27.6 C
Bengaluru
Saturday, December 21, 2024

ನಿಮ್ಮ ವಯಸ್ಸು 20 – 30 ರ ಆಸುಪಾಸಿನಲ್ಲಿದ್ಯಾ..? ಹಾಗಾದರೆ, ಮಿಸ್‌ ಮಾಡದೇ ಈ ಕೆಲಸವನ್ನು ಮಾಡಿ..

ಬೆಂಗಳೂರು, ಜೂ . 05 : ನಿಮಗೆ ಈಗ 20 ರಿಂದ 30 ವರ್ಷವಾಗಿದ್ದರೆ, ನೀವು ಈಗಷ್ಟೇ ದುಡಿಯಲು ಪ್ರಾರಂಬಿಸಿದ್ದರೆ, ಮಾಡಬೇಕಿರುವ ಮೊದಲ ಕೆಲಸವೇ ನಿಮ್ಮ ಹಣವನ್ನು ಹೂಡಿಕೆ ಮಾಡುವುದು. ಈಗಷ್ಟೇ ದುಡಿಯಲು ಆರಂಭಿಸಿದವರಿಗೆ ಹಣವನ್ನು ಹೇಗೆ ಮ್ಯಾನೇಜ್‌ ಮಾಡಬೇಕು ಎಂಬುದು ತಿಳಿಯುವುದಿಲ್ಲ. ಕೆಲವೊಮ್ಮೆ ಅನಗತ್ಯವಾದ ವಿಚಾರಗಳಿಗೆ ಹಣವನ್ನು ವ್ಯಯಿಸುತ್ತಾರೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಅಗತ್ಯವಿರುತ್ತದೆ.

ಹಾಗಾಗಿ ಈಗಷ್ಟೇ ದುಡಿಮೆ ಆರಂಭಿಸಿರುವವರು ಹಾಗೂ ಇನ್ನು 30 ವರ್ಷ ದಾಟದವರು ಕೆಲವೊಂದರಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುವುದರಿಂದ ದುಡಿಮೆ ಸಾಕು ಎನ್ನಿಸುವಷ್ಟರಲ್ಲಿ ನಿಮ್ಮ ಉಳಿತಾಯದ ಹಣವೂ ಡಬಲ್‌ ಆಗಿರುತ್ತದೆ. ಕಷ್ಟ ಎಂದು ಬಂದಾಗ ಸಾಲ ಮಾಡುವ ಬದಲು ನಿಮ್ಮ ಉಳಿತಾಯದ ಹಣವನ್ನೇ ಬಳಸಿಕೊಳ್ಳಬಹುದು. ಹಾಗಾದರೆ, ಎಲ್ಲೆಲ್ಲಿ ಹಣವನ್ನು ಹೂಡಿಕೆ ಮಾಡಿದರೆ, 5 ರಿಂದ 10 ವರ್ಷದೊಳಗೆ ನಿಮ್ಮ ನಹಣ ಡಬಲ್‌ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

 

ನಿಮ್ಮ ಬಳಿ ಒಂದು ಲಕ್ಷ ಹಣವಿದೆ ಎಂದಾದರೆ ಅದರಲ್ಲಿ ಶೇ. 70 ರಷ್ಟು ಹಣವನ್ನು ಮ್ಯೂಚುವಲ್‌ ಫಂಡ್‌ ಅಥವಾ ಯಾವುದಾದರೂ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಉಳಿದ ಹಣದಲ್ಲಿ ಶೇ. 10 ರಷ್ಟು ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿ. ಶೇ. 10 ರಷ್ಟುಹಣವನ್ನು ಬಾಂಡ್‌ ಗಳ ಮೇಲೆ ಇನ್ವೆಸ್ಟ್‌ ಮಾಡಿ. ಇನ್ನು ಕೊನೆಯದಾಗಿ ಉಳಿಯುವ ಶೇ. 10 ರಷ್ಟು ಹಣವನ್ನು ಯಾವುದರಲ್ಲೂ ಹೂಡಿಕೆ ಮಾಡದೇ, ನಿಮ್ಮ ತುರ್ತು ಪರೀಸ್ಥಿತಿಗಾಗಿ ತೆಗೆದಿಡಿ.

ಮ್ಯೂಚುವಲ್‌ ಫಂಡ್‌ ನಲ್ಲಿ ಹಣ ಹೂಡುವಾಗ ನಿಮ್ಮ ಆರ್ಥಿಕ ತಜ್ಞರನ್ನು ಭೇಟಿ ಮಾಡಿ. ಪೋಸ್ಟ್‌ ಆಫೀಸ್‌, ಬ್ಯಾಂಕ್‌, ವಿಮಾ ಯೋಜನೆಗಳಲ್ಲೂ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಅಂಚೆ ಕಚೇರಿಯಲ್ಲಿ 10 ರಿಂದ 20 ವರ್ಷದಲ್ಲಿ ಡಬಲ್‌ ಆಗುವಂತಹ ಕೆಲ ಯೋಜನೆಗಳು ಇವೆ. ಇದರ ಬಗ್ಗೆ ಮಾಹಿತಿ ಪಡೆದು, ನಿಮ್ಮ ಸಂಬಳ, ತಿಂಗಳ ಖರ್ಚು-ವೆಚ್ಚಗಳ ಬಗ್ಗೆ ಆದಷ್ಟು ಲೆಕ್ಕಾಚಾರ ಮಾಡಿ ಹಣವನ್ನು ಉಳಿತಾಯ ಮಾಡಿರಿ. ಇದು ನಿಮಗೆ ಭವಿಷ್ಯದಲ್ಲಿ ಉತ್ತಮವಾದ ರಿಟರ್ನ್ಸ್‌ ಗಳನ್ನು ನೀಡುತ್ತದೆ.

Related News

spot_img

Revenue Alerts

spot_img

News

spot_img