19.9 C
Bengaluru
Friday, November 22, 2024

ಇನ್ನುಮುಂದೆ ರಾಜ್ಯದ ಎಲ್ಲಾ ಆರಕ್ಷಕ ಠಾಣೆಗಳಲ್ಲಿ ಸಾರ್ವಜನಿಕರಿಗಾಗಿ ಇರಲಿದೆ ಒಂದು ವಿಶೇಷ ಬೋರ್ಡ್! ಈ ಬೋರ್ಡ್ ನ ವಿಶೇಷತೆ ಏನು?

ಬೆಂಗಳೂರು ಜೂನ್ 16:ಕರ್ನಾಟಕ ರಾಜ್ಯದ ಡೈರೆಕ್ಟರ್ ಜೆನರಲ್ & ಇನ್ಸ್ಪೆಕ್ಟರ್ ಜೆನರಲ್ ಆಗಿರುವ ಶ್ರೀ ಡಾ.ಅಲೋಕ್ ಮೋಹನ್ ರವರು ಒಂದು ವಿಭಿನ್ನ ರೀತಿಯಲ್ಲಿ ಜನರಿಗೆ ಸ್ಪಂದಿಸುವ ಸಲುವಾಗಿ ರಾಜ್ಯದ ಎಲ್ಲಾ ಪೋಲೀಸ್ ಸ್ಟೇಷನ್ ಗಳಿಗೆ ಅಂದರೆ ಆರಕ್ಷಕ ಠಾಣೆಗಳಿಗೆ ಒಂದು ಸರ್ಕ್ಯುಲಾರ್ ಒಂದನ್ನು ಕಳಿಸಿದ್ದು ಅದರನ್ವಯ ಎಲ್ಲಾ ಆರಕ್ಷಕ ಠಾಣೆಗಳಲ್ಲಿಯೂ ಸಹ ಕಡ್ಡಾಯವಾಗಿ ಈ ಬೋರ್ಡ್ ಇರಬೇಕೇಂದು ತಿಳಿಸಿದ್ದಾರೆ.

ಈ ಬೋರ್ಡ್ ನ ವಿಶೇಷತೆ ಏನು?
ಈ ಬೋರ್ಡ್ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ, ಹೇಗೆಂದರೆ ಠಾಣೆಯಲ್ಲಿ ಯಾವುದೇ ರೀತಿಯಲ್ಲೂ ಸಹ ಸಾರ್ವಜನಿಕರಿಗೆ ಪೋಲೀಸರು ಸ್ಪಂದಿಸದಿದ್ದರೆ ಹಾಗೂ ನಿಮ್ಮ ಕಂಪ್ಲೈಂಟ್ ಅನ್ನು ಅವರು ಸ್ವೀಕರಿಸದಿದ್ದ ಸಂದರ್ಭದಲ್ಲಿ ಈ ಬೋರ್ಡ್ ತುಂಬಾ ಅನುಕೂಲವಾಗಲಿದೆ, ಇಂತಹ ಸಂದರ್ಭದಲ್ಲಿ ಆ ಬೋರ್ಡ್ ನಲ್ಲಿರುವ ನಂಬರ್ ಗಳಿಗೆ ಕರೆಮಾಡಿ, ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಳ್ಳಬಹುದು.

ಈ ಬೋರ್ಡ್ ನಲ್ಲಿ ಯಾರೆಲ್ಲಾ ನಂಬರ್ ಇರುತ್ತದೆ ಗೊತ್ತಾ?
ಕಮಿಷನರ್ ಮಟ್ಟದ ಕಂಪ್ಲೈಂಟ್ ಗಳಿಗಾಗಿ
1.COP
2.DCPs
3.ACP
ಜಿಲ್ಲಾ ಮಟ್ಟದ ಕಂಪ್ಲೈಂಟ್ ಗಳಿಗಾಗಿ
4.SP
5.Addl.SP
6.Dy.SP

ಮತ್ತೊಂದು ಸೂಚನೆ ಏನೆಂದರೆ ಈ ಎಲ್ಲಾ ವಿವರಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲೂ ಇರಬೇಕು ಮತ್ತು ಬೋರ್ಡ್ ಗಳನ್ನು ಪೋಲೀಸ್ ಠಾಣೆಯ ಪ್ರಮುಖ ಸ್ಥಳಗಳಲ್ಲಿ ದಿನಾಂಕ 20/06/2023 ಒಳಗಾಗಿ ಇರಿಸಬೇಕೆಂದು ಆದೇಶಿಸಿದ್ದಾರೆ. ಮತ್ತು ವಿವರಗಳನ್ನು D.O. ಲೆಟರ್ ನ ಮೂಲಕ D.G &IGP ಅವರಿಗೆ ಕಳುಹಿಸಬೇಕೆಂದು ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img