Karnataka Budget 2023: ಸಿಎಂ ಸಿದ್ದರಾಮಯ್ಯ 14ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ,ಸಿಎಂ ಸಿದ್ದರಾಮಯ್ಯ ಅವರು 3.39 ಲಕ್ಷ ಕೋಟಿಯ ಬಜೆಟ್ ಮಂಡಿಸುತ್ತಿದ್ದಾರೆ. ರೈತರಿಗೆ ಶೂನ್ಯ ಬಡ್ಡಿದರದ ಸಾಲ ಮಿತಿಯನ್ನ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ಮಿತಿಯನ್ನ 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದ್ದು, ಗುಡ್ಡಗಾಡು ಪ್ರದೇಶದ ರೈತರಗೆ ಪಿಕ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ ನೀಡಲಾಗುವುದು.
ರೈತರಿಗೆ ಹಲವು ಯೋಜನೆಗಳು
1.ರೈತರಿಗೆ 3 ಲಕ್ಷದಿಂದ 5 ಲಕ್ಷದವರೆಗೆ ಅಲ್ಪಾವಧಿ ಸಾಲ
2.ರೈತರ ಉತ್ಪನ್ನಗಳ ಏಕೀಕೃತ ಬ್ಯಾಂಡಿಗ್ ವ್ಯವಸ್ಥೆಗೆ 10 ಕೋಟಿ ರೂ.
3.75 ಕೋಟಿ ವೆಚ್ಚದಲ್ಲಿ ರಾಮನಗರದ ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ
4. ಕೃಷಿ ಭಾಗ್ಯ ಯೋಜನೆಗೆ ನರೇಗಾ ಅಡಿ 100 ಕೋಟಿ
5. ಕೃಷಿ ಉದ್ಯಮ ಉತ್ತೇಜಿಸಲು ನವೋದ್ಯಮ ಯೋಜನೆಗೆ 100 ಕೋಟಿ ರೂ.
6.ಹಸು, ಎಮ್ಮೆ, ಎತ್ತು ಮೃತಪಟ್ಟರೆ ಪರಿಹಾರ ಕೊಡಲು 10 ಕೋಟಿ ರೂ.
7. ರೈತರಿಗೆ 20 ಲಕ್ಷದವರೆಗೆ ಶೇ 4. ಬಡ್ಡಿ ದರದಲ್ಲಿ ಸಾಲ
8,ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಮತ್ತು ಕಾಫಿ ಉದ್ಯಮ ಅಭಿವೃದ್ಧಿ
9.ಅನುಗ್ರಹ ಯೋಜನೆ ಮರು ಜಾರಿ ಮಾಡಿ ಕುರಿ ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರ ನೀಡಲಾಗುವುದು
10.ಗ್ರಾಮೀಣ ಭಾಗದಲ್ಲಿ 19 ಕೆರೆಗಳನ್ನು ತುಂಬಿಸಲು 770 ಕೋಟಿ ರೂ ಮೀಸಲಿಡಲಾಗಿದೆ
11.ಎತ್ತಿನ ಹೊಳೆ ಯೋಜನೆಗೆ ಪರಿಷ್ಕೃತ ಮೊತ್ತ 22,252 ಕೋಟಿ ರೂ