#77th #Independence Day # Draupadi Murmu # speech # nation
ಬೆಂಗಳೂರು;ರಾಷ್ಟ್ರದ 77ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಸಮಾರಂಭಕ್ಕೆ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ,ರಾಷ್ಟ್ರಪತಿಗಳ ಭಾಷಣವನ್ನು ಆಕಾಶವಾಣಿಯ ರಾಷ್ಟ್ರೀಯ ನೆಟ್‌ವರ್ಕ್‌ನಲ್ಲಿ ಸಂಜೆ 7 ರಿಂದ ಪ್ರಸಾರ ಮಾಡಲಾಗುವುದು. ದೂರದರ್ಶನದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಭಾಷಣವನ್ನು ಪ್ರಸಾರ ಮಾಡಲಾಗುವುದು. ಇದೇ ವೇಳೆ ದೂರದರ್ಶನದ ಪ್ರಾದೇಶಿಕ ಚಾನೆಲ್‌ಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಿವೆ.ಇನ್ನು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಎಂದಿನಂತೆ ಇದರೆ ಸ್ವಲ್ಪ ಭಿನ್ನವಾಗಿರಲಿದೆ. ಪ್ರಧಾನಿಯವರ ಚಿಂತನೆಯ ಜನ ಭಾಗಿದಾರಿಕೆ ತತ್ವದಂತೆ ಸುಮಾರು 1,800 ‘ವಿಶೇಷ ಅತಿಥಿಗಳು’ ಕೆಂಪು ಕೋಟೆಯ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ಈ ಬಾರಿಯ ಪಂದ್ರಾಗಾಸ್ಟ್ ಆಚರಣೆಗೆ ಕೇಂದ್ರ ವಿಸ್ತಾ ಯೋಜನೆಯ ನಿರ್ಮಾಣದಲ್ಲಿ ತೊಡಗಿರುವ ಸರಪಂಚರು, ರೈತರು, ಮೀನುಗಾರರು, ಶಿಕ್ಷಕರು, ದಾದಿಯರು, ನೇಕಾರರು ಮತ್ತು ಕಾರ್ಮಿಕರಿಗೆ ಕೇಂದ್ರವು ಆಹ್ವಾನ ನೀಡಿದೆ. ಅದರ ಭಾಗವಾಗಿ, ದೇಶದಾದ್ಯಂತ ಸುಮಾರು 1,800 ವಿಶೇಷ ಆಹ್ವಾನಿತರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ.