ನವದೆಹಲಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಇಸ್ರೇಲ್ ನಿಂದ 235 ಭಾರತೀಯ ಪ್ರಜೆಗಳನ್ನು ಕರೆತರುವ 2ನೇ ವಿಮಾನ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯರನ್ನ ಹೊತ್ತ 2ನೇ ವಿಮಾನವು ದೆಹಲಿಗೆ ಆಗಮಿಸಿದೆ..ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರಿದಿದ್ದು, ಭಾರತೀಯರ ರಕ್ಷಣೆ ಮಾಡಲಾಗುತ್ತಿದೆ. ಆಪರೇಷನ್ ಅಜಯ್ ಯೋಜನೆಗೆ ಅಂಗವಾಗಿ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ವಾಪಸ್ ಕರೆತರಲಾಗುತ್ತಿದೆ. ಇಂದು ಬೆಳಗ್ಗೆ 235 ಭಾರತೀಯರನ್ನು ಹೊತ್ತ ವಿಮಾನ ದೆಹಲಿಗೆ ಆಗಮಿಸಿದ್ದು, ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ರಾಜ್ ಕುಮಾರ್ ರಂಜನ್ ಸಿಂಗ್ ಅವರನ್ನು ಸ್ವಾಗತಿಸಿದರು. ಮೊದಲ ಬ್ಯಾಚ್‌ನಲ್ಲಿ 212 ಜನರು ಭಾರತಕ್ಕೆ ಆಗಮಿಸಿದ್ದರು. ಇದರಲ್ಲಿ ಐವರು ಕನ್ನಡಿಗರು ಇದ್ದರು.ಇಸ್ರೇಲ್‌ನ ಟೆಲ್ ಅವಿವ್‌ನಿಂದ ಭಾರತಕ್ಕೆ ಬಂದ ಚಾರ್ಟರ್ ವಿಮಾನದಲ್ಲಿ ಇಬ್ಬರು ಶಿಶುಗಳು, ಕೆಲ ಮಕ್ಕಳು