26.7 C
Bengaluru
Sunday, December 22, 2024

31 KAS ಅಧಿಕಾರಿಗಳ ವರ್ಗಾವಣೆ – ರಾಜ್ಯ ಸರ್ಕಾರದ ಆದೇಶ

#Transfer #KAS #Officers #stategovt #order
ಬೆಂಗಳೂರು: ನಿನ್ನೆಯಷ್ಟೇ 21 ಡಿವೈಎಸ್​​ಪಿ(DYSP), 66 ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು(P0lice inspector) ವರ್ಗಾವಣೆ(Transfer) ಮಾಡಿದ್ದ ರಾಜ್ಯ ಸರ್ಕಾರ, ಇಂದು 31 ಕೆಎಎಸ್(KAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅನ್ವಯಿಸುವಂತೆ ಈ ಕೆಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ನಾಲ್ವರು ಆಯ್ಕೆ ಶ್ರೇಣಿ, 16 ಹಿರಿಯ ಶ್ರೇಣಿ ಹಾಗೂ 11 ಕಿರಿಯ ಶ್ರೇಣಿ ಸೇರಿ ಒಟ್ಟು 31 ಮಂದಿ ಕೆಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.ವರ್ಗಾವಣೆ ಆಗಿರುವ ಕೆಎಎಸ್​ ಅಧಿಕಾರಿಗಳ ಈ ಹಿಂದಿನ ಹುದ್ದೆ ಹಾಗೂ ಮುಂದಿನ ಹುದ್ದೆ,ಸ್ಥಳಗಳ ವಿವರ ಈ ಕೆಳಗಿನಂತಿದೆ.

