23.6 C
Bengaluru
Thursday, December 19, 2024

ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ಕಾವೇರಿ-2 ತಂತ್ರಾಂಶ ಮೂಲಕ ಶುಲ್ಕ ಪಾವತಿಸುವಾಗ ಗಮನಿಸಬೇಕಾದ ಮತ್ತು ಅನುಸರಿಸಬೇಕಾದ ಕ್ರಮಗಳು!

ಬೆಂಗಳೂರು ಜೂನ್ 12: ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಉಪನೋಂದಣಾಧಿಕಾರಿಯವರ ಕಛೇರಿಯಲ್ಲಿ ಕಂದಾಯ ಇಲಾಖೆಯ ಬಹು ನಿರೀಕ್ಷಿತ “ಕಾವೇರಿ-2 ತಂತ್ರಾಂಶ ವ್ಯವಸ್ಥೆ”ಯು ಹಂತ ಹಂತವಾಗಿ ಚಾಲನೆ ಪಡೆದುಕೊಳ್ಳುತ್ತಿದೆ.ಆದರೆ ಇತ್ತೀಚಿಗೆ ಸಾಮಾನ್ಯವಾಗಿ ಉಪನೋಂದಣಾಧಿಕಾರಿಗಳ ಕಛೇರಿಗೆ ಬರುವ ಸಾರ್ವಜನಿಕರು ಈ ಕಾವೇರಿ-2 ತಂತ್ರಾಂಶದಲ್ಲಿ ಕೆಲವು ಸಮಸ್ಯೆಗಳನ್ನು ಸಹ ಅನುಭವಿಸುತ್ತಿದ್ದಾರೆ ಅವುಗಳಲ್ಲಿ ಪ್ರಮುಖವಾಗಿ ಶುಲ್ಕಗಳನ್ನು ಪಾವತಿಸುವ ಸಂದರ್ಭದಲ್ಲಿ ಬಹಳಷ್ಟು ಸರ್ವರ್ ಸಮಸ್ಯೆ ಮತ್ತು ಪಾವತಿ ತಡವಾಗುತ್ತಿರುವುದು ಕಂಡುಬರುತ್ತಿದೆ. ಅದಕ್ಕಾಗಿ ಕಂದಾಯ ಇಲಾಖೆಯು ಕಾವೇರಿ-2 ತಂತ್ರಾಂಶ ವ್ಯವಸ್ಥೆಯಲ್ಲಿ ಶುಲ್ಕಗಳನ್ನು ಪಾವತಿಸುವ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದೆ ಅವುಗಳೆಂದರೆ:-


(1)ನೀವು ಬಳಕೆ ಮಾಡುತ್ತಿರುವ ಗಣಕಯಂತ್ರ(ಕಂಪ್ಯೂಟರ್/ಲ್ಯಾಪ್ ಟಾಪ್)ಕ್ಕೆ ಉತ್ತಮವಾದ ಸದೃಢ ಅಂತರ್ಜಾಲ ಸಂಪರ್ಕ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.

(2)ಮೊಬೈಲ್‌ ಹಾಟ್‌ ಸ್ಪಾಟ್‌ ನ ಬಳಕೆ ಮಾಡಿ ಪೇಮೆಂಟ್ ‌ ಪ್ರಕ್ರಿಯೆ ಮಾಡಬೇಡಿ ಪೇಮೆಂಟ್ ‌ ಪ್ರಕ್ರಿಯೆಯ ಸಮಯದಲ್ಲಿ ನಿಮ್ಮ ಮೊಬೈಲ್‌ ಗೆ ಕರೆ ಬಂದಲ್ಲಿ ಹಾಟ್‌ ಸ್ಪಾಟ್‌ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಶುಲ್ಕಗಳನ್ನು ಪಾವತಿ ತಡವಾಗುವ ಸಾಧ್ಯತೆ ಹೆಚ್ಚಿರುತ್ತದೆ.

