24 C
Bengaluru
Wednesday, January 15, 2025

ಪಕ್ಷಿಗಳ ಸಂತತಿಗಾಗಿ ಮನೆ ನಿರ್ಮಿಸಿದ ಸಹೋದರರು

ಬೆಂಗಳೂರು, ಜೂ. 22 : ಈ ಪ್ರಪಂಚದಲ್ಲಿ ಮನುಷ್ಯರಷ್ಟು ಸ್ವಾರ್ಥಿಗಳು ಮತ್ಯಾರೂ ಇರುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಂದು ಜೀವಿಯೂ ತಾನು ಬದುಕಿ ಇತರರೂ ಬದುಕಲಿ ಎಂದು ಬಯಸುತ್ತಾರೆ. ಆದರೆ, ಮನುಷ್ಯರು ಮಾತ್ರವೇ ಯಾರು ಹೇಗಾದರೂ ಇರಲಿ, ತನ್ನ ಆಸೆಗಳು ನೆರವೇರಿದರೆ ಸಾಕು ಎನ್ನುತ್ತಾರೆ. ಆದರೆ, ಸ್ವಾರ್ಥಿಗಳೇ ತುಂಬಿರುವ ಈ ಜಗತ್ತಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ತಾನಷ್ಟೇ ಅಲ್ಲ ತನ್ನ ಜೊತೆಗೆ ಉಳಿದವರೂ ಬದುಕಲಿ ಎನ್ನುವವರು ಇದ್ದಾರೆ. ಇದಕ್ಕೆ ಬೆಸ್ಟ್‌ ಉದಾಹರಣೆ ಎಂದರೆ ಬರ್ಡ್ಸ್‌ ಟವರ್.

ಹೌದು.. ಈ ಹೆಸರನ್ನು ನೀವು ಕೇಳಿರಬಹುದು. ಪಕ್ಷಿಗಳಿಗಾಗಿ ಈ ಟವರ್‌ ಅನ್ನು ನಿರ್ಮಾಣ ಮಾಡಲಾಗಿದೆ. ಬರ್ಡ್ಸ್‌ ಹೌಸ್‌ ಅಥವಾ ಟವರ್‌ ಎಂದು ಕರೆಯಲಾಗುತ್ತದೆ. ಇದು ಇರುವುದು ಕೂಡ ನಮ್ಮ ಭಾರತದಲ್ಲೇ. ನಶಿಸುತ್ತಿರುವ ಪಕ್ಷಿಗಳಿಗೆ ಗೂಡೊಂದು ಇರಲಿ ಎಂದು ಈ ಟವರ್‌ ಅನ್ನು ನಿರ್ಮಾಣ ಮಾಡಲಾಗಿದೆ. ಎಲ್ಲಾ ಕಾಲಕ್ಕೂ ತಕ್ಕಂತೆ ಪಕ್ಷಿಗಳಿಗೆ ಸಮಸ್ಯೆ ಆಗದಂತೆ ಈ ಟವರ್‌ ಅನ್ನು ನಿರ್ಮಾಣ ಮಾಡಲಾಗಿದೆ. ಸರಿ ಸುಮಾರು 60 ಅಡಿಗಳ ಎತ್ರದಲ್ಲಿ ಈ ಟವರ್‌ ಅನ್ನು ನಿರ್ಮಾಣ ಮಾಡಲಾಗಿದೆ.

 

7 ಅಂತಸ್ತಿನ ಈ ಟವರ್‌ ನಲ್ಲಿ 512 ಫ್ಲಾಟ್ಗಳಿವೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಪರಿಸರ ಪ್ರೇಮಿಗಳು ಸೇರಿ ಈ ಟವರ್‌ ಅನ್ನು ನಿರ್ಮಾಣ ಮಾಡಿದ್ದಾರೆ. ಈ ಟವರ್‌ ನ ಲ್ಲಿ ಪ್ರತಿಯೊಂದು ಕೋಣೆಯನ್ನು ಬಣ್ಣಗಳಿಂದ ಆಕರ್ಷಣೀಯವಾಗಿ ಮಾಡಿದ್ದು, ಇದನ್ನು ನಿರ್ಮಾಣ ಮಾಡಲು 7ಲಕ್ಷ ರೂಪಾಯಿ ಅನ್ನು ವ್ಯಯಿಸಲಾಗಿದೆ. ಇದನ್ನು ನಿರ್ಮಾಣ ಮಾಡಲು ರಾಜಸ್ಥಾನದ ಕುಶಲಕರ್ಮಿಗಳನ್ನು ಕರೆಸಲಾಗಿತ್ತು. 2021 ರಲ್ಲೇ ಇದರ ನಿರ್ಮಾಣವಾಗಿದೆ.

ಅಲಿಗಢ ಜಿಲ್ಲೆಯ ಇಗ್ಲಾಸ್ ಸಮೀಪದ ದುಮೇದಿ ಗ್ರಾಮದ ನಿವಾಸಿಗಳು ಈ ಬರ್ಡ್ಸ್‌ ಟವರ್‌ ಅನ್ನು ನಿರ್ಮಾಣ ಮಾಡಿದ್ದಾರೆ. ದೇವಕಿನಂದನ್ ಶರ್ಮಾ, ರಾಮ್ನಿವಾಸ್ ಶರ್ಮಾ, ರಾಮ್ಹರಿ ಶರ್ಮಾ ಮತ್ತು ಮುನೇಶ್ ಶರ್ಮಾ ಸೇರಿ ಪಕ್ಷಿಗಳ ಸಂತತಿಯನ್ನು ಉಳಿಸಲು ಈ ಉಪಾಯವನ್ನು ಮಾಡಿದ್ದಾರೆ. ದ್ವಾರಕಾ ಪ್ರಸಾದ್ ಮತ್ತು ಶಾಂತಿ ದೇವಿ ಇವರ ಹೆತ್ತವರಾಗಿದ್ದು, ಇವರ ನೆನಪಿನಲ್ಲಿ ಬರ್ಡ್ಸ್‌ ಟವರ್‌ ಅನ್ನು ನಿರ್ಮಾಣ ಮಾಡಿದ್ದಾರೆ.

Related News

spot_img

Revenue Alerts

spot_img

News

spot_img