20.8 C
Bengaluru
Thursday, December 19, 2024

ಕಾನೂನು ಹೋರಾಟ ಮಾಡಿ ಮೂರು ದಶಕಗಳ ಬಳಿಕ 32 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದ ಬಿಡಿಎ

ಬೆಂಗಳೂರು, ಜು. 10 : ಬಿಟಿಎಂ ಲೇಔಟ್ ನ ನಾಲ್ಕನೇ ಹಂತದ ದೇವರಚಿಕ್ಕನಹಳ್ಳಿಯಲ್ಲಿರುವ ಒಂದು ಎಕರೆ 12ಗುಂಟೆ ಭೂಮಿ ಅನ್ನು ಬಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಅದೂ ಕೂಡ 1990 ರರಲ್ಲಿ ಸ್ವಾಧೀನ ಪ್ರಕ್ರಿಯೆ ನಡೆದಾಗ ಅಲ್ಲೊಂದು ಸಮಸ್ಯೆ ಎದುರಾಗಿತ್ತು. ಇಬ್ಬರು ಪ್ರತ್ಯೇಕವಾಗಿ 26ಗುಂಟೆಯ ಹಕ್ಕು ಸಲ್ಲಿಕೆ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಅಂದಿನಿಂದ ಬಿಡಿಎ ಕೂಡ ಸತತವಾಗಿ ಕಾನೂನು ಹೋರಾಟ ನಡೆಸಿ, ಇದೀಗ ಆ ಜಾಗವನ್ನು ತನ್ನ ವಶಕ್ಕೆ ಪಡೆದಿದೆ. ಮತ್ತೆ ರಿಟ್

ಮೊದಲ ಬಾರಿಗೆ ಇಬ್ಬರು ಹೈಕೋರ್ಟ್ ನಲ್ಲಿ ಜಾಗದ ಹಕ್ಕು ಸಲ್ಲಿಸಿದರು. ಬಳಿಕ ಕೋರ್ಟ್ ಬಿಡಿಎ ಸರಿಯಾದ ದಾಖಲೆಗಳನ್ನು ನೀಡದ ಕಾರಣ ಪ್ರಕರಣವನ್ನು ಕ್ಲೋಸ್ ಮಾಡಲಾಗಿತ್ತು. 2016ರಲ್ಲಿ ಕೃಷ್ಣಾ ರೆಡ್ಡಿ ಎಂಬ ವ್ಯಕ್ತಿ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಈ ಸಂಬಂಧ ಆಗಸ್ಟ್ 5, 2019 ರಂದು ಹೈಕೋರ್ಟ್ ಪ್ರಕರಣದ ಕುರಿತು ತೀರ್ಪು ನೀಡಿತು. ಆದರೆ, ನ್ಯಾಯಾಲಯವು ಈ ಪ್ರಶ್ನಾರ್ಹ ಭೂಮಿಯನ್ನು ಕೈಬಿಡಲಾಗಿದೆ ಎಂದು ಘೋಷಿಸಿತು ಮತ್ತು ಆದ್ದರಿಂದ ಅದು ಲ್ಯಾಪ್ಸ್ ಆಯಿತು.

2021 ರಲ್ಲಿ ಬಡಿಎ ಹೈಕೋರ್ಟ್‌ನಲ್ಲಿ ರಿಟ್ ಮೇಲ್ಮನವಿ ಸಲ್ಲಿಸಿತು ಮತ್ತು ದಾಖಲೆಗಳನ್ನು ನೀಡಿತು. ಆದರೆ, ಸೆಪ್ಟೆಂಬರ್ 9, 2022 ರಂದು ಹೈಕೋರ್ಟ್ ಈ ಮನವಿಯನ್ನು ವಜಾಗೊಳಿಸಿತು. ಈಮಧ್ಯೆ, ಮತ್ತೋರ್ವ ಹುಚ್ಚಮ್ಮ ಎಂಬುವವರು ಬಿಡಿಎ ಸ್ವಾಧೀನದ ವಿರುದ್ಧ ಸೆಪ್ಟೆಂಬರ್ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ, ಕೋರ್ಟ್ ಇದೇ ರೀತಿಯ ತೀರ್ಪು ನೀಡಿತು. ದ್ಯ ಈ ಜಾಗದ ಮೌಲ್ಯ 32 ಕೋಟಿ ರೂಪಾಯಿ ಆಗಿದೆ. ಆದಷ್ಟು ಬೇಗನೇ ಈ ಭೂಮಿಯನ್ನು ಈಗ ಬಿಡಿಎ ತನ್ನ ವಶಕ್ಕೆ ಪಡೆಯಲಿದೆ.

Related News

spot_img

Revenue Alerts

spot_img

News

spot_img