18.1 C
Bengaluru
Wednesday, December 25, 2024

ಬ್ಯಾಂಕ್ ನಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಾಲವನ್ನು ಪಡೆಯಲು ಹೀಗೆ ಮಾಡಿ..

ಬೆಂಗಳೂರು, ಜೂ. 26 : ವಿದ್ಯಾರ್ಥಿಗಳಿಗೆ ಓದಲು ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ಗಳಲ್ಲಿ ಲೋನ್ ಒಡೆಯುವ ಅವಕಾಶವಿದೆ. ಸರ್ಕಾರವೂ ಕೂಡ ಬ್ಯಾಂಕ್ ಗಳಿಗೆ ಶಿಕ್ಷಣ ಸಾಲ ನೀಡಲು ಪ್ರೋತ್ಸಾಹಿಸುತ್ತವೆ. ವಿದ್ಯಾರ್ಥಿಗಳಿಗೆ ಸಾಲ ನೀಡಿಕೆಗೆ ಸಂಬಂಧ ಪಟ್ಟಂತೆ ಬ್ಯಾಂಕ್ ಗಳಿಗೆ ಅವರದ್ದೇ ಆದ ಕೆಲ ನಿಯಮಗಳಿವೆ. ವಿದ್ಯಾರ್ಥಿಗಳು ಈಗ ಶಿಕ್ಷಣ ಸಾಲವನ್ನು ಬ್ಯಾಂಕ್ ನಲ್ಲಿ ಪಡೆಯಲು ಏನೆಲ್ಲಾ ಮಾಡಬೇಕು ಎಂಬ ಸಂಪೂರ್ಣ ವಿವರಗಳು ಇಲ್ಲಿವೆ.

ಯಾವುದೇ ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಕೆಲ ಅರ್ಹತೆಗಳು ಸೇರಿದಂತೆ ನಿಯಮಗಳು ಹಾಗೂ ಷರತ್ತುಗಳ ಬಗ್ಗೆ ಮಾಹಿತಿ ತಿಳಿದಿರಬೇಕಾಗುತ್ತದೆ. ಶೈಕ್ಷಣಿಕ ಸಾಲವನ್ನು ಪಡೆಯುವುದಕ್ಕಾಗಿ ನೀವು ಭಾರತೀಯ ಪ್ರಜೆಯಾಗಿರಬೇಕು. ಅಂಗೀಕೃತ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದಿರಬೇಕು. ವಿದ್ಯಾರ್ಥಿಗಳಿಗೆ ಆದಾಯವಿಲ್ಲದಿರುವುದರಿಂದಾಗಿ ಪೋಷಕರು ಇಲ್ಲವೇ ಒಡಹುಟ್ಟಿದವರು ಕೂಡ ಅರ್ಜಿದಾರರಾಗಿರಬೇಕಾಗುತ್ತದೆ.

 

ಮೊದಲ 4 ಲಕ್ಷದವರೆಗೂ ಶಿಕ್ಷಣ ಸಾಲ ಪಡೆಯಲು ಯಾವುದೇ ಆಧಾರವನ್ನು ನೀಡಬೇಕಿಲ್ಲ. ಆದರೆ, ಅದಕ್ಕಿಂತಲೂ ಹೆಚ್ಚಿನ ಸಾಲವನ್ನು ಪಡೆಯಲು ಅರ್ಜಿದಾರರ ಆದಾಯ ಕಡಿಮೆ ಎಂದೆನಿಸಿದ್ರೆ ಬ್ಯಾಂಕು ಮೇಲಾಧರವನ್ನು ಕೇಳುತ್ತದೆ. ಶೈಕ್ಷಣಿಕ ಸಾಲವನ್ನು ಪಡೆಯುವ ಮೊದಲು ವಿವಿಧ ಬ್ಯಾಂಕ್ ಗಳಲ್ಲಿ ಸಿಗುವ ಸಾಲದ ಅವಕಾಶಗಳು, ಬಡ್ಡಿದರವನ್ನು ಲೆಕ್ಕಚಾರ ಮಾಡುತ್ತದೆ. ಸಾಲ ಮರುಪಾವತಿ ಅವಧಿಗಳ ಬಗ್ಗೆ ಮಾಹಿತಿ ಅನ್ನು ಸಂಗ್ರಹಿಸಿ ಹೋಲಿಕೆ ಮಾಡಿ ನೋಡುತ್ತದೆ.

ಹಾಗೆಯೇ ನಾಲ್ಕು ಲಕ್ಷ ಸಾಲಕ್ಕೆ ಎಲ್ಲಾ ಬ್ಯಾಂಕ್ ಗಳು ಯಾವುದೇ ಆಧಾರವನ್ನು ಕೇಳುವುದಿಲ್ಲ. ಅಷ್ಟೇ ಅಲ್ಲದೇ, ಓದು ಮುಗಿದು ಕೆಲಸಕ್ಕೆ ಸೇರಿ ಮೂರು ವರ್ಷ ಕಳೆಯುವವರೆಗೂ ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡಲು ಅವಕಾಶವನ್ನು ಕೊಡುತ್ತದೆ. ಈ ಮೊತ್ತಕ್ಕೆ ಶೇ. 10-15 ಬಡ್ಡಿದರವನ್ನು ವಿಧಿಸಲಾಗುತ್ತದೆ. ಜಾಸ್ತಿ ಮೊತ್ತದ ಶೈಕ್ಷಣಿಕ ಸಾಲ ಹೊಂದಿರೋರಿಗೆ ಬ್ಯಾಂಕ್ ಗಳು ಸುದೀರ್ಘ ಮರುಪಾವತಿ ಅವಧಿಗೆ ಕಡಿಮೆ ಬಡ್ಡಿ ವಿಧಿಸುತ್ತವೆ. ಇನ್ನು ವಿದ್ಯಾರ್ಥಿಗಳಿಗೆ ಸಾಲ ನೀಡುವ ಮೊದಲು ಬ್ಯಾಂಕ್ ಗಳು ಅರ್ಜಿದಾರರ ಹೆಸರ ಈ ಮೊದಲೇ ಸಾಲ ಇದೆಯಾ ಎಂಬ ಬಗ್ಗೆ ಪರಿಶೀಲನೆಯನ್ನು ನಡೆಸುತ್ತದೆ.

ಇನ್ನು ದೀರ್ಘಾವಧಿಯ ಸಾಲವನ್ನು ಪಡೆದರೆ, ಇಎಂಐ ಮೊತ್ತ ಕಡಿಮೆಯಾಗುತ್ತದೆ. ಉದ್ಯೋಗ ಸಿಕ್ಕಾಗ ವೇತನ ಕಡಿಮೆ ಇದ್ದು, ಇಎಂಐ ಹೆಚ್ಚಿದ್ದರೆ ಕಷ್ಟವಾಗುತ್ತದೆ. ಬ್ಯಾಂಕ್ ಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳು ಇವೆ. ಈ ಮೂಲಕ ಹೆಣ್ಣು ಮಕ್ಕಳಿಗೆ ಯೋಜನೆಗಳಡಿಯಲ್ಲಿ ಕಡಿಮೆ ಬಡ್ಡಿ ದರ ಸಾಲವನ್ನು ನೀಡುವುದರ ಜೊತೆಗೆ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ.

Related News

spot_img

Revenue Alerts

spot_img

News

spot_img