24.2 C
Bengaluru
Sunday, December 22, 2024

ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ;

ಬೆಂಗಳೂರು ಏ19: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, 7 ಅಭ್ಯರ್ಥಿಗಳಿಗೆ ಟಿಕೆಟ್​ ಘೋಷಣೆ ಮಾಡಿದೆ.ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಜಗದೀಶ್‌ ಶೆಟ್ಟರ್‌ಗೆ ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಬಿ ಫಾರಂ ನೀಡಲಾಗಿತ್ತು. ಅದರಂತೆ 4ನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಶೆಟ್ಟರ್‌ಗೆ ಟಿಕೆಟ್‌ ನೀಡಿದೆ.

ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ
ಲಿಂಗಸುಗೂರು ಕ್ಷೇತ್ರ – ದುರ್ಗಪ್ಪ ಎಸ್.ಹೂಲಗೇರಿ

ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರ -ಜಗದೀಶ್ ಶೆಟ್ಟರ್​

ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರ – ದೀಪಕ್ ಚಿಂಚೋರೆ

ಶಿಗ್ಗಾಂವಿ ಕ್ಷೇತ್ರ – ಮೊಹಮ್ಮದ್​ ಯೂಸುಫ್ ಸವಣೂರು

ಹರಿಹರ ಕ್ಷೇತ್ರ – ನಂದಗಾವಿ ಶ್ರೀನಿವಾಸ

ಚಿಕ್ಕಮಗಳೂರು ಕ್ಷೇತ್ರ – ಹೆಚ್.ಡಿ.ತಮ್ಮಯ್ಯ

ಶ್ರವಣಬೆಳಗೊಳ ಕ್ಷೇತ್ರ – ಎಂ.ಎ.ಗೋಪಾಲಸ್ವಾಮಿ

4ನೇ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ 2, ಒಕ್ಕಲಿಗ, ಭೋವಿ, ಕುರುಬ ಹಾಗೂ ಮುಸ್ಲಿಂ ಸಮುದಾಯದ ತಲಾ ಒಬ್ಬರು ಟಿಕೆಟ್ ಪಡೆದಿದ್ದಾರೆ. ಪುಲಕೇಶಿ ನಗರ, ಸಿವಿ ರಾಮನ್ ನಗರ. ಮುಳಬಾಗಿಲು. ರಾಯಚೂರು ನಗರ, ಅರಕಲಗೂಡು, ಮಂಗಳೂರು ಉತ್ತರ, ಶಿಡ್ಲಘಟ್ಟ, ಕೆ ಆರ್ ಪುರಂ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಇದ್ದು ಬುಧವಾರವೇ ಅಂತಿಮ ಪಟ್ಟಿಯನ್ನು ಘೋಷಿಸುವ ಸಾಧ್ಯತೆಗಳಿವೆ.

Related News

spot_img

Revenue Alerts

spot_img

News

spot_img