24.1 C
Bengaluru
Wednesday, February 5, 2025

ದೇಶದಲ್ಲೇ ಅಗ್ರಸ್ಥಾನಕ್ಕೇರಿದ ಬೆಂಗಳೂರು: ರಿಯಲ್ ಎಸ್ಟೇಟ್ ನಲ್ಲಿ ಸಿಲಿಕಾನ್ ಸಿಟಿಯನ್ನು ಬೀಟ್ ಮಾಡೋಕೆ ಸಾಧ್ಯವೇ ಇಲ್ಲ..

ಬೆಂಗಳೂರು, ಏ. 25 : ಬೆಂಗಳೂರು ಐಟಿ ನಗರವಾಗಿ ಮಾರ್ಪಟ್ಟು ವರ್ಷಗಳೇ ಕಳೆದಿವೆ. ಕೇವಲ ರಾಜ್ಯದಿಂದಷ್ಟೇ ಅಲ್ಲದೇ, ಇಡೀ ದೇಶದ ಜನರು, ಹೊರ ದೇಶದವರು ಕೂಡ ಬೆಂಗಳೂರಿನಲ್ಲಿ ಕೆಲಸ ಅರಸಿ ಬರುತ್ತಾರೆ. ಪ್ರತಿಯೊಬ್ಬರೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ನೆಲಯೂರುತ್ತಾರೆ. ಈಗಂತೂ ಬೆಂಗಳೂರು ಮಹಾನಗರ ತುಂಬಿ ತುಳುಕುತ್ತಿದೆ. ಹೀಗಾಗಿ ಈಗ ಸಿಲಿಕಾನ್ ನಗರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬಾನೆತ್ತರಕ್ಕೆ ಜಿಗಿದಿದೆ. ಬೆಂಗಳೂರು ಕಾಸ್ಟ್ಲಿಯೆಸ್ಟ್ ಸಿಟಿಯಾಗಿ ಮಾರ್ಪಟ್ಟಿದೆ.

ಬೆಂಗಳುರಿನಲ್ಲಿ ಈಗಾಗಲೇ ಬಾಡಿಗೆ ಮನೆಗಳ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಬೆಂಗಳೂರು ನಗರ ಬಾಡಿಗೆ ಹೆಚ್ಚಳದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೋವಿಡ್ ನಂತರ ದೇಶದ ಎಲ್ಲಾ ಪ್ರಮುಖ ನಗರಗಳಲ್ಲೂ ಬಾಡಿಗೆ ದರ ಹೆಚ್ಚಳವಾಗಿದೆ. ಆದರೆ ಬೆಮಗಳೂರಿನಲ್ಲಿ ಅತೀ ಹೆಚ್ಚು ಬಾಡಿಗೆ ದರಗಳು ಏರಿಕೆಯಾಗಿದೆ. ಈ ಬಗ್ಗೆ ಹಲವು ಸಂಸ್ಥೆಗಳು ವರದಿ ಮಾಡಿದ್ದು, ಎಲ್ಲಾ ವರದಿಗಳ ಪ್ರಕಾರ ಬೆಂಗಳುರು ನಗರವೇ ಅತೀ ಹೆಚ್ಚು ಬಾಡಿಗೆ ಮನೆಗಳ ಬೇಡಿಕೆ ಇದೆ.

ಐಟಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರುವವರು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ಹೀಗಾಗಿ ಮನೆ ಮಾಲೀಕರು ಕೂಡ ಬಾಡಿಗೆ ದರದಲ್ಲಿ ಹೆಚ್ಚಳ ಮಾಡಿದ್ದಾರೆ. ಇನ್ನು ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗಿ ಪಿಜಿಗಳಲ್ಲಿ ನೆಲೆಸುತ್ತಾರೆ. ಈಗ ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಷ್ಟೇ ಅಲ್ಲದೇ, ಪಿಜಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಟೆಕ್ಕಿಗಳು ತಮ್ಮ ಬಜೆಟ್‌ನೊಳಗೆ ಬಾಡಿಗೆ ಮನೆ ಸಿಗದ ಕಾರಣ ಕೆಲವರು ಶೇರಿಂಗ್‌ ನಲ್ಲಿ ಉತ್ತಮ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆಗೆ ಪಡೆದು, ಸ್ನೇಹಿತರೆಲ್ಲಾ ಬಾಡಿಗೆ ಮೊತ್ತವನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ವಸತಿ ಗೃಹಗಳಲ್ಲಿಯೂ ಈಗ ಭಾರೀ ಏರಿಕೆ ಕಂಡಿದೆ.

ಶೇ. 25 ರಿಂದ 40 ರಷ್ಟು ಪಿಜಿ ಹಾಗೂ ಇತರೆ ವಸತಿನಿಲಯಗಳ ಬಾಡಿಗೆಗಳಲ್ಲಿ ಏರಿಕೆ ಕಂಡಿದೆ. ಶಿಕ್ಷಣ ಸಂಸ್ಥೆಗಳ ಬಳಿ ಇರುವ ಪಿಜಿಗಳು ಪ್ರತಿ ವ್ಯಕ್ತಿಗೆ ರೂ 13,000 ರೂಪಾಯಿ ಇದೆ. ಅದರಲ್ಲೂ ಒಂದು ಕೊಠೆಇಯಲ್ಲಿ ಮೂವರು ಶೇರ್‌ ಮಾಡಿಕೊಳ್ಳಬಹುದು. ಒಬ್ಬರೇ ಇರಬೇಕು ಎಂದು ಬಯಸಿದರೆ, 21, 000 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತಿದೆ. ಅದೇ ಕಡಿಮೆ ಬಜೆಟ್‌ ಇದ್ದರೆ, ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಉದ್ಯೋಗಿಗಳಿಗೆ ಬಾಡಿಗೆ ಮನೆಯ ತಲೆನೋವಾದರೆ, ಈಗ ವಿದ್ಯಾರ್ಥಿಗಳಿಗೂ ಪಿಜಿಗಳ ಬೆಲೆ ಗಗನಕ್ಕೇರಿರುವುದು ಬೆಂಗಳೂರಿನ ಬೆಳವಣಿಗೆಯನ್ನು ತೋರುತ್ತಿದೆ.

Related News

spot_img

Revenue Alerts

spot_img

News

spot_img