24.2 C
Bengaluru
Sunday, December 22, 2024

ನೀವು ಎಫ್‌ಡಿ ನಲ್ಲಿ ಹಣ ಇಟ್ಟಿದ್ದೀರಾ..? ಹಾಗಾದರೆ ಮೊದಲು 15H, 15G ಫಾರ್ಮ್ ಅನ್ನು ಭರ್ತಿ ಮಾಡಿ

ಬೆಂಗಳೂರು, ಜೂ. 06 : ಉಳಿತಾಯದ ಹಣವನ್ನು ಮನೆಯಲ್ಲಿ ಇಡುವುದು ಅಥವಾ ಇನ್ಯಾವುದರಲ್ಲಾದರೂ ಹೂಡಿಕೆ ಮಾಡಿ ಕಳೆದುಕೊಳ್ಳುವ ಬದಲು ನಂಬಿಕಾರ್ಹ ಬ್ಯಾಂಕ್‌ ನಲ್ಲಿ ಠೇವಣಿ ಮಾಡುವುದೇ ಬೆಸ್ಟ್‌ ಎನಿಸುತ್ತದೆ. ಯಾಕೆಂದರೆ, ಎಫ್‌ಡಿ ನಲ್ಲಿ ಹಣವನ್ನು ಇಟ್ಟಾಗ ಬಡ್ಡಿಯೂ ಬರುತ್ತದೆ. ಹಣಕ್ಕೆ ಸುರಕ್ಷತೆಯೂ ಇರುತ್ತದೆ. ನೀವು ಏನಾದರು ಸ್ಥಿರ ಠೇವಣಿ ಮಾಡಿದ್ದರೆ, ಮೊದಲು ನೀವು 15H ಮತ್ತು 15G ಫಾರ್ಮ್‌ ಗಳನ್ನು ಭರ್ತಿ ಮಾಡಬೇಕು. ಅಷ್ಟಕ್ಕೂ 15H ಮತ್ತು 15G ಫಾರ್ಮ್‌ ಎಂದರೇನು ಎಂಬ ಬಗ್ಗೆ ಮಾಹಿತಿಯನ್ನುತಿಳಿಯಿರಿ

ಹಿರಿಯ ನಾಗರಿಕರಿಗೆ ವಾರ್ಷಿಕ ಬಡ್ಡಿ ಆದಾಯ 50,000 ಸಾವಿರಕ್ಕಿಂತಲೂ ಅಧಿಕ ಮೊತ್ತ ಬರುತ್ತಿದ್ದರೆ, ಅಂತಹವರು ತಪ್ಪದೇ ತಮ್ಮ ಎಫ್‌ಡಿಗೆ 15G ಫಾರ್ಮ್‌ ಅನ್ನು ಭರ್ತಿ ಮಾಡಬೇಕು. ಇಲ್ಲದೇ ಹೋದಲ್ಲಿ ನಿಮ್ಮ ಬಡ್ಡಿಯ ಮೊತ್ತಕ್ಕೆ ಟಿಡಿಎಸ್‌ ಕಡಿತಗೊಳ್ಳುತ್ತದೆ. ಇನ್ನು ಸಾಮಾನ್ಯ ನಾಗರಿಕರು ಎಫ್‌ಡಿ ಮೇಲೆ ವಾರ್ಷಿಕವಾಗಿ 40,000ಕ್ಕೂ ಅಧಿಕ ಬಡ್ಡಿ ಹಣವನ್ನು ಪಡೆಯುತ್ತಿದ್ದರೆ, 15H ಫಾರ್ಮ್‌ ಅನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ, ಇವರಿಗೂ ಕೂಡ ಟಿಡಿಎಸ್‌ ಕಟ್‌ ಆಗುತ್ತದೆ.

ಇನ್ನು ಈ ಫಾರ್ಮ್‌ ಅನ್ನು ಭರ್ತಿ ಮಾಡುವಾಗ ಕೆಲವು ಷರತ್ತುಗಳ ಆಧಾರದ ಮೇಲೆ ಮಾತ್ರ ಭರ್ತಿ ಮಾಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಇಲ್ಲದೇ ಹೋದಲ್ಲಿ ನಿಮ್ಮ ಬಡ್ಡಿಯ ಹಣಕ್ಕೆ ಟಿಡಿಎಸ್‌ ಕಟ್‌ ಆಗುತ್ತದೆ. ಫಾರ್ಮ್‌ ಭರ್ತಿ ಮಾಡದಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ ನಲ್ಲಿ ಮೌಲ್ಯಮಾಪನ ಮಾಡುವಾಗ ಟಿಡಿಎಸ್ ಅನ್ನು ಕ್ಲೈಮ್ ಮಾಡಬಹುದು.‌ ಆಗ ನಿಮ್ಮ ಹಣವನ್ನು ಹಿಂಪಡೆಯಬಹುದು. ಈ ಫಾರ್ಮ್ ಅನ್ನ ನೀವು ಪ್ರತೀ ವರ್ಷವೂ ಭರ್ತಿ ಮಾಡಬೇಕು.

Related News

spot_img

Revenue Alerts

spot_img

News

spot_img