24.2 C
Bengaluru
Sunday, December 22, 2024

ಮನೆ ನವೀಕರಣಕ್ಕೆ ಯಾವ ರೀತಿ ಸಾಲ ಪಡೆಯುವುದು ಎಂಬ ಗೊಂದಲವಿದ್ದರೆ ಹೀಗೆ ಮಾಡಿ..

ಬೆಂಗಳೂರು, ಮೇ. 30 : ನಿವೇಶನ ಖರೀದಿಸಲು, ಕಾರು ಖರಿದಿಗೆ, ಮನೆ ನಿರ್ಮಾಣಕ್ಕೆ ಸೇರಿದಂತೆ ಬ್ಯಾಂಕ್‌ ಗಳು ಈಗ ಹಲವು ಕಾರ್ಯಗಳಿಗೆ ಬ್ಯಾಂಕ್‌ ಗಳು ಸಾಲವನ್ನು ನೀಡುತ್ತವೆ. ಆದರೆ ಮನೆ ನವೀಕರಣ ಮಾಡಿಸಬೇಕು ಎಂದರೆ ಸಾಲ ಪಡೆಯುವುದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಮನೆಯನ್ನು ನವೀಕರಣ ಮಾಡಲು ಕೈನಲ್ಲಿ ಹಣವಿಲ್ಲದೇ ಹೋದರೆ, ಬ್ಯಾಂಕ್‌ ನಲ್ಲಿ ವಯಕ್ತಿಕ ಸಾಲವನ್ನು ಪಡೆಯಬೇಕು ಎಂಬ ಕಾರಣಕ್ಕೆ ಸುಮ್ಮನಾಗಿ ಬಿಡುತ್ತಾರೆ. ಆದರೆ, ನೀವು ಮನೆ ನವೀಕರಣಕ್ಕೂ ಸಾಲವನ್ನು ಪಡೆಯಬಹುದಾಗಿದೆ.

ಹೌದು ಬ್ಯಾಂಕ್‌ ಗಳಲ್ಲಿ ಮನೆ ರಿನೋವೇಶನ್‌ ಮಾಡಿಸಲು ಸಾಲವನ್ನು ನೀಡಲಾಗುತ್ತದೆ. ಗೃಹ ಈಕ್ವಿಟಿ ಸಾಲವನ್ನು ಪಡೆದು ಮನೆ ನವೀಕರಣವನ್ನು ಮಾಡಬಹುದು. ಇದಕ್ಕೆ ನೀವು ನಿಮ್ಮ ಮನೆಯನ್ನು ಬ್ಯಾಂಕ್‌ ನಲ್ಲಿ ಅಡಮಾನವಾಗಿ ಇಡಬೇಕಾಗುತ್ತದೆ. ಇದರಿಂದ ನಿಮಗೆ ದೊಡ್ಡ ಮೊತ್ತದ ಹಣವು ಲಭಿಸುತ್ತದೆ. ಈ ಸಾಲಕ್ಕೆ ಬಡ್ಡಿಯೂ ಕಡಿಮೆ ಇರಲಿದ್ದು, 5ರಿಂದ 15 ವರ್ಷಗಳ ಒಳಗೆ ಸಾಲ ಮರುಪಾವತಿಗೆ ಅವಕಾಶವಿರುತ್ತದೆ.

ಇನ್ನು ಎರಡನೇಯದಾಗಿ ಹೇಳುವುದಾದರೆ, ಗೃಹ ಈಕ್ವಿಟಿ ಲೈನ್ ಆಫ್ ಕ್ರೆಡಿಟ್ ಸಾಲ. ಹೀಗೆಂದರೆ, ಮನೆ ನವೀಕರಣ ಮಾಡುವವರಿಗೆ ಸಾಮಾನ್ಯವಾಗಿ ಸಿಗುವ ಸಾಲವಿದು. ಈ ಸಾಲವನ್ನು ಮನೆಯಲ್ಲಿ ನಿಮ್ಮ ಪಾಲು ಎಷ್ಟಿದೆ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ. ಈಗಾಗಲೇ ಮನೆಯ ಮೇಲಿರುವ ಸಾಲ ಹಾಗೂ ಮಾರುಕಟ್ಟೆಯಲ್ಲಿ ಮನೆಗಿರುವ ಬೆಲೆಯ ನಡುವಿನಲ್ಲಿ ಬಾಕಿ ಉಳಿಯುವ ಹಣವನ್ನು ಮಾತ್ರವೇ ಪಡೆಯಬಹುದು. ಇದನ್ನು ಮುರುಪಾವತಿಸಲು 5 ವರ್ಷದಿಂದ 25 ವರ್ಷಗಳ ಕಾಲಾವಕಾಶ ಇರುತ್ತದೆ.

ಇನ್ನು ನಿರ್ಮಾಣ ಸಾಲ ಎಂದು ಮನೆ ರಿನೋವೇಶನ್‌ ಮಾಡಲು ಬ್ಯಾಮಕ್‌ ಗಳು ಸಾಲ ನೀಡುತ್ತವೆ. ಆದರೆ, ಈ ಸಾಲದ ಅವಧಿ ಕಡಿಮೆ ಇರಲಿದ್ದು, ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಇಲ್ಲದೇ ಹೋದಲ್ಲಿ ವಯಕ್ತಿಕ ಸಾಲವನ್ನು ಕೂಡ ಪಡೆಯಬಹುದು. ಇದಕ್ಕೂ ಬಡ್ಡಿ ಅಧಿಕವಾಗಿರಲಿದ್ದು, ಗರಿಷ್ಠ 7 ವರ್ಷಗಳ ಕಾಲ ಸಮಯ ನೀಡಲಾಗುತ್ತದೆ.

ಇನ್ನು ಕೊನೆಯದಾಗಿ ಎಫ್ ಎಚ್ ಎ 203 (ಕೆ) ಸಾಲವನ್ನು ಪಡೆಯಲು ಅವಕಾಶವಿದೆ. ಈ ಸಾಲದ ಮೂಲಕ ಮನೆ ನವೀಕರಣವನ್ನು ಮಾಡಬಹುದು. ಇದಕ್ಕೆ ಸರ್ಕಾರದ ಬೆಂಬಲವಿರಲಿದ್ದು, ಕೆಲ ಮಾನದಂಡಗಳ ಮೇಲೆ ಸಾಲನ್ನು ಪಡೆಯಬಹುದು. ಜೊತೆಗೆ 15ರಿಂದ 30 ವರ್ಷಗಳ ಕಾಲ ಮರುಪಾವತಿಗೆ ಸಮಯಾವಕಾಶ ಸಿಗುತ್ತದೆ.

Related News

spot_img

Revenue Alerts

spot_img

News

spot_img