e-khata#high court#khata approval#government#high court notice#RDPR
ಬೆಂಗಳೂರು, ಮಾ. 27 : ಹಸ್ತ ಚಾಲಿತ ಖಾತಾ ನೀಡಿದ 30 ದಿನದೊಳಗೆ ಇ-ಖಾತಾ ನೀಡುವಂತೆ ಹೈಕೋರ್ಟ್ ಹೇಳಿದೆ. ಹಾಗೊಂದು ವೇಳೆ ತಡವಾದರೆ, ಸರ್ಕಾರ ಜಾರಿಗೆ ತಂದಿರುವ ಇ-ಖಾತಾದ ಉದ್ದೇಶ ಈಡೇರುವುದಿಲ್ಲ ಎಂದು ಹೈ ಕೋರ್ಟ್ ಬೇಸರವನ್ನು ವ್ಯಕ್ತ ಪಡಿಸಿದೆ. ಇ-ಖಾತಾಗೆ ಅರ್ಜಿ ಸಲ್ಲಿಸಿದ ಕೂಡಲೇ ಸಕಾಲದಲ್ಲಿ ವಿಲೇವಾರಿ ಮಾಡಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
-ಖಾತಾ ಅರ್ಜಿಯನ್ನು ಪರಿಗಣಿಸಿಲ್ಲವೆಂದು ರೇಣುಕಾ ಮನ್‌ಘನಾನಿ ಅವರು ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಮ ಪಂಚಾಯಿತಿ ಇನ್ನು ಈ-ಖಾತಾ ನೀಡಿಲ್ಲ. 2019ರಲ್ಲಿ ಸಲ್ಲಿಸಿರುವ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಇ-ಖಾತಾ ವಿಲೇವಾರಿಗೆ ಅಳವಡಿಸಿರುವ ಹೊಸ ವಿಧಾನದ ಬಗ್ಗೆ ಏಪ್ರಿಲ್ 6 ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೆಬ್ ಸೈಟ್ ನಲ್ಲಿ ಇ-ಖಾತಾಗಳ ಮಾಹಿತಿ ನೀಡುವಂತೆಯೂ, ಗ್ರಾಮ ಪಂಚಾಯಿತಿಗಳಡಿ ಸಲ್ಲಿಕೆಯಾಗುವ ಪ್ರತಿಯೊಂದು ಇ-ಖಾತಾ ಅರ್ಜಿಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
ವೆಬ್‌ಸೈಟ್‌ನಲ್ಲಿಅರ್ಜಿದಾರರು ಹೆಸರು, ಆಸ್ತಿಯ ವಿವರಗಳು, ಇ-ಖಾತಾ ಅರ್ಜಿ ಸಲ್ಲಿಸಿದ ದಿನ ಮತ್ತು ಇ-ಖಾತಾ ವಿತರಿಸಿದ ದಿನಾಂಕಗಳನ್ನು ಉಲ್ಲೇಖ ಮಾಡಬೇಕು. ಇ-ಸುಗಮ ನಿಯಮದ ಪ್ರಕಾರ ಇ-ಖಾತೆಗೆ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು. ಒಂದು ವೇಳೆ 30 ದಿನಕ್ಕೂ ವಿಳಂಬವಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ವೆಬ್ ಸೈಟ್ ನಲ್ಲಿ ತಿಳಿಸಿರಬೇಕು ಎಂದು ಹೈಕೋರ್ಟ್ ಆರ್‌ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದೆ.