#Bank #holidays #may #month
ಬೆಂಗಳೂರು: ಸರ್ಕಾರಿ ರಜಾ ದಿನಗಳ ಪ್ರಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ.ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದಕ್ಕೆ ನೀವು ಮೇ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಗಮನಿಸೋದು ಅಗತ್ಯ. ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಆ ತಿಂಗಳಿಗೆ ಸಂಬಂಧಿಸಿದ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಮೇ ತಿಂಗಳ ರಜಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಮೇನಲ್ಲಿ ವಾರದ ರಜೆಗಳು ಸೇರಿದಂತೆ ಬ್ಯಾಂಕ್ ಗಳು ಒಟ್ಟು 12 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ.ಇದರಲ್ಲಿ ವಾರದ 4 ಭಾನುವಾರ ಹಾಗೂ 2 ಶನಿವಾರದ ರಜೆಗಳು ಒಳಗೊಂಡಿವೆ. ಇನ್ನುಳಿದ ರಜೆಯಲ್ಲಿ ಒಂದು ಸಾರ್ವತ್ರಿಕ ರಜೆಯಾದರೆ, ಉಳಿದವು ಪ್ರಾದೇಶಿಕ ರಜೆಗಳಾಗಿವೆ.
List of Bank Holidays in May 2023
ಮೇ 1 (ಸೋಮವಾರ): ಮೇ ದಿನ ಅಥವಾ ಕಾರ್ಮಿಕರ ದಿನ ಮತ್ತು ಮಹಾರಾಷ್ಟ್ರ ದಿನ
ಮೇ 5 (ಶುಕ್ರವಾರ): ಬುದ್ಧ ಪೂರ್ಣಿಮಾ– ದೆಹಲಿ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಾಖಂಡ್, ಅಸ್ಸಾಮ್, ಬಿಹಾರ, ಗುಜರಾತ್, ಅರುಣಾಚಲಪ್ರದೇಶ, ಚತ್ತೀಸ್ಗಡ
ಮೇ 7: ಭಾನುವಾರ
ಮೇ 9 (ಮಂಗಳವಾರ): ರವೀಂದ್ರನಾಥ್ ಠಾಗೂರ್ ಜಯಂತಿ
ಮೇ 13: ಎರಡನೇ ಶನಿವಾರ
ಮೇ 14: ಭಾನುವಾರ
ಮೇ 16 (ಮಂಗಳವಾರ): ಸಿಕ್ಕಿಂ ದಿನ
ಮೇ 21: ಭಾನುವಾರ
ಮೇ 22 (ಸೋಮವಾರ): ಮಹಾರಾಣಾ ಪ್ರತಾಪ್ ಜಯಂತಿ – ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನ
ಮೇ 24 (ಬುಧವಾರ): ಕಾಜಿ ನಜ್ರುಲ್ ಇಸ್ಲಾಂ ಜಯಂತಿ– ತ್ರಿಪುರಾ
ಮೇ 27: ನಾಲ್ಕನೇ ಶನಿವಾರ
ಮೇ 28: ಭಾನುವಾರ