ಬೆಂಗಳೂರು, ಮೇ. 16 : ಮನೆಯ ವಾಸ್ತುವಿನಲ್ಲಿ ಸಮಸ್ಯೆ ಇದ್ದರೆ, ಇದರಿಂದ ಖಂಡಿತವಾಗಿಯೂ ಆರೋಗ್ಯ ತೊಂದರೆಗಳು ಉಂಟಾಗುತ್ತದೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನವನ್ನು ಡಾ.ರೇವತಿ ವೀ ಕುಮಾರ್ ಅವರು ನಡೆಸಿದ್ದಾರೆ. ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡುತ್ತಿರುವ ಇವರು ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿದ್ದಾರೆ. ಮನೆಯ ವಾಸ್ತು ಸಮಸ್ಯೆ ಇದ್ದರೆ, ಅಲ್ಲಿ ಆರೋಗ್ಯ ತೊಂದರೆಗಳು ಇರುತ್ತವೆ ಎಂಬ ಬಗ್ಗೆ ಥಿಸೀಸ್ ಮಾಡಿದ್ದಾರೆ. ಇದೀಗ ಈ ಬಗ್ಗೆ ರೆವೆನ್ಯೂಫ್ಯಾಕ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ವಿವರಣೆ ನೀಡಿದ್ದಾರೆ.
ವಾಸ್ತು ದೋಷಗಳು ಮನುಷ್ಯನಿಗೆ ಆರೋಗ್ಯ ಸಂಬಂಧಿ ತೊಂದರೆಗಳನ್ನು ನೀಡುತ್ತದೆ. ಹಾಗೆಯೇ ಮನೆಯ ಒಂದೊಂದು ದಿಕ್ಕು ಕೂಡ ಒಬ್ಬರಿಗೆ ಮೀಸಲಿರುತ್ತದೆ. ಪೂರ್ವ ದಿಕ್ಕು, ತಂದೆ, ವಾಯುವ್ಯ ದಿಕ್ಕು ತಾಯಿ, ಈಶಾನ್ಯ ಮನೆಯ ಮಕ್ಕಳ ದಿಕ್ಕು, ನೈರುತ್ಯ ಯಜಮಾನ, ಆಗ್ನೇಯ ಯಜಮಾನಿಗೆ, ದಕ್ಷಿಣ ದಿಕ್ಕು ಗಂಡು ಮಕ್ಕಳಿಗೆ, ಪಶ್ಚಿಮ ಹೆಣ್ಣು ಮಕ್ಕಳಿಗೆ ಹೀಗೆ ಒಂದೊಂದು ದಿಕ್ಕು ಒಬ್ಬರಿಗೆ ಮೀಸಲಿದ್ದು, ಯಾವ ದಿಕ್ಕಿನ ಲ್ಲಿ ವಾಸ್ತು ದೋಷ ಇರುತ್ತದೆಯೋ ಆ ದಿಕ್ಕಿಗೆ ಸಂಬಂಧಿಸಿದವರಿಗೆ ಅನಾರೋಗ್ಯ ಕಾಡುತ್ತದೆ.
ಮನೆಯ ವಾಸ್ತು ದೋಷಗಳು ಆಯಾ ದಿಕ್ಕಿಗೆ ಸಂಬಂಧಿಸಿದವರ ಮೇಲೆ ಪ್ರಭಾವ ಬೀರುತ್ತದೆ. ಭೂಮಿ, ವಾಯುವ್ಯ, ಅಗ್ನಿ, ಜಲ ತತ್ವಗಳು ಆಯಾ ಜಾಗದಲ್ಲೇ ಇರಬೇಕು. ಇಲ್ಲವೇ ಅಗ್ನಿ ದಿಕ್ಕಿನಲ್ಲಿ ಬಾತ್ ರೂಮ್ ಕಟ್ಟಿದರೆ, ಅಲ್ಲಿ ಸಮಸ್ಯೆ ಖಂಡಿತವಾಗಿಯೂ ಆಗುತ್ತದೆ. ಮನೆಯ ಯಾವ ದಿಕ್ಕಿನಲ್ಲಿ ವಾಸ್ತು ಸಮಸ್ಯೆ ಇರುತ್ತದೆ ಆ ದಿಕ್ಕಿನಲ್ಲಿ ವ್ಯಕ್ತಿಗೆ ದೇಹದ ಒಂದು ಭಾಗಕ್ಕೆ ಸಮಸ್ಯೆ ಅನ್ನು ಉಂಟು ಮಾಡುತ್ತದೆ. ಯಾವ ಕೋಣೆ, ಯಾರಿಗೆ ಸಂಬಂಧಿಸಿದ್ದು ಎಂಬುದನ್ನು ತಿಳಿದುಕೊಂಡು ವಾಸ್ತು ದೋಷವನ್ನು ನಿವಾರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.