#Ayodhya #Shrirama #Muslim,#Rss #Padayatara #Balarama # Modi #
ಅಯೋಧ್ಯೆ:ಆಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಬಾಲರಾಮನ ದರ್ಶನಕ್ಕೆ ಲಕ್ಷಾಂತರ ಜನರು ತೆರಳುತ್ತಿದ್ದಾರೆ. ಅಸಂಖ್ಯಾತ ಭಕ್ತರು ದೇಶದ ಮೂಲೆಮೂಲೆಗಳಿಂದ ತೆರಳಿ ರಾಮನ ಕೃಪೆಗೆ ಒಳಗಾಗ್ತಾ ಇದ್ದಾರೆ. ಇದರ ನಡುವೆ ವಿಶೇಷ ಅಂದರೆ..ಮುಸ್ಲಿಂರು ಕೂಡಾ ಇದರಲ್ಲಿ ಸೇರಿದ್ದಾರೆ.
ಹೌದು…ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿ ದಿನಗಳು ಕಳೆಯುತ್ತಾ ಇದ್ದಂತೆ.. ಬಾಲರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಂರ ತಂಡವೊಂದು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಸುಮಾರು 6 ದಿನಗಳ ಕಾಲ ಪಾದಯಾತ್ರೆ ನಡೆಸಿದ್ದರು. ಆರ್ ಎಸ್ ಎಸ್ ನ ಮುಸ್ಲಿಂ ವಿಭಾಗ ಮುಸ್ಲಿಂ ರಾಷ್ಟ್ರೀಯ ಮಂಚ್ ನೇತೃತ್ವದಲ್ಲಿ ಈ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಜನವರಿ 25ರಂದು ಇವರೆಲ್ಲಾ ಯಾತ್ರೆ ಪ್ರಾರಂಭ ಮಾಡಿದ್ದರು. ಪ್ರತಿ 25 ಕಿಲೋಮೀಟರ್ ಸಾಗಿದ ಬಳಿಕ ವಿರಾಮ ಪಡೆದು ಮತ್ತೆ ಬೆಳಗ್ಗೆ ಪಾದಯಾತ್ರೆ ಮುಂದುವರೆಸಿದ್ದರು. ಸದ್ಯ ಈಗ ಚಳಿಗಾಲ ಇದ್ದರೂ.. ಅದನ್ನ ಲೆಕ್ಕಿಸದೇ ಸುಮಾರು 150 ಕಿಲೋ ಮೀಟರ್ ಸಾಗಿದ್ರು. ಯಾತ್ರೆ ಸಾಗುವ ಉದ್ದಕ್ಕೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಸಾಗಿದ್ದರು.ಈ ತಂಡ ಮೊನ್ನೆ ಅಂದರೆ.. ಮಂಗಳವಾರದಂದು ಅಯೋಧ್ಯೆ ತಲುಪಿತ್ತು.
ಮತ್ತೊಂದು ವಿಚಾರ ಅಂದ್ರೆ.. ಇವರೆಲ್ಲರೂ ಬರಿಗಾಲಲ್ಲೇ ಅಯೋಧ್ಯೆಗೆ ಹೆಜ್ಜೆ ಹಾಕಿದ್ದರು. ಈ ವೇಳೆ ಮಾತನಾಡಿದ ಪಾದಯಾತ್ರಿಗಳು ಅಯೋಧ್ಯೆಯಲ್ಲಿ ಬಾಲರಾಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ ಇದು ನನಗೆ ಅತೀವ ಆನಂದ ತಂದಿದೆ ಎಂದಿದ್ದಾರೆ. ಅಲ್ಲದೇ ಇದು ಏಕತೆ ಮತ್ತು ಭಾವೈಕ್ಯತೆ, ಸಾರ್ವಭೌಮತ್ವ ಹಾಗೂ ಸಾಮರಸ್ಯದ ಸಂಕೇತವೆಂದು ತಿಳಿಸಿದ್ದಾರೆ.