20.2 C
Bengaluru
Thursday, December 19, 2024

ರಿಯಲ್ ಎಸ್ಟೇಟ್ ವಂಚಕರಿಗೆ ಕೆಪಿಐಡಿ ಹಾಗೂ ಬಡ್ಸ್ ಎಂಬ ಅಸ್ತ್ರ

ಬೆಂಗಳೂರು, ಜೂ. 28 : ರಿಯಲ್ ಎಸ್ಟೇಟ್ ಉದ್ಯಮ ಬೆಳೆದಂತೆ ವಂಚಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಫ್ಲ್ಯಾಟ್, ನಿವೇಶನಗಳನ್ನು ನೀಡುವ ಹೆಸರಿನಲ್ಲಿ ಕೆಲ ರಿಯಲ್ ಎಸ್ಟೇಟ್ ಕಂಪನಿಗಳು ವಂಚಿಸುತ್ತಿವೆ. ಇದರಿಂದ ನೂರಾರು ಜನರು ವಂಚನೆಗೊಳಗಾಗುತ್ತಿದ್ದಾರೆ. ಇದರಿಂದ ನಿತ್ಯ ಹಲವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ. ಹೀಗಾಗಿ ರಿಯಲ್ ಡಸ್ಟೇಟ್ ವಂಚಕರಿಗೆ ಬ್ರೇಕ್ ಹಾಕಲು ಬಡ್ಸ್ ಮತ್ತು ಕೆಪಿಐಡಿ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಬಡ್ಸ್ ಮತ್ತು ಕೆಪಿಐಡಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ರಿಯಲ್ ಎಸ್ಟೇಟ್ ಕಂಪನಿಗಳ ವಿರುದ್ಧ ತನಿಖೆ ನಡೆಸಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು, ಹುಬ್ಬಳ್ಳಿ- ಧಾರವಾಡ, ಕಲಬುರಗಿ, ಹಾಸನ, ದಾವಣಗೆರೆ ಸೇರಿದಂತೆ ಹಲವು ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುತ್ತಿದೆ. ಆಸ್ತಿ ಖರೀದಿಸುವ ಆಸೆಯಿಂದ ಕೆಲವರು ಹಣ ಕೊಟ್ಟು ಮೋಸ ಹೋಗುತ್ತಿದ್ದಾರೆ.

ನಿವೇಶನ ಹಾಗೂ ಫ್ಲ್ಯಾಟ್ ಮೇಲೆ ಮಾಲೀಕರು ಹಣ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಂತಹವರಿಗೆ ಆಫರ್ ಹಾಗೂ ಹಲವು ಕೊಡುಗೆಗಳ ಬಗ್ಗೆ ಆಸೆ ತೋರಿಸಿ, ಕೆಲ ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ಏಜೆಂಟರು ವಂಚಿಸುತ್ತಿದ್ದಾರೆ. ಇಂತಹ ದೂರುಗಳಿಗೆ ಕೆಪಿಐಡಿ ಹಾಗೂ ಬಡ್ಸ್ ಅಸ್ತ್ರವನ್ನು ಸಮರ್ಥವಾಗಿ ಪ್ರಯೋಗಿಸಲು ಪೊಲೀಸರು ಮುಂದಾಗಿದ್ದಾರೆ.ಈ ಎರಡೂ ಕಾಯ್ದೆಗಳು ವಂಚಿತರಿಗೆ ತಮ್ಮ ಹಣವನ್ನು ವಾಪಸ್ ಕೊಡಿಸಲು ಸಹಾಯ ಮಾಡುತ್ತಿದೆ.

ಇನ್ನು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2014 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಂಚಿಸುತ್ತಿರುವುದು ತಿಳಿದು ಬಂದರೆ, ಆರೋಪಿಗಳು ಗರಿಷ್ಠ 6 ವರ್ಷಗಳ ಶಿಕ್ಷೆ ಅನ್ನು ಅನುಭವಿಸಬೇಕು. ಇದರ ಜೊತೆಗೆ ಗರಿಷ್ಠ 5 ಲಕ್ಷದವರೆಗೆ ದಂಡವನ್ನು ಕಟ್ಟಬೇಕು. ಇನ್ನು ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ ಕಾಯ್ದೆ 2019 ಅಡಿಯಲ್ಲಿ ಗರಿಷ್ಠ 7 ವರ್ಷ ಶಿಕ್ಷೆಯ ಜೊತೆಗೆ ಗರಿಷ್ಠ 5 ಲಕ್ಷದವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ.

Related News

spot_img

Revenue Alerts

spot_img

News

spot_img