ಪ್ರಕಾಶ್‌ ಗೋಪು ರಜಪೂತ್‌- ಕಲಬುರಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ (ಭೂನಿರ್ವಹಣೆ, ಯೋಜನೆ), ಸಂಗಪ್ಪ- ಮಹಾರಾಣಿ ಕ್ಲಸ್ಟರ್‌ ವಿವಿ ಕುಲಸಚಿವ (ಆಡಳಿತ), ಕವಿತಾ ರಾಜಾರಾಮ್‌- ಮೈಸೂರು ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ (ಆಡಳಿತ ಮತ್ತು ಅಭಿವೃದ್ಧಿ), ಪಿ. ಶಿವರಾಜು- ಮೈಸೂರು ಹೆಚ್ಚುವರಿ ದಂಡಾಧಿಕಾರಿ.ಸಿದ್ರಾಮೇಶ್ವರ- ಕೊಪ್ಪಳ ಹೆಚ್ಚುವರಿ ಜಿಲ್ಲಾಧಿಕಾರಿ, ರವಿಚಂದ್ರ ನಾಯಕ್‌- ಕೆಎಸ್‌ಬಿಸಿಎಲ್‌ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ), ಎಲಿಷಾ ಆಂಡ್ರೋಸ್‌- ರಿಮ್ಸ್‌ ಮುಖ್ಯ ಆಡಳಿತಾಧಿಕಾರಿ, ಸಿ.ಮಂಜುನಾಥ- ರಾಜೀವಗಾಂಧಿ ವಸತಿ ನಿಗಮದ ಕಂದಾಯ ಕೋಶ ಮುಖ್ಯಸ್ಥ, ರೇಷ್ಮಾ ಹಾನಗಲ್‌- ಹೊನ್ನಾಳಿ ಉಪವಿಭಾಗಾಧಿಕಾರಿ, ಸೌಜನ್ಯಾ ಭರಣಿ- ಕೃಷಿ ಇಲಾಖೆ ಜಂಟಿ ನಿರ್ದೇಶಕಿ (ಆಡಳಿತ), ಸಿ. ಮದನ್‌ ಮೋಹನ್‌- ಇ ಆಡಳಿತ ಯೋಜನಾ ನಿರ್ದೇಶಕ, ಸಿ.ಆರ್‌. ಕಲ್ಪಶ್ರೀ- ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ, ಪಿ.ವಿ. ಪೂರ್ಣಿಮಾ- ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಎಂಡಿ,ಬಿ.ಎನ್‌. ವೀಣಾ- ಮಡಿಕೇರಿ ಹೆಚ್ಚುವರಿ ಜಿಲ್ಲಾಧಿಕಾರಿ, ರಾಮಚಂದ್ರ ಗಡದೆ- ಕಲಬುರಗಿ ಎನ್‌ಎಚ್‌ಎಐ ವಿಶೇಷ ಭೂಸ್ವಾಧೀನಾಧಿಕಾರಿ, ಎ.ಎನ್‌. ರಘುನಂದನ್‌- ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ, ಪ್ರಶಾಂತ ಹನಗಂಡಿ- ಕಾಡಾ ಉಪ ಆಡಳಿತಾಧಿಕಾರಿ, ತಬಸ್ಸುಮ್‌ ಜಹೇರಾ- ತುಮಕೂರು ಕೆಎಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ, ಆರ್‌.ಪ್ರತಿಭಾ- ಬಿಬಿಎಂಪಿ ಜಂಟಿ ಆಯುಕ್ತೆ (ಘನತ್ಯಾಜ್ಯ ನಿರ್ವಹಣೆ), ಆರ್‌. ಚಂದ್ರಯ್ಯ- ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ (ವಸತಿ ನಿಲಯ).ಗಂಗಾಧರ ಶಿವಾನಂದ ಮಳಗಿ- ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ, ವಿಜಯಪುರ, ಶಾಲುಂಹುಸೇನ್‌- ಯೋಜನ ನಿರ್ದೇಶನ, ವಿಜಯಪುರ ನಗರಾಭಿವೃದ್ಧಿ ಕೋಶ, ಪಿ.ಎಸ್‌. ಮಹೇಶ್‌- ಬಿಬಿಎಂಪಿ ಸಹಾಯಕ ಆಯುಕ್ತ (ಶಿಕ್ಷಣ), ಡಾ| ಎಸ್‌.ಕಿರಣ್‌- ಸಂಜಯಗಾಂಧಿ ಆಸ್ಪತ್ರೆ, ಮುಖ್ಯ ಆಡಳಿತಾಧಿಕಾರಿ, ಬೆಂಗಳೂರು. ಎಚ್‌. ಕೋಟ್ರೇಶ್‌- ಕಾರ್ಯದರ್ಶಿ, ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು. ಜಗದೀಶ್‌ ಗಂಗಣ್ಣವರ್‌- ಯೋಜನ ನಿರ್ದೇಶಕ, ರಾಯಚೂರು ನಗರಾಭಿವೃದ್ಧಿ ಕೋಶ. ರೇಷ್ಮಾ ತಾಳಿಕೋಟೆ- ಉಪ ಆಯುಕ್ತರು, ಬೆಳಗಾವಿ ಪಾಲಿಕೆ, ಎಚ್‌.ಬಿ.ವಿಜಯಕುಮಾರ್‌- ಉಪ ಕಾರ್ಯದರ್ಶಿ, ರೇರಾ, ಬೆಂಗಳೂರು. ಜಿ.ಎಚ್‌.ನಾಗಹನುಮಯ್ಯ- ಸಹಾಯಕ ಆಯುಕ್ತರು, ಕೆಐಎಡಿಬಿ, ಬೆಂಗಳೂರು. ಸಾವಿತ್ರಿ ಬಿ.ಕಡಿ-ಮುಖ್ಯ ಆಡಳಿತಾಧಿಕಾರಿ, ಕೊಪ್ಪಳ ವೈದ್ಯಕೀಯ ಕಾಲೇಜು, ಕೆ.ಆರ್‌. ಸುಜಾತಾ- ಉಪ ಕಾರ್ಯದರ್ಶಿ, ಶಿವಮೊಗ್ಗ ಜಿಪಂ.

 

.

Related News

spot_img

Revenue Alerts

spot_img

News

spot_img