26.7 C
Bengaluru
Sunday, December 22, 2024

ನೋಂದಣಿ ಮತ್ತು ಮುದ್ರಾಂಕ: 15000 ಕೋಟಿ ರೆವಿನ್ಯೂ ಕಲೆಕ್ಷನ್ ಟಾರ್ಗೆಟ್!

 

ರಾಜ್ಯ ಸರ್ಕಾರಕ್ಕೆ ಮೂರನೇ ಅತಿದೊಡ್ಡ ಅದಾಯ ತಂದು ಕೊಡುವ ಇಲಾಖೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇವೆ! ಕಳೆದ ವರ್ಷ ಟಾರ್ಗೆಟ್ ಮೀರಿ ಎರಡು ಸಾವಿರ ಕೋಟಿ ರೂಪಾಯಿ ಅಧಿಕ ರಾಜಸ್ವ ಸಂಗ್ರಹ ಮಾಡಲಾಗಿತ್ತು. 2022 – 2023 ನೇ ಸಾಲಿನಲ್ಲಿ 15 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿದ್ದು, ಏಪ್ರಿಲ್ ಒಂದರಿಂದ ಆ. 19 ರ ವೇಳೆಗೆ 6 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ರಾಜ್ಯದಲ್ಲಿ ಕೊರೊನಾ ಇದ್ದರೂ ಸಹ ಆಸ್ತಿ ನೋಂದಣಿ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಕಳೆದ ವರ್ಷ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನಿರೀಕ್ಷೆಗೂ ಮೀರಿ ರಾಜಸ್ವ ಸಂಗ್ರಹ ಮಾಡಲಾಗಿದೆ. 2020 ರಿಂದ 2021- 22 ರ ವರೆಗೂ ಕೊರೊನಾ ಸೋಂಕು ವಕ್ಕರಿಸಿತ್ತು. ಹೀಗಾಗಿ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇಷ್ಟಾಗಿಯೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಾಖಲೆ ಬರೆದಿದೆ. ಕಳೆದ ವರ್ಷ 12, 655 ಕೋಟಿ ರೂಪಾಯಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿತ್ತು. ಆದ್ರೆ, ಕೊರೊನಾ ಮಧ್ಯದಲ್ಲಿಯೂ 15,000 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹವಾಗಿದೆ.

ಪ್ರಕಸ್ತ ಸಾಲಿನ 2022 ಏಪ್ರಿಲ್ ನಿಂದ 2023 ಮಾರ್ಚ್ 31 ರ ವರೆಗೆ 15,000 ಕೋಟಿ ರೂ. ರೆವೆನ್ಯೂ ಸಂಗ್ರಹ ಗುರಿ ನೀಡಲಾಗಿದೆ. ಆದರೆ, ಏಪ್ರಿಲ್ ರಿಂದ ಆ. 19 ರ ಅವಧಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಮುಂದಿನ ಏಳು ತಿಂಗಳ ಅವಧಿಯಲ್ಲಿ 9 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳು ರೆವೆನ್ಯೂ ಫ್ಯಾಕ್ಟ್ಸ್ ಗೆ ತಿಳಿಸಿದ್ದಾರೆ.

ಹೆಚ್ಚು ತೆರಿಗೆ ನೀಡುವ ಮೂರು ಇಲಾಖೆಗಳು:
ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುವ ಇಲಾಖೆಗಳು ಮೂರು ಇವೆ. ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಇಲಾಖೆ ವಾಣಿಜ್ಯ ತೆರಿಗೆ ಇಲಾಖೆ. ವಾರ್ಷಿಕ 45 ಸಾವಿರ ಕೋಟಿ ಆದಯ ಹರಿದು ಬರುತ್ತದೆ. ಎರಡನೇ ಅತಿ ಹೆಚ್ಚು ಆದಾಯ ಬರುವುದು ಅಬಕಾರಿ ಇಲಾಖೆಯಿಂದ. ವಾರ್ಷಿಕ 16 ಸಾವಿರ ಕೋಟಿ ರೂ. ನಿಂದ 20 ಸಾವಿರ ಕೋಟಿ ರೂ. ವರೆಗೂ ಹರಿದು ಬರುತ್ತದೆ. ಮೂರನೇ ಅತಿ ಹೆಚ್ಚು ಆದಾಯ ಬರುವುದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಯಿಂದ. ರಾಜ್ಯದಲ್ಲಿ ಕಳೆದ ವರ್ಷ 14 ಸಾವಿರ ಕೋಟಿ ರೂ. ಆದಾಯ ಹರಿದು ಬಂದಿದೆ.

ರಾಜ್ಯದಲ್ಲಿ ನೋಂದಣಿ ಮುದ್ರಾಂಕ ಇಲಾಖೆಯಲ್ಲಿ 300 ಕ್ಕಿಂತಲೂ ಹೆಚ್ಚು ಉಪ ನೋಂದಣಾಧಿಕಾರಿಗಳ ಕಚೇರಿಗಳಿವೆ. ಬೆಂಗಳೂರಿನಲ್ಲಿ ಒಟ್ಟು 43 ಉಪ ನೋಂದಣಾಧಿಕಾರಿಗಳ ಕಚೇರಿಗಳು ಇವೆ. ಅದರಲ್ಲಿ ಶೇ. 65 ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಬೆಂಗಳೂರಿನಲ್ಲಿಯೇ ಸಂಗ್ರಹವಾಗುತ್ತದೆ.

Related News

spot_img

Revenue Alerts

spot_img

News

spot_img