(3)ಶುಲ್ಕ ಪಾವತಿಗು ಮುನ್ನ ಸಾರ್ವಜನಿಕರು ಬ್ಯಾಂಕ್ ನ ಕೆಲ ನಿಬಂದನೆಗಳ ಬಗ್ಗೆ ಅರಿವಿರಬೇಕು ಅವುಗಳೆಂದರೆ:-
•ಖಾತೆಯಲ್ಲಿ ವಹಿವಾಟಿಗೆ ಬೇಕಾದ ಅವಶ್ಯಕ ಹಣ ಇರುವುದು ಕಡ್ಡಾಯವಾಗಿರುತ್ತದೆ.
•ಬ್ಯಾಂಕ್‌ ನಿಮ್ಮ ಖಾತೆಗೆ ನಿಗದಿಪಡಿಸಿರುವ ವಹಿವಾಟಿನ ನಿರ್ಭಂಧಗಳ ಬಗ್ಗೆ ಅರಿವಿರಬೇಕು.
•ಇಂಟರ್ ‌ ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಋಜುವಾತುಗಳು (user name and passwords) ನಿಮಗೆ ತಿಳಿದಿರಬೇಕು.
•ಹೆಚ್ಚು ಮೊತ್ತದ ಹಣವನ್ನು ಸರ್ಕಾರಕ್ಕೆ ಜಮಾ ಮಾಡುವ ಸಂದರ್ಭದಲ್ಲಿ ನಿಮ್ಮ ಖಾತೆಯ ನಿರ್ಭಂದಗಳನ್ನು ಬ್ಯಾಂಕ್‌ ವ್ಯವಸ್ಥಾಪಕರ ಮೂಲಕ ಅಥವಾ ನಿಮ್ಮ ಇಂಟರ್ ‌ ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸ್ವತ: ಪರಿಷ್ಕರಿಸಿಕೊಳ್ಳಬಹುದು.
•ಬ್ಯಾಂಕ್‌ ನಿಂದ ನೀಡಲಾಗಿರುವ ನಿಮ್ಮ ಡೆಬಿಟ್ ‌ ಕಾರ್ಡ್/ಕ್ರೆಡಿಟ್‌ ಕಾರ್ಡ್‌ ಗಳಲ್ಲಿ ದಿನದ ವಹಿವಾಟಿನ ನಿರ್ಭಂದಗಳಿರುತ್ತವೆ. ನಿಮಗೆ ನೀಡಲಾಗಿರುವ ಕಾರ್ಡ್‌ ನ ನಿರ್ಭಂದಗಳ ವ್ಯಾಪ್ತಿಯಲ್ಲಿ ವಹಿವಾಟಿನ ಮೊತ್ತ ಇದ್ದಲ್ಲಿ ಮಾತ್ರ ಡೆಬಿಟ್ ‌ ಕಾರ್ಡ್/ಕ್ರೆಡಿಟ್‌ ಕಾರ್ಡ್‌ ಗಳನ್ನು ಬಳಕೆ ಮಾಡಬೇಕು.
•ಯುಪಿಐ (BHIM/Gpay/phone pay/ ಇತ್ಯಾದಿ) ವ್ಯವಸ್ಥೆಯಲ್ಲೂ ವಹಿವಾಟಿಗೆ ನಿರ್ಭಂದಗಳಿರುತ್ತವೆ. ಇದು ಬ್ಯಾಂಕ್‌ ನ ಖಾತೆದಾರರ ವಹಿವಾಟಿಗೆ ಅನುಗುಣವಾಗಿ ನಿಗದಿಪಡಿಸಲಾಗಿರುತ್ತದೆ. ಇದನ್ನು ಬ್ಯಾಂಕ್‌ ನ ವ್ಯವಸ್ಥಾಪಕರ ಮೂಲಕ ಪರಿಷ್ಕರಿಸಿಕೊಳ್ಳಬಹುದು.

(4) ಯಾವುದೇ ಸಂದರ್ಭದಲ್ಲಾಗಲಿ ಶುಲ್ಕ ಪಾವತಿಸುವಾಗ ಬ್ರೌಸರ್ ನ ಬ್ಯಾಕ್ ಬಟನ್ ಬಳಸಬೇಡಿ.ನೀವು ಕಾವೇರಿ2.0 ತಂತ್ರಾಂಶ ಮೂಲಕವಾಗಿ ಸರ್ಕಾರಕ್ಕೆ ಹಣ ಸಂದಾಯ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ ನಂತರ ಪ್ರಕ್ರಿಯೆ ಪೂರ್ಣಗೊಳ್ಳುವ ವರೆವಿಗೂ ಬ್ರೌಸರ್ ‌ನ ಬ್ಯಾಕ್‌ ಬಟನ್ ‌ ಬಳಕೆ ಮಾಡಬೇಡಿ ಮತ್ತು ಬ್ರೌಸರ್ ನಿಂದ ಹೊರಬರಬೇಡಿ .

