ನವದೆಹಲಿ;ಖಾಸಗಿ ವಲಯದ ಯೆಸ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಪರಿಷ್ಕರಿಸಿರುವುದಾಗಿ ತಿಳಿಸಿದೆ. 2 ಕೋಟಿ ರೂವರೆಗಿನ ನಿಶ್ಚಿತ ಠೇವಣಿಗಳಿಗೆ ನೀಡುವ ಬಡ್ಡಿಯನ್ನು ಯೆಸ್ ಬ್ಯಾಂಕ್ ಹೆಚ್ಚಿಸಿದೆ. ಇಂದಿನಿಂದಲೇ(ಜುಲೈ 3) ಹೊಸ ದರಗಳು ಜಾರಿಗೆ ಬರಲಿವೆ. 7ರಿಂದ 14 ದಿನಗಳ ಅವಧಿಯ ಠೇವಣಿಗಳಿಗೆ ಶೇ. 3.25ರಷ್ಟು ಬಡ್ಡಿ ಸಿಗುತ್ತದೆ. ಒಂದೂವರೆ ವರ್ಷದಿಂದ ಮೂರು ವರ್ಷದ ಅವಧಿಯ ಠೇವಣಿಗೆ ಗರಿಷ್ಠ ಬಡ್ಡಿ ನೀಡಲಾಗುತ್ತದೆ.ಯೆಸ್ ಬ್ಯಾಂಕ್ ಪ್ರಕಟಣೆ ಪ್ರಕಾರ ಈ ಎಫ್‌ಡಿಗಳಿಗೆ ಶೇ.775ರಷ್ಟು ಬಡ್ಡಿ ಸಿಗುತ್ತದೆ. ಇದೇ ಎಫ್‌ಡಿಗೆ ಹಿರಿಯ ನಾಗರಿಕರು ಶೇ 8.25ರಷ್ಟು ಬಡ್ಡಿ ಪಡೆಯಬಹುದು. ಪ್ರತಿಯೊಂದು ನಿಶ್ಚಿತ ಠೇವಣಿಗೂ ಸಾಮಾನ್ಯ ಗ್ರಾಹಕರು ಪಡೆಯುವುದಕ್ಕಿಂತ ಶೇ. 0.5ರಷ್ಟು ಹೆಚ್ಚು ಬಡ್ಡಿ ಹಿರಿಯ ನಾಗರಿಕರಿಗೆ ಕೊಡಲಾಗುತ್ತದೆ.ಹೊಸ ಎಫ್‌ಡಿ ದರಗಳು ಇಂದು 3 ಜುಲೈ 2023 ರಂದು ಜಾರಿಗೆ ಬರುತ್ತವೆ.
ಯೆಸ್ ಬ್ಯಾಂಕ್ ಇತ್ತೀಚಿನ FD ದರಗಳು ಜುಲೈ 3 ರಿಂದ ಜಾರಿಗೆ ಬರುತ್ತವೆ
7 ರಿಂದ 14 ದಿನಗಳು: ಶೇ. 3.25 ಬಡ್ಡಿ
15ರಿಂದ 45 ದಿನಗಳು: ಶೇ. 3.70
46ರಿಂದ 90 ದಿನಗಳು: ಶೇ. 4.10
90ರಿಂದ 120 ದಿನಗಳು: ಶೇ. 4.75
121ರಿಂದ 180 ದಿನಗಳು: ಶೇ. 5
181 ದಿನದಿಂದ 271 ದಿನಗಳು: ಶೇ. 6.10
272 ದಿನದಿಂದ 1 ವರ್ಷದೊಳಗಿನ ಅವಧಿ: ಶೇ. 6.35
1 ವರ್ಷದಿಂದ 18 ತಿಂಗಳೊಳಗಿನ ಅವಧಿ: ಶೇ. 7.50
18 ತಿಂಗಳಿಂದ 36 ತಿಂಗಳಿಗಿಂತ ಕಡಿಮೆ: ಶೇ. 7.75
36 ತಿಂಗಳಿಂದ 60 ತಿಂಗಳಿಗಿಂತ ಕಡಿಮೆ: ಶೇ. 7.25
60 ತಿಂಗಳಿಂದ 120 ತಿಂಗಳಿಗಿಂತ ಕಡಿಮೆ: ಶೇ. 7
ಈ ಮೇಲಿನ ದರಗಳು 2 ಕೋಟಿ ರೂವರೆಗಿನ ಹೂಡಿಕೆಗಳಿಗೆ ಅನ್ವಯ ಆಗುತ್ತವೆ. ಹಿರಿಯ ನಾಗರಿಕರು ಸಾಮಾನ್ಯ ದರಗಳಿಗಿಂತ 0.50% ಹೆಚ್ಚುವರಿ ಬಡ್ಡಿದರವನ್ನು ಪಡೆಯುತ್ತಾರೆ. ಯೆಸ್ ಬ್ಯಾಂಕ್ ಈಗ ಹಿರಿಯ ನಾಗರಿಕರಿಗೆ 3.75% ರಿಂದ 8.25% ವರೆಗಿನ 7 ದಿನಗಳಿಂದ 10 ವರ್ಷಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಒದಗಿಸುತ್ತಿದೆ,ಹಿರಿಯ ನಾಗರಿಕರಿಗೆ ಯೆಸ್ ಬ್ಯಾಂಕ್ FD ದರಗಳು ಜುಲೈ 3 ರಿಂದ ಜಾರಿಗೆ ಬರುತ್ತವೆ