ಬೆಂಗಳೂರು, ಮೇ. 06 : ನಿಮ್ಮ ಮಗುವಿನ ಕೋಣೆಯನ್ನು ಅವರ ಬೆಳವಣಿಗೆಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ರೀತಿಯಲ್ಲಿ ಅಲಂಕರಿಸಬೇಕು. ಅದೇ ಸಮಯದಲ್ಲಿ, ಅವರು ತಮ್ಮ ಕಲ್ಪನೆಗಳನ್ನು ಅನ್ವೇಷಿಸಲು ಮತ್ತು ಹೊಸತನವನ್ನು ಕಂಡುಕೊಳ್ಳುವ ಸೃಜನಶೀಲ ಗುಹೆಯಂತೆ ರೂಮ್ ಇರಬೇಕು. ಆದ್ದರಿಂದ, ನಿಮ್ಮ ಮಗುವಿನ ಮಲಗುವ ಕೋಣೆ ಸೌಂದರ್ಯ ಮತ್ತು ಕ್ರಿಯಾತ್ಮಕತೆಯಿಂದ ಕೂಡಿರಲಿ. ನಿಮ್ಮ ಮಕ್ಕಳು ಮಲಗುವ ಕೋಣೆಯನ್ನು ಅಲಂಕರಿಸಲು ಕಾರ್ಟೂನ್ ಅಥವಾ ಕಾಲ್ಪನಿಕ ಕಥೆಯ ಥೀಮ್ ಅನ್ನು ನಿರ್ಧರಿಸಿ.
ನಿಮ್ಮ ಥೀಮ್‌ಗೆ ಅನುಗುಣವಾಗಿ ಗೋಡೆಯ ಬಣ್ಣ ಮತ್ತು ಕೆಲ ಚಿತ್ರಗಳಿಂದ ಪೂರ್ಣಗೊಳಿಸಿ. ರೂಮ್ ನ ಸೀಲಿಂಗ್ ನಿಂದ ಹಿಡಿದು ನೆಲದವರೆಗೂ ಪ್ಲಾನ್ ಮಾಡಿ. ನೀವು ಡಿಸ್ನಿ ಕಾರ್ಟೂನ್ ಥೀಮ್ ಅನ್ನು ಆಧರಿಸಿ ಮಲಗುವ ಕೋಣೆಯನ್ನು ಅಲಂಕರಿಸಬೇಕು ಎಂದುಕೊಂಡಿದ್ದರೆ, ಅದಕ್ಕೆ ಬೇಕಾದ ರೀತಿಯಲ್ಲಿ ಸೀಲಿಂಗ್ ಮತ್ತು ಗೋಡೆಗೆ ಬಣ್ಣವಿರಲಿ, ರೇಡಿಯಂ ಗಳನ್ನು ಸೀಲಿಂಗ್ ನಲ್ಲಿ ಅಳವಡಿಸಿ. ಗೋಡೆಯ ಮೇಲೆ ಮಿಕ್ಕಿಮೌಸ್ ವಾಲ್‌ಪೇಪರ್‌ಗಳನ್ನು ಹಾಕಿ.
ವರ್ಣರಂಜಿತವಾದ ಪೀಠೋಪಕರಣಗಳನ್ನು ಮಕ್ಕಳ ರೂಮ್ ನಲ್ಲಿ ಇಡುವುದು ಜನಪ್ರಿಯ ಆಯ್ಕೆಯಾಗಿದೆ. ಬೀನ್ ಬ್ಯಾಗ್‌ಗಳು, ಡೈಸ್ ಆಕಾರದ ಪೌಫ್‌ಗಳು ಮತ್ತು ಚಿತ್ರಿಸಿದ ಕುರ್ಚಿಗಳು ಉತ್ತಮ ಆಯ್ಕೆಗಳಾಗಿವೆ. ನೀವು ಅಧ್ಯಯನ ಪ್ರದೇಶವನ್ನು ಬಹುಪಯೋಗಿ ಸ್ಥಳವಾಗಿ ವಿನ್ಯಾಸಗೊಳಿಸಬಹುದು. ಅಲ್ಲಿ ಮಗುವಿಗೆ ಅಧ್ಯಯನ ಮಾಡಲು ಹಾಗೂ ಪುಸ್ತಕಗಳನ್ನು ಸಂಗ್ರಹಿಸಲು ಸಹಾಯವಾಗುವಂತಿರಲಿ. ಮಗುವನ್ನು ಚೆನ್ನಾಗಿ ಅಧ್ಯಯನ ಮಾಡಲು ಪ್ರೇರೇಪಿಸಲು ಕಾರ್ಟೂನ್ ಸ್ಟಿಕ್ಕರ್‌ನೊಂದಿಗೆ ಟೇಬಲ್ ಟಾಪ್ ಅನ್ನು ಅಲಂಕರಿಸಿ.
ಮಕ್ಕಳ ಕ್ರಿಯಾತ್ಮಕ ಚಿಂತನೆಗಳಿಗಾಗಿ ರೂಮಿನ ಅರ್ಧಭಾಗದ ಗೋಡೆಯನ್ನು ಖಾಲಿ ಬಿಡಿ. ಇದರಲ್ಲಿ ಸ್ವಲ್ಪ ಕಪ್ಪು ಬೋರ್ಡ್ ಗೆ ಜಾಗ ಮಾಡಿ. ಮಕ್ಕಳು ಆಗಾಗ ತಮ್ಮಿಷ್ಟದ ಚಿತ್ರ ಬಿಡಿಸಲು, ಬರೆಯಲು ಸಹಾಯವಾಗುವಂತೆ ಇರಲಿ. ಈನ್ನು ಮಕ್ಕಳು ಮಾಡಿದ ಕರಕುಶಲ ವಸ್ತುಗಳನ್ನು ಹಾಗೂ ಪೇಂಟಿಂಗ್, ಪ್ರಾಜೆಕ್ಟ್ ಗಳನ್ನು ಇಡಲು ಕೂಡ ಜಾಗದ ವ್ಯವಸ್ಥೆ ಇರಲಿ. ಮಕ್ಕಳು ತಾವು ಮಾಡಿದ್ದನ್ನು ನೋಡಿದಷ್ಟು ಮತ್ತಷ್ಟು ಸೆಲ್ಫ್ ಕಾನ್ಫಿಡೆನ್ಸ್ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.