20.9 C
Bengaluru
Tuesday, January 14, 2025

2016ರ ರೇರಾ ಕಾಯಿದೆಯ ಸೆಕ್ಷನ್ 18(1) ಏನು ಹೇಳುತ್ತದೆ.?

ಬೆಂಗಳೂರು ಜೂನ್30: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ 2016ರ ಕಾಯ್ದೆಯನ್ನು RERA ಎಂದು ಕರೆಯಲಾಗುತ್ತದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರಲು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖರೀದಿದಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ರೇರಾ ಕಾಯ್ದೆ ಅನುಷ್ಠಾನಕ್ಕೆ ತರಲಾಗಿದೆ.

ಯಾವ ಸಂಧರ್ಭದಲ್ಲಿ ಹೂಡಿಕೆದಾರರಿಗೆ ಅನುಕೂಲಕರವಾಗಿ‌ ಸಹಯಾಕ್ಕೆ ಬರುತ್ತದೆ,ಇನ್ನು RERA ಕಾಯ್ದೆಯಲ್ಲಿ ಸೆಕ್ಷನ್ 18, 18 (1)ರ ಅಡಿಯಲ್ಲಿ ಖರೀದಿದಾರರಿಗೆ ಅನುಕೂಲವಾಗುವ ಕೆಲವು ಪ್ರಮುಖ ಅಂಶಗಳು ಯಾವುವೂ ಎಂದು ನೋಡುವುದಾದರೆ, ಕೆಲ ಮುಖ್ಯ ಅಂಶಗಳನ್ನು ಈ ಕೆಳಗಿನಂತೆ ಕಟಣ ಬಹುದಾಗಿದೆ.

* ಖರೀದಿದಾರರು ಯೋಜನೆಯೊಂದರಲ್ಲಿ ಹೂಡಿಕೆ ಮಾಡಿದ ಸಂಪೂರ್ಣ ಮೊತ್ತವನ್ನು ಬಡ್ಡಿ ಸೇರಿದಂತೆ ಕೆಲವೊಮ್ಮೆ ಪರಿಹಾರದ ಪಾವತಿಗೆ ಅರ್ಹರಾಗಿರುತ್ತಾರೆ.

* ಡೆವಲಪರ್ ಗಳು ಮಾರಾಟ ಹಾಗೂ ನಿರ್ಮಾಣ ಮಾಡಲು ಒಪ್ಪಂದದಲ್ಲಿ ನಿಗದಿಪಡಿಸಿದ ನಿಯಮ ಮತ್ತು ಷರತ್ತುಗಳು ಉಲ್ಲಂಘನೆ ಆದಾಗ

*ನಿಯಮಾನುಸಾರ ಫ್ಲಾಟ್, ಮನೆ, ಕಟ್ಟಡ ಹೂಡಿಕೆದಾರರ ಸ್ವಾಧೀನಕ್ಕೆ ನೀಡಲು ವಿಫಲವಾದಗ ಸೆಕ್ಷನ್ 18(1) ಅಡಿಯಲ್ಲಿ ಕ್ರಮ

*ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದ ಸರಿಯಾದ ಸಮಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ

*ಯಾವುದೇ ಇತರ ಕಾರಣಗಳಿಂದ ಡೆವಲಪರ್ ತನ್ನ ಯೋಜನೆಯನ್ನು ವಾಪಾಸ್ ಪಡೆಯಲು ಅಥವಾ ಸ್ಥಗಿತಗೊಳಿಸಲು ಮುಂದಾದಗ

* ಖರೀದಿದಾರರಿಗೆ ಸಮಯಕ್ಕೆ ಸರಿಯಾಗಿ ಅವರು ಬಯಸಿದ ಫ್ಲಾಟ್, ಮನೆ ಸ್ವಾಧೀನಕ್ಕೆ ನೀಡಲುವಲ್ಲಿ ವಿಫಲವಾದಗ

* ರೇರಾ ಕಾಯ್ದೆ ಸೆಕ್ಷನ್ 18ರ ಅಡಿಯಲ್ಲಿ ಮರುಪಾವತಿ ಪಡೆಯುವ ಹಕ್ಕು*

ತಾನು ಹೋಡಿಕೆ ಮಾಡಿದ ಕಂಪನಿಯ ಕರಾರು ಅಥವಾ ಈ ಮೊದಲೇ ಮಾಡಿಕೊಂಡು ಒಪ್ಪಂದಗಳು ಉಲ್ಲಂಘನೆ ಆದ ಪಕ್ಷದಲ್ಲಿ, ಹೋಡಿಕೆ ಮಾಡಿದ ಹಣದ ಬಡ್ಡಿಯೊಂದಿಗೆ ಸೆಕ್ಷನ್ 18(1) ಅಡಿಯಲ್ಲಿ ಮರುಪಾವತಿ ಪಡೆಯ ಬಹುದು ಎಂದು ಮಾನ್ಯ ಸುಪ್ರೀಂಕೋರ್ಟ್ ಆದೇಶಿಸಿದೆ..

