ನವದೆಹಲಿ;ಐದು ರಾಜ್ಯಗಳ ಹೈಕೋರ್ಟ್(highcourt) ಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು(Chief Justice) ನೇಮಿಸುವಂತೆ ಸುಪ್ರೀಂ ಕೋರ್ಟ್(Supremecourt) ಕೊಲಿಜಿಯಂ ಇಂದು ರಾಷ್ಟ್ರಪತಿಗಳಿಗೆ ಗುರುವಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಜಾರ್ಖಂಡ್, ಗುವಾಹಟಿ, ಅಲಹಾಬಾದ್, ರಾಜಸ್ಥಾನ್ & ಹರಿಯಾಣ ಹೈಕೋರ್ಟುಗಳಿಗೆ ಸಿಜೆ ನೇಮಿಸುವಂತೆ ಕೋರಲಾಗಿದೆ.ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್ ಗವಾಯಿ ಕೊಲಿಜಿಯಂನ ಸದಸ್ಯರಾಗಿದ್ದಾರೆ.ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಮನೀಂದ್ರ ಮೋಹನ್ ಶ್ರೀವಾಸ್ತವ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ನ್ಯಾ. ಶೀಲ್ ನಾಗು, ಗೌಹಾಟಿ ಹೈಕೋರ್ಟ್‌ಗೆ ನ್ಯಾ. ವಿಜಯ್ ಬಿಷ್ಣೋಯ್, ಅಲಹಾಬಾದ್ ಹೈಕೋರ್ಟ್‌ಗೆ ನ್ಯಾ. ಅರುಣ್ ಬನ್ಸಾಲಿ ಮತ್ತು ಜಾರ್ಖಂಡ್ ಹೈಕೋರ್ಟ್‌ಗೆ ನ್ಯಾ. ಬಿ.ಆರ್ ಸಾರಂಗಿ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಉನ್ನತೀಕರಿಸಿದ ಬಳಿಕ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆ ಖಾಲಿಯಾಗಿದೆ.ಛತ್ತೀಸಗಢ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾ. ಮನೀಂದ್ರ ಮೋಹನ್ ಶ್ರೀವಾಸ್ತವ ಅವರನ್ನು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.ನ್ಯಾ. ಶೀಲ್ ನಾಗು ಅವರು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಎಲ್ಲಾ ರೀತಿಯಲ್ಲೂ ಯೋಗ್ಯರು ಮತ್ತು ಸೂಕ್ತರು ಎಂದು ಪರಿಗಣಿಸಲಾಗಿದೆ. ನ್ಯಾ. ಬಿಷ್ಣೋಯ್ ಅವರು ಉನ್ನತ ಮಟ್ಟದ ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಕೊಲಿಜಿಯಂ ಹೇಳಿದೆ.ನ್ಯಾ. ಬನ್ಸಾಲಿ ಅವರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಸೇವೆಸಲ್ಲಿಸಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ಉತ್ತಮ ಕಾನೂನು ಚಾಣಾಕ್ಷತೆಯನ್ನು ಹೊಂದಿರುವ ಸಮರ್ಥ ನ್ಯಾಯಾಧೀಶರೆಂದು ಪರಿಗಣಿಸಲ್ಪಟ್ಟಿದ್ದಾರೆ.