೆಗೆ ತಂಡವನ್ನು ರಚಿಸಬೇಕು. ಈ ತನಿಖೆಯ ಹೊಣೆಯನ್ನು ಎಸ್ ಐಟಿ ಹೆಗಲಿಗೆ ಹೊರಿಸಬೇಕು ಎಂದು ಸರ್ಕಾರ ತೀರ್ಮಾನಿಸಿದೆ.