16.6 C
Bengaluru
Tuesday, January 7, 2025

ಬಿಡಿಎನಲ್ಲಿ ನಿಲ್ಲದ ಎಡವಟ್ಟುಗಳ ಸರಮಾಲೆ : ಅರ್ಕಾವತಿ ಬಡಾವಣೆ ನಿವೇಶನ ಹಂಚಿಕೆಯಲ್ಲಿ ಸಮಸ್ಯೆ

ಬೆಂಗಳೂರು, ಮೇ. 01 : ಎರಡು ದಶಕಗಳ ಹಿಂದೆ ಅರ್ಕಾವತಿ ಬಡಾವಣೆಯಲ್ಲಿ ಸಾವಿರಾರು ನಾಗರಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಬಹುತೇಕ ಎಲ್ಲಾ ಹಂಚಿಕೆದಾರರಿಗೆ ನೋಂದಣಿಯನ್ನೂ ಮಾಡಿಕೊಡಲಾಗಿತ್ತು. ಆದರೆ, ಈಗ ಬಿಡಿಎ ನಿವೇಣ ಹಂಚಿಕೆಯಲ್ಲಿ ಎಡವಟ್ಟನ್ನು ಮಾಡಿಕೊಂಡಿದೆ. ಎರಡು ಬಾರಿ ಸೈಟ್‌ ನಂಬರ್‌ ಬದಲಾವಣೆ ಹಾಗೂ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಲಾಗಿದೆ. ಐದು ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ಬೆಂಗಳೂರಿನ ಅರ್ಕಾವತಿ ಬಡಾವಣೆಯ 18ನೇ ಬ್ಲಾಕ್ನಲ್ಲಿ ಬಿಡಿಎ ಭಾರೀ ಎಡವಟ್ಟು ಮಾಡಿದೆ.

ಈ ವಿಷಯ ತಿಳಿದ ಮೂಲ ಮಂಜೂರಾತಿದಾರರು ಹಾಗೂ ಹೊಸ ನಿವೇಶನ ಮಾಲೀಕರ ನಡುವೆ ಹಗ್ಗಜಗ್ಗಾಟ ಶುರುವಾಗಿದೆ. ಇದರಿಂದ ಇಡೀ ಬ್ಲಾಕ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ಸ್ಥಗಿತಗೊಂಡಿದೆ. ನಿವೃತ್ತ ಸೇನಾಧಿಕಾರಿ ಆರ್.ನಾರಾಯಣಪ್ಪ ಅವರಿಗೆ ಮಂಜೂರಾಗಿದ್ದ ನಿವೇಶನವನ್ನು ಗಮನಕ್ಕೆ ಬಾರದಂತೆ ಬಿಡಿಎ ಬೇರೆಯವರಿಗೂ ಮಂಜೂರು ಮಾಡಿದೆ. 2006 ರಲ್ಲಿ ಸೈಟ್‌ ಖರೀದಿಸಿದ್ದರು. ಆದರೆ ಈಗ ಇಲ್ಲಿ ಮನೆ ನಿರ್ಮಾಣ ಮಾಡಬೇಕೆಂದಿದ್ದರು. ಸೈಟ್‌ ಬಳಿ ಹೋದಾಗ 2021 ರಲ್ಲಿ ಅದನ್ನು ಮೂಲ ಭೂಮಾಲೀಕರಿಗೆ ಇದೇ ನಿವೇಶನವನ್ನು ಬಿಡಿಎ ಹಂಚಿಕೆ ಮಾಡಿದೆ.

ಮತ್ತೊಬ್ಬ ವ್ಯಕ್ತಿ ಮಾಜಿ ರಕ್ಷಣಾ ಸಿಬ್ಬಂದಿ ಗೋವಿಂದ್ ರೆಡ್ಡಿ ಎಂಬುವರಿಗೂ ಇದೇ ಸಮಸ್ಯೆ ಉಂಟಾಗಿದೆ. 2021 ರಲ್ಲಿ ಬಿಡಿಎ ಭೂ ಮಾಲೀಕರಿಗೆ ನಿವೇಶನಗಳನ್ನು ಹಂಚಿಕೆ ಮಾಡುವಾಗ ಎಡವಟ್ಟು ಮಾಡಿಕೊಂಡಿದೆ. ಈ ಬ್ಲಾಕ್‌ನಲ್ಲಿರುವ 300 ಸೈಟ್‌ಗಳಲ್ಲಿ ಈ ಸಮಸ್ಯೆ ಆಗಿದೆ. ಈದೀಗ ಈ ತಪ್ಪನ್ನು ಬಿಡಿಎ ಒಪ್ಪಿಕೊಂಡಿದೆ. ಭೂಮಾಲೀಕರಿಗೆ ಆದ್ಯತೆ ಹಾಗೂ ಶೇಕಡಾ 40ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಬೇಕಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಇನ್ನೆರಡು ತಿಂಗಳಿನಲ್ಲಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಬಿಡಿಎ ಅಧಿಕಾರಿ ಒಬ್ಬರು ಹೇಳಿದ್ದಾರೆ.

Related News

spot_img

Revenue Alerts

spot_img

News

spot_img