ಬೆಂಗಳೂರು;ಬಿಬಿಎಂಪಿಯ (BBMP) ಒಂಬತ್ತು ಅಧಿಕಾರಿಗಳ ವರ್ಗಾವಣೆಗೆ ಸೂಚನೆ ನೀಡಲಾಗಿದೆ.ಬಿಬಿಎಂಪಿ ವಿವಿಧ ವಲಯ ಹಾಗೂ ವಿಭಾಗಗಳಿಂದ ಆರ್ಆರ್ ನಗರ ವಲಯಕ್ಕೆ ಒಟ್ಟು 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. 9 ಮಂದಿ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಮಾಡಲು ಪತ್ರದ ಮೂಲಕ ಬಿಬಿಎಂಪಿ ಚೀಫ್ ಕಮಿಷನರ್ಗೆ ಸೂಚಿಸಿದ್ದಾರೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ ಇಲ್ಲಿದೆ.
1. ಕೆ ಶಿವಲಿಂಗಯ್ಯ : ಹಿರಿಯ ಆರೋಗ್ಯಾಧಿಕಾರಿ : ದಕ್ಷಿಣ ವಲಯದಿಂದ ಆರ್ ಆರ್ ನಗರದ ಜ್ಞಾನಭಾರತಿಗೆ ವರ್ಗ
2. ಮಾರುತಿ ಪಿಸೆಟ್ : ಹಿರಿಯ ಆರೋಗ್ಯ ಪರಿವೀಕ್ಷಕ : ದಕ್ಷಿಣ ವಲಯದಿಂದ ಆರ್ ಆರ್ ನಗರದ ಜ್ಞಾನಭಾರತಿಗೆ ವರ್ಗ
3. ಕರಿಗೌಡ : ಕಂದಾಯ ಪರಿವೀಕ್ಷಕ : ಬೊಮ್ಮನಹಳ್ಳಿ ವಲಯದಿಂದ ಆರ್ ಆರ್ ನಗರದ 160 ವಾರ್ಡ್ ಗೆ ವರ್ಗ
4. ಎಸ್ ವಿಶ್ವನಾಥ್ : ಕಂದಾಯ ಪರಿವೀಕ್ಷಕ : ಪಶ್ಚಿಮ ವಲಯದಿಂದ ಆರ್ ಆರ್ ನಗರದ ಉಪವಿಭಾಗ ಕಚೇರಿಗೆ ವರ್ಗ
5. ಹನುಮಂತರಾಯಪ್ಪ : ಕಂದಾಯ ಪರಿವೀಕ್ಷಕ : ಶ್ರೀರಾಮ ಉಪವಲಯ ಕಚೇರಿಯಿಂದ ಕೆಂಗೇರಿ ಉಪವಲಯ ಕಂದಾಯ ಕಚೇರಿಗೆ ವರ್ಗ
6. ರಮೇಶ್ : ಹಿರಿಯ ಆರೋಗ್ಯ ಪರಿವೀಕ್ಷಕ : ಆರ್ ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
7. ಡಿಎಲ್ ನಾರಾಯಣ : ಹಿರಿಯ ಆರೋಗ್ಯ ಪರಿವೀಕ್ಷಕ : ಆರ್ ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
8. ಮಂಜುನಾಥ : ಹಿರಿಯ ಆರೋಗ್ಯ ಪರಿವೀಕ್ಷಕ : ಆರ್ ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗ
9. ಕುಮಾರ್ : ಕಂದಾಯ ಪರಿವೀಕ್ಷಕ : ಹೇರೋಹಳ್ಳಿ ಉಪವಲಯದಿಂದ ಆರ್ ಆರ್ ನಗರದ ಜ್ಞಾನಭಾರತಿಗೆ ವರ್ಗ