27.6 C
Bengaluru
Saturday, December 21, 2024

ನೀವು ತಾಲ್ಲೂಕು ಅಥವಾ ನಾಡಕಾಚೇರಿಗೆ ಹೋಗಬೇಕಿಲ್ಲ ಮನೆಯಲ್ಲಿಯೇ ಕುಳಿತು ಪಡೆಯಿರಿ ನಿಮ್ಮ ಆರ್.ಟಿ.ಸಿ ಹಾಗೂ ಎಂಆರ್

ಭೂಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ಭೂದಾಖಲೆಗಳ ನಿರ್ವಹಣೆಯ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ಯಡಿಯಲ್ಲಿ, ಎಲ್ಲಾ ಕೈಬರಹದ ಪಹಣಿಗಳನ್ನು ಡಾಟಾ ನಮೂದಿಸುವ ಮುಖಾಂತರ ಗಣಕೀಕರಣಗೊಳಿಸಿ ಗಣಕೀಕೃತ ಪಹಣಿಗಳನ್ನು ಕಿಯಾಸ್ಕ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಪ್ರಾರಂಭಿಸಲಾಯಿತು. ಭೂದಾಖಲೆಗಳ ದತ್ತಾಂಶವನ್ನು ಉಪಯೋಗಿಸಿ ಪಹಣಿ ಯಲ್ಲಾಗುವ ಮಾಲೀಕತ್ವ ಬದಲಾವಣೆ ಅಥವಾ ಇನ್ಯಾವುದೇ ಬದಲಾವಣೆಗಳನ್ನು ಕೆ ಎಲ್ ಆರ್ ಕಾಯ್ದೆ ಪ್ರಕಾರ ಮ್ಯುಟೇಶನ್ ಮುಖಾಂತರ ನಿರ್ವಹಿಸಲು ಸಹಾ ಪ್ರಾರಂಭಿಸಲಾಯಿತು. ಇದಕ್ಕಾಗಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಭೂಮಿ ಬ್ಯಾಕ್ ಆಫೀಸ್ ಗಳನ್ನು ಸ್ಥಾಪಿಸಲಾಗಿದೆ.ಪ್ರತಿಯೊಂದು ಬ್ಯಾಕ್ ಆಫೀಸ್ ನಲ್ಲಿ ಎಲ್ ಆರ್ ಕಿಯಾಸ್ಕ್ ಹಾಗೂ ಅರ್ಜಿ ಕಿಯಾಸ್ಕ್ ಕೌಂಟರ್ ಗಳನ್ನು ಸಹ ಸ್ಥಾಪಿಸಲಾಗಿದೆ.

ಪಹಣಿ ಆನ್ ಲೈನ್ ಎಂಬುದು ಅಂತರ್ಜಾಲದ ಮುಖಾಂತರವಾಗಿ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಯಾದರೂ ಸಹ ಮೂಲ ಆರ್ ಟಿ ಸಿ ಯನ್ನು ಪಡೆಯುವ ಸೌಕರ್ಯವಾಗಿರುತ್ತದೆ. ಸಾರ್ವಜನಿಕರು ರೂ.10 ನ್ನು ಆನ್ ಲೈನ್ ನಲ್ಲಿ ಪಾವತಿಸಿ ಎಲ್ಲಿಂದಲಾದರೂ ಆರ್ ಟಿ ಸಿಯನ್ನು ಪಡೆಯಬಹುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ , ಇದು ಕರ್ನಾಟಕ ಸರ್ಕಾರವು ಆರಂಭಿಸಿರುವ ಒಂದು ವಿಶಿಷ್ಟ ವ್ಯವಸ್ಥೆಯಗಿದೆ.

ಆರ್.ಟಿ.ಸಿ ವಾಲೆಟ್, ಯಾವುದೇ ಸ್ಥಳೀಯ ವಾಣಿಜ್ಯೋದ್ಯಮಿಯು ಕಂದಾಯ ಇಲಾಖೆಯೊಂದಿಗೆ ಆನ್ ಲೈನ್ ಖಾತೆಯನ್ನು ತೆರೆಯಲು ಮತ್ತು ಆರ್.ಟಿ.ಸಿ ವ್ಯಾಲೆಟ್ನಲ್ಲಿ ಸುಮಾರು 1000ರೂಪಾಯಿ ಠೇವಣಿ ಯನ್ನು ಇರಿಸಿ ಮತ್ತು ಠೇವಣಿ ಹಣ ಬಳಸಿ ಒಂದು ಆರ್.ಟಿ.ಸಿ ಗೆ 10 ರೂಪಾಯಿಗಳಂತೆ ಆರ್ ಟಿ ಸಿ ಯನ್ನುಮುದ್ರಿಸಿ ವಿತರಿಸಲು ಆರ್.ಟಿ.ಸಿ ವಾಲೆಟ್ ವ್ಯವಸ್ಥೆಯು ಅವಕಾಶ ನೀಡುತ್ತದೆ. ಸ್ಥಳೀಯ ಉದ್ಯಮಿಗಳು ಯಾವುದೇ ಸಮಯದಲ್ಲಿ ಸುಮಾರು 1000 ರೂಪಾಯಿವರೆಗೆ ಹಣವನ್ನು ಠೇವಣಿ ನವೀಕರಿಸಿ ಆರ್.ಟಿ.ಸಿ ಗಳನ್ನು ವಿತರಿಸಲಾಗುತ್ತಿದೆ. ಅದಕ್ಕಾಗಿ ಸಾರ್ವಜನಿಕರು ಸರ್ಕಾರದ ಅಧಿಕೃತ ವೆಬ್ ಸೈಟ್ಗಳ ಲಿಂಕ್ ಗಳನ್ನು ಬಳಸಿಕೊಂಡು ಪಡೆದುಕೊಳ್ಳಬಹುದಾಗಿದೆ.
https://landrecords.karnataka.gov.in ಬಳಸಿ ಹಾಗೆಯೇ https://rtc.karnataka.gov.in/ ಅನ್ನು ಬಳಸಿಕೊಂಡು ನಿಮ್ಮ ಆರ್ ಟಿಸಿ ಹಾಗೂ ಪಹಣಿ ಸೇರಿದಂತೆ ನಿಮ್ಮ ಭೂ ದಾಖಲೆಗಳು ಪಡೆದುಕೊಳ್ಳಬಹುದಾಗಿದೆ.

Related News

spot_img

Revenue Alerts

spot_img

News

spot_img