ಬೆಂಗಳೂರು, ಫೆ. 23 : ಭಾರತದ ಜನರು ಸ್ವಂತ ಮನೆಯ ಮೇಲಿನ ಆಸೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಸಿಬಿಆರ್ ಇ ಇಂಡಿಯಾ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ವರದಿಯಂತೆ ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಶೇ.45 ರಷ್ಟು ಭಾರತೀಯ ಜನರು ಮುಂಬರುವ ಎರಡು ವರ್ಷದ ಅವಧಿಯಲ್ಲಿ ಸ್ವಂತ ಮನೆಯನ್ನು ಖರೀದಿಸು ಆಲೋಚನೆಯನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಾಡಿಗೆ ಮನೆಯಲ್ಲಿರುವ ಬಹುತೇಕ ಜನರು ಸ್ವಂತ ಮನೆಗೆ ಶಿಫ್ಟ್ ಆಗಲು ಮುಂದಾಗಿದ್ದಾರೆ. ಬಾಡಿಗೆ ಮನೆ ಸಾಕಾಗಿದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಸಿಬಿಆರ್ ಇ ಇಂಡಿಯಾ ಸಮೀಕ್ಷೆಯ ಪ್ರಕಾರ ಭವಿಷ್ಯದಲ್ಲಿ ಭಾರತೀಯರು ಹೇಗೆ ಜೀವನ ನಡೆಸುತ್ತಾರೆ. ಕೇಲಸ ಹಾಗೂ ಶಾಪಿಂಗ್ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಸಮೀಕ್ಷೆಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಭಾರತದ ಶೇ. 31ರಷ್ಟು ಜನ ಹೊಸ ಮನೆಗೆ ಹೋಗುವ ಬಯಕೆಯನ್ನು ಹೊಂದಿದ್ದರು. ಆದರೆ, ಈಗ ಇದು ಶೇ.13 ರಷ್ಟು ಹೆಚ್ಚಳವಾಗಿದೆ. ಶೇ. 44 ರಷ್ಟು ಜನ ಹೊಸ ಮನೆಗೆ ಹೋಗಲು ಬಯಸಿದ್ದಾರೆ. ಇದು ಜಾಗತಿಕವಾಗಿಯೂ ಏಫ್ಯಾ ಪೆಸಿಫಿಕ್ ಪ್ರಾಂತ್ಯದಲ್ಲೇ ಅತೀ ಹೆಚ್ಚಿನದ್ದು ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಈ ಸಮೀಕ್ಷೆಯನ್ನು ನಡೆಸಲು ಸಿಬಿಆರ್ ಇ ಇಂಡಿಯಾ ಜಾಗತಿಕವಾಗಿ 20 ಸಾವಿರಕ್ಕೂ ಅಧಿಕ ಜನರಿಂದ ಮಾಹಿತಿಯನ್ನು ಕಲೆ ಹಾಕಿತ್ತು. ಇದಲ್ಲಿ 1500 ಜನ ಭಾರತೀಯರೂ ಇದ್ದರು. ಇವರಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ ಈ ವಿಚಾರ ಬಹಿರಂಗವಾಗಿದೆ. ಇದರಲ್ಲಿ 18 ರಿಂದ 57 ವರ್ಷದ ವಯೋಮಾನದವರು ಇದ್ದರು ಎಂದು ಹೇಳಲಾಗಿದೆ. ಇದರಲ್ಲಿ ಹೆಚ್ಚಾಗಿ 18ರಿಂದ 25 ವಯೋಮಾನದವರೇ ಹೆಚ್ಚಿದ್ದಾರೆ. ಇವರಿಗೆಲ್ಲಾ ಸ್ವಂತ ಮನೆಗೆ ಶಿಫ್ಟ್ ಆಗುವ ಆಸೆಯನ್ನು ಹೊಂದಿದ್ದಾರೆ. ಇದರಲ್ಲಿ 58 ವರ್ಷ ದಾಟಿದವರಿಗೆ ಸ್ವಂತ ಮನೆಗೆ ಹೋಗುವ ಆಸಕ್ತಿಯನ್ನು ತೋರುತ್ತಿಲ್ಲವಂತೆ.
2016ಕ್ಕೆ ಹೋಲಿಸಿದರೆ, ಶೇ. 70 ರಷ್ಟು ಜನ ಬಾಡಿಗೆ ಮನೆ ಬದಲು ಸ್ವಂತ ಮನೆಗೆ ಹೋಗಬೇಕು ಎಂದು ಬಯಸುತ್ತಿದ್ದಾರಂತೆ. ಅದೇ 2016 ರಲ್ಲಿ ಶೇ. 68 ರಷ್ಟು ಮಂದಿ ಬಾಡಿಗೆ ಮನೆಯೇ ಸಾಕು ಎಂದು ಹೇಳಿದ್ದರಂತೆ. ಇನ್ನು ಇದೀಗ ಸ್ವಂತ ಮನೆಯನ್ನು ಆರಿಸಿಕೊಂಡಿರುವವರು ಆದಷ್ಟು ನಗರಕ್ಕೆ ಹತ್ತಿರವಾಗಿಯೇ ಇರಬೇಕು ಎಂದು ಬಯಸಿದ್ದಾರೆ.