ರೇರಾ ಕಾಯ್ದೆ ಸೆಕ್ಷನ್ 18ರ ಅಡಿಯಲ್ಲಿ ಮರುಪಾವತಿ ಪಡೆಯುವ ಹಕ್ಕು ಕುರಿತು ಖರೀದಿದಾರರ ಹಕ್ಕು, ಅರ್ಹತೆ ಹಾಗೂ ಸ್ವಾಧೀನದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿ ತೀರ್ಪು ಕೊಟ್ಟಿದೆ.

ಉದಾಹರಣೆಗೆ ಸುಪ್ರೀಂ ಕೋರ್ಟ್ ಸೆಕ್ಷನ್ 18(1), ಅಡಿಯಲ್ಲಿ ನೀಡಿರುವ ಅಪೀಲು ನಂಬರ್ 6750-57/2021 ನ್ಯೂಟೆಕ್ ನೆಟ್ವಕ್ ಪ್ರಮೋಟರ್ಸ್ v/s ದಿ ಸ್ಟೇಟ್ ಉತ್ತರ ಪ್ರದೇಶ ಹಾಗೂ ಅಪೀಲು ನಂಬರ್
3581-3590/2020 ಪ್ಯಾರಾ ನಂಬರ್ 23ರಂತೆ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ v/s ಅನಿಲ್ ಪಾಟ್ನಿ ಮತ್ತು ಇತರರು ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಚನ್ 18(1)ರ ಅಡಿಯಲ್ಲಿ ನಿಗದಿತ ಸಮಯಕ್ಕೆ ಬಿಲ್ಡರ್ಸ್, ಅಥವಾ ಪ್ರಮೋಟರ್ಸ್ ಪ್ಲಾಟ್ ನಿರ್ಮಾಣ, ಮತ್ತು ಹಸ್ತಾಂತರ ಮಾಡದ ಕಾರಣಕ್ಕೆ ನೀಡಲಾಗಿರುವ ತೀರ್ಪುನ್ನು ಉಲ್ಲೇಖ ಮಾಡಿ ಕರ್ನಾಟಕ ರೇರಾ ಕೋರ್ಟ್ ಆದೇಶಿಸಿದೆ.

ಪರಿಹಾರಕ್ಕಾಗಿ ಅಂತಹ ದೂರುಗಳನ್ನು ವಿಲೇವಾರಿ ಮಾಡುವಾಗ ತೀರ್ಪು ನೀಡುವ ಅಧಿಕಾರಿಯು ವಿಚಾರಣೆಯನ್ನು ನಡೆಸಲು ಮತ್ತು ಪಾವತಿ ಪರಿಹಾರ ಮತ್ತು ಬಡ್ಡಿಯನ್ನು ನಿರ್ದೇಶಿಸುವ ಅಧಿಕಾರವನ್ನು ಹೊಂದಿರುತ್ತಾರೆ ಮತ್ತು ಅಂತಹ ದೂರುಗಳನ್ನು 60 ದಿನಗಳಲ್ಲಿ ಶಾಸನಬದ್ಧವಾಗಿ ವಿಲೇವಾರಿ ಮಾಡುವ ಕಾರಣಗಳನ್ನು ದಾಖಲಿಸಬೇಕು.

ಇದಲ್ಲದೆ ಖರೀದಿದಾರರ ಆಯ್ಕೆಯಂತೆ ಅವರು ಬಡ್ಡಿಗೆ ಮರುಪಾವತಿಗಾಗಿ ದೂರು ಸಲ್ಲಿಸಬಹುದು ಅಥವಾ ಪರಿಹಾರಕ್ಕಾಗಿ ದೂರು ಸಲ್ಲಿಸಬಹುದು. ಸೆಕ್ಷನ್ 18 ಆಕ್ಟ್ ಅಡಿಯಲ್ಲಿ ಉಲ್ಲೇಖಿಸಲಾದ ನಿಬಂಧನೆಗಳು ಖರೀದಿದಾರರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿವೆ ಎಂದು ಹೇಳಬಹುದಾಗಿದೆ. ಅಲ್ಲದೆ ಖರೀದಿದಾರರು ಕಷ್ಟಪಟ್ಟು ಗಳಿಸಿದ ಹಣವನ್ನು ನಿರ್ದಿಷ್ಟಪಡಿಸಿದ ಬಡ್ಡಿಯಿಂದ ಮರಳಿ ಪಡೆಯಲು ಸಮರ್ಥರಾಗಿರುತ್ತಾರೆ..

Related News

spot_img

Revenue Alerts

spot_img

News

spot_img