(5) ನೀವು ನೆಟ್‌ ಬ್ಯಾಂಕಿಂಗ್‌ ನ ಮೂಲಕ ಶುಲ್ಕ ಪಾವತಿಸುವಾಗ ಋಜುವಾತು(Username/Password)ಗಳನ್ನು ಸರಿಯಾಗಿ ನಮೂದಿಸಿ.
ಒ.ಟಿ.ಪಿ. ಸರಿಯಾಗಿ ನಮೂದಿಸಿ.
ಒಟಿಪಿ ನಮೂದಿಸುವ ಸಮಯದಲ್ಲಿ ಮೊಬೈಲ್‌ ನಿಮ್ಮ ಸಮೀಪದಲ್ಲೇ ಇರಲಿ.
ಒಟಿಪಿ ಯನ್ನು ನಿಖರವಾಗಿ ನಮೂದಿಸಿ.

ಒಟಿಪಿ ನಮೂದನ್ನು ನಿಗದಿತ ಸಮಯದೊಳಗೆ ನಮೂದಿಸಿ.

(6)ನೀವು Make payment ಬಟನ್ ‌ ಕ್ಲಿಕ್‌ ಮಾಡಿದ ಕೂಡಲೇ “ Something went wrong please try again” ಈ ಮಾಹಿತಿ ಬಂದಲ್ಲಿ ಈ ಮೊದಲು ನೀವು Payment ಮಾಡಲು ವಿಫಲ ಪ್ರಯತ್ನ ನಡೆಸಿರುತ್ತೀರಿ. ಹೀಗಾಗಿ ಖಜಾನೆ ತಂತ್ರಾಂಶದಿಂದ ಹಿಮ್ಮಾಹಿತಿ ಬರುವವರೆವಿಗೂ ನೀವು ಕಾಯಲೇ ಬೇಕಾಗುತ್ತದೆ.

(7)ನೀವು Make payment ಬಟನ್ ‌ ಮಾಡಿದ ನಂತರ ಖಜಾನೆ ತಂತ್ರಾಂಶದ ಮೂಲಕವಾಗಿ ಹಣ ಜಮಾ ಆಗಿಲ್ಲದ ಸಂದರ್ಭಲದಲ್ಲಿ ಬ್ಯಾಂಕ್‌ ವ್ಯವಸ್ಥೆಯಲ್ಲಿ ವಹಿವಾಟು ಪೆಂಡಿಂಗ್ ‌ ಇರುವ ಸಂದರ್ಭದಲ್ಲಿ ಈ ರೀತಿಯ ಮಾಹಿತಿ ಬರುತ್ತದೆ.

(8)“Payment pending at payment gateway “ ನೀವು ಖಜಾನೆಗೆ ಪಾವತಿ ಮಾಡಿದ ಹಣ ಈ ಸ್ಥಿತಿಯಲ್ಲಿ ಇದ್ದಲ್ಲಿ ಬ್ಯಾಂಕ್‌ ನಿಂದ ಖಜಾನೆಗೆ ಮಾಹಿತಿ ಲಭ್ಯವಾಗುವ ವರೆಗೂ ಸುಮಾರು 48 ಘಂಟೆಗಳ ಅವಧಿಯಲ್ಲಿ ಖಜಾನೆ ಅಥವಾ ನಿಮ್ಮ ಖಾತೆ ಹಣ ಹಿಂದಿರುಗಿಸಲಾಗುತ್ತದೆ.

ಈ ಮೇಲ್ಕಂಡ ಮಾಹಿತಿಯನ್ನು ಓದಿ, ನಂತರ ಶುಲ್ಕ ಪಾವತಿ ಮಾಡುವುದರಿಂದ ಕಡಿಮೆ ಸಮಯದಲ್ಲಿ ಹಣ ಪಾವತಿಮಾಡಬಹುದು.

Related News

spot_img

Revenue Alerts

spot_img

News

spot_img