ಬೆಂಗಳೂರು, ಮೇ. 30 : ಶೇ. 100 ರಷ್ಟು ವಾಸ್ತು ಮನೆಯನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಇದರಿಂದ ಸಮಸ್ಯೆಗಳು ಕೂಡ ಆಗುತ್ತವೆ. ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ ಅಂದರೆ ಪರ್ಫೆಕ್ಟ್ ಆಗಿ ವಾಸ್ತುಯಿಂದ ಮನೆಯನ್ನು ಕಟ್ಟುವುದು ಸಾಧ್ಯವಿಲ್ಲ. ಮನೆ ನಿರ್ಮಾಣ ಮಾಡುವಾಗ ಎಷ್ಟೇ ಲೆಕ್ಕಾಚಾರ ಹಾಕಿ ಪ್ಲಾನ್ ಮಾಡಿದರೂ ಕೂಡ ಎಲ್ಲಾದರೂ ಒಂದು ಮಿಸ್ಟೇಕ್ ಗಳು ಖಂಡಿತವಾಗಿಯೂ ಆಗಿರುತ್ತದೆ. ಹೀಗಾಗಿ ಯಾವುದೇ ಮನೆ, ಅಪಾರ್ಟ್ ಮೆಂಟ್, ಕಟ್ಟಡವನ್ನು ಪರಿಪೂರ್ಣ ವಾಸ್ತುವಿನಿಂದ ನಿರ್ಮಾಣ ಮಾಡಲು ಸಾಧ್ಯವಿಲ್ಲ.
ಹಾಗೊಂದು ವೇಳೆ ಪರಿಪೂರ್ಣವಾಗಿ ವಾಸ್ತು ದೋಷವಿಲ್ಲದೇ ಮನೆಯನ್ನು ಕಟ್ಟಬೇಕು ಎಂದರೂ, ಮನೆಯ ಯಜಮಾನನ ಪೂರ್ವ ಕರ್ಮಗಳ ಕಾರಣದಿಂದ ಸಾಧ್ಯವಾಗುವುದಿಲ್ಲ. ಮನೆಯನ್ನು ಕಟ್ಟುವಾಗ ವಾಸ್ತುವನ್ನು ಮನೆಗೆ ತರಲು ಯತ್ನಿಸಿದರೂ ಪ್ಲಾನ್ ಮಾಡುವಾಗ ಹೆಚ್ಚು ಕಡಿಮೆ ಆಗೇ ಆಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಒಬ್ಬೊಬ್ಬರ ಅಭಿಪ್ರಾಯಗಳು ಬೇರೆ ಬೇರೆ ಆಗಿರುತ್ತದೆ. ಇದು ಕರ್ಮದ ಋಣದಲ್ಲಿರುವ ಕಾರಣ ಶೇ. 90 ರಷ್ಟು ಮನೆಯನ್ನು ವಾಸ್ತು ಪ್ರಕಾರವಾಗಿ ಕಟ್ಟುವುದೇ ಹೆಚ್ಚು.
ಇನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನ ನಿವೇಶನವಿದ್ದರೆ, ಮನೆಯಿಂದ ಹೊರ ಹಾಕುವ ಸೀವೇಜ್ ನೀರನ್ನು ಈಸ್ಟ್ ಆಫ್ ನಾರ್ತ್ ಹರಿಯಬೇಕು ಎಂದು ಇರುತ್ತದೆ. ಅದನ್ನು ನಾವು ಮಾಡಲು ಸಾಧ್ಯವಾಗದಿದ್ದಾಗ ಶೇ. 100 ರಷ್ಟು ಮನೆಯನ್ನು ವಾಸ್ತು ಪ್ರಕಾರವನ್ನು ಕಟ್ಟಲು ಸಾಧ್ಯವಿರುವುದಿಲ್ಲ. ಈಗ ಮನೆಯನ್ನು ಕಟ್ಟಲು ಬಿಲ್ಡರ್ ಗಳಿಗೆ ವಹಿಸಲಾಗುತ್ತದೆ. ಅವರು ಮನೆಯನ್ನು ನಿರ್ಮಾಣ ಮಾಡುವಾಗ ಕಿಟಕಿಯನ್ನು ಕಟ್ಟುವಾಗ ಕೊಟ್ಟಿರುವ ಜಾಗದಲ್ಲಿ ಆಗುವುದಿಲ್ಲ ಎಂದು ಪಕ್ಕದಲ್ಲಿ ಕಟ್ಟಿದಾಗ ವಾಸ್ತು ನಿಯಮಗಳನ್ನು ಮುರಿದಂತೆ ಆಗುತ್ತದೆ.
ಹಾಗಾಗಿ ಮನೆಯನ್ನು ಕಟ್ಟುವಾಗ ಯಾವುದೇ ಕಾರಣಕ್ಕೂ ನೂರರಷ್ಟು ಕಟ್ಟಲು ಸಾಧ್ಯವೇ ಇಲ್ಲ. ಮನೆಯನ್ನು ಎಷ್ಟೇ ವಾಸ್ತು ನೋಡಿ ಕಟ್ಟಿದರೂ ಕೂಡ ಮನೆಗೆ ಬಂದವರು ಕೂಡ. ಇದು ಸರಿಯಿಲ್ಲ. ಹಗೆ ಕಟ್ಟಬೇಕಿತ್ತು ಎಂದು ಹೇಳುತ್ತಾರೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ವಾಸ್ತು ಪ್ರಕಾರ 100% ಕಟ್ಟಲು ಸಾಧ್ಯವಿಲ್ಲ.