ಬೆಂಗಳೂರು ಜೂನ್ 24: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ ಗೆ 3,400 ರೂ ಪಾವತಿಸಲು ರಾಜ್ಯ ಸಿದ್ಧವಿದ್ದು ಹಣಕೊಡುತ್ತೇವೆಂದು ಎಂದರೂ ಅಕ್ಕಿ ಕೊಡುತ್ತಿಲ್ಲ!,ಅದೇ ನಿಗಮದ ಮೂಲಕ ಪ್ರತಿ ಕ್ವಿಂಟಾಲ್ ಗೆ 3100 ರೂ ಗೆ ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ 15 ಲಕ್ಷ ಟನ್ ಅಕ್ಕಿಯನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ರಾಜ್ಯ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವುದಿಲ್ಲ ಎಂದು ಎಫ್ ಸಿ ಐ ಹೇಳಿದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಲೇ ಅಲ್ಲಿಂದ ಹೆಚ್ಚುವರಿ ಅಕ್ಕಿ ಪಡೆಯಲು ರಾಜ್ಯ ಸರ್ಕಾರ ನಡೆಸಿದ ಪ್ರಯತ್ನವೂ ವಿಫಲವಾಗಿದೆ.
ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದ ಕೇಂದ್ರ ಆಹಾರ ಮಂತ್ರಿ ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಬಹುದೊಡ್ಡ ಸಂಘರ್ಷಕ್ಕೆ ಕಾರಣವಾಗಿರುವ ಅನ್ನಭಾಗ್ಯದ ಹೆಚ್ಚುವರಿ 5 kg ಅಕ್ಕಿ ಕೊಡುವ ವಿಚಾರ ಇನ್ನಷ್ಟು ತಾರಕಕ್ಕೇರುವ ಸಾಧ್ಯತೆ ಹೆಚ್ಚಿದೆ.
ರಾಜ್ಯ ಆಹಾರ ಸಚಿವ ಕೆ.ಎಚ್. ಮುನಿಯಪ್ಪರವರಿಗೆ 3 ದಿನ ಕಾಯಿಸಿ ಕೊನೆಗೂ ಭೇಟಿಕೊಟ್ಟ ಕೇಂದ್ರ ಆಹಾರ ಮಂತ್ರಿ ಪೀಯೂಷ್ ಗೋಯಲ್!
ಸಚಿವ ಕೆ.ಎಚ್. ಮುನಿಯಪ್ಪರವರಿಗೆ 3 ದಿನ ಕಾಯಿಸಿ ನಂತರ ಭೇಟಿಗೆ ಅವಕಾಶಮಾಡಿಕೊಟ್ಟ ಕೇಂದ್ರ ಆಹಾರ ಮಂತ್ರಿ ಪೀಯೂಷ್ ಗೋಯಲ್ ಸಭೆಯ ಬಳಿಕ ರಾಜ್ಯಸರ್ಕಾರದ ಅನ್ನಭಾಗ್ಯಕ್ಕೆ ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪನವರು ಪಿಯೂಷ್ ಗೋಯಾಲ್ ರವರಿಗೆ ಹೆಚ್ಚುವರಿ ಅಕ್ಕಿ ನೀಡುವುದರಿಂದ ಬಡವರಿಗೆ ಸಹಾಯವಾಘುತ್ತದೆ ಎನ್ನುವ ಮಾತು ಹೇಳಲಾಗಿತ್ತು. ಎಫ್ ಸಿ ಐ ನಿಗದಿಪಡಿಸಿರುವ ದರ ನೀಡಿ ಅಕ್ಕಿ ಖರೀದಿಸುವುದಾಗಿ ಹೇಳಿದರೂ, ಸದ್ಯದ ಪರಿಸ್ಥಿತಿಯಲ್ಲಿ ಅಕ್ಕಿ ನೀಡಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ದಿಂದ ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತ 5kg ಅಕ್ಕಿ ನೀಡುವುದು ಯುಪಿಎ ಸರ್ಕಾರದ ಅವಧಿಯ ಯೋಜನೆ:
ಕೇಂದ್ರ ದಿಂದ ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತ 5kg ಅಕ್ಕಿ ನೀಡುವುದು ಯುಪಿಎ ಸರ್ಕಾರದ ಅವಧಿಯ ಯೋಜನೆಯಾಗಿದ್ದು, ಆದರೆ ಈಗಿನ ಬಿಜೆಪಿ ಸರ್ಕಾರ ಅದನ್ನೆ ಪ್ರಚಾರದ ವಸ್ತುವಾಗಿ ಬಳಸುತ್ತಿದೆ. ಆದರೆ ಇದನ್ನು ಯುಪಿಎ ಸರ್ಕಾರವು ತಂದ ಇದನ್ನುಆಹಾರ ಭದ್ರತೆ ಕಾನೂನಿನ ಪಾಲನೆ ಸರಿಯಾಗಿ ಈಗಿನ ಕೇಂದ್ರಸರ್ಕಾರ ಮಾಡುತ್ತಿಲ್ಲ, ಯಾರೇ ಸಿಎಂ ಆಗಿರಲಿ ಪಿಎಂ ಆಗಿರಲಿ ಕಾನೂನು ಪಾಲನೆ ಮಾಡಬೇಕು. ಎಂದು ರಾಜ್ಯ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.