26.7 C
Bengaluru
Sunday, December 22, 2024

ಫ್ರಾಂಚೈಸಿ ಮೂಲಕ ಕಡಿಮೆ ಹಣದಲ್ಲಿ ಬಿಸಿನೆಸ್‌ ಮಾಡುತ್ತಿರುವ ಉದ್ಯಮಶೀಲ ಮಹಿಳೆಯರು

ಬೆಂಗಳೂರು, ಮಾ. 24 : ಫ್ರಾಂಚೈಸಿ ಇಂಡಿಯಾದ ಇತ್ತೀಚಿಗೆ ಸಮೀಕ್ಷೆಯನ್ನು ನಡೆಸಿದೆ. ಇದರ ವರದಿಯ ಪ್ರಕಾರ ಭಾರತದಲ್ಲಿ ಮಹಿಳಾ ಉದ್ಯಮಿಗಳು ತಮ್ಮ ವ್ಯಾಪಾರ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಪುಣೆ, ಗೋವಾ, ಭೋಪಾಲ್, ಗುರುಗ್ರಾಮ್, ದೆಹಲಿ, ಲೂಧಿಯಾನ, ಗುವಾಹಟಿ ಮತ್ತು ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. 500 ಮಹಿಳೆಯರ ಜೊತೆಗೆ ಮಾತುಕತೆ ನಡೆಸಿ ಫ್ರಾಂಚೈಸಿ ಇಂಡಿಯಾ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಉದ್ಯಮಶೀಲತೆಯಲ್ಲಿ ಆಸಕ್ತಿ ಹೊಂದಿರುವ ಶೇ.57ರಷ್ಟು ಮಹಿಳೆಯರು 26ರಿಂದ 35ರ ವಯೋಮಾನದವರಾಗಿದ್ದರೆ, ಶೇ.27ರಷ್ಟು ಮಂದಿ 18ರಿಂದ 25 ವರ್ಷದೊಳಗಿನವರಾಗಿದ್ದಾರೆ ಎಂದು ಈ ವರದಿಯಲ್ಲಿ ಬಹಿರಂಗವಾಗಿದೆ. 10 ಮಹಿಳೆಯರಲ್ಲಿ ಮೂವರು ಉದ್ಯಮಶೀಲತೆಯಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ. ಈ ಪೈಕಿ 45 ಪ್ರತಿಶತ ಮಹಿಳೆಯರು ಮದುವೆಯಾದ ನಂತರವೂ ತಮ್ಮ ಕುಟುಂಬ ಮತ್ತು ವ್ಯವಹಾರ ಬದ್ಧತೆಗಳನ್ನು ಸಮತೋಲನದಲ್ಲಿಡಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದೆ.

ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಹಣಕಾಸಿನ ಪ್ರವೇಶವು ದೊಡ್ಡ ಸವಾಲಾಗಿದೆ ಎಂದು ವರದಿಯು ಸೂಚಿಸುತ್ತದೆ. ಯಾಕೆಂದರೆ ಕೇವಲ ಒಂದು ಸಣ್ಣ ಶೇಕಡಾವಾರು ಮಹಿಳೆಯರು ತಮ್ಮ ಉದ್ಯಮಗಳಿಗೆ ಹಣಕಾಸಿನ ಬೆಂಬಲವನ್ನು ಪಡೆಯುತ್ತಾರೆ. ಈ ಹಣಕಾಸಿನ ಕೊರತೆಯು ಮಹಿಳಾ ಉದ್ಯಮಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದರಿಂದ ಮತ್ತು ಅವರ ಗುರಿಗಳನ್ನು ಸಾಧಿಸುವುದನ್ನು ತಡೆಯುತ್ತದೆ. ಹಾಗಿದ್ದರೂ ಕೂಡ, ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಮಹಿಳಾ ಉದ್ಯಮಿಗಳು ಮನೆಯಲ್ಲಿ ಮತ್ತು ಕೆಲಸದಲ್ಲಿ ಮುನ್ನುಗ್ಗುತ್ತಿದ್ದಾರೆ.

Related News

spot_img

Revenue Alerts

spot_img

News

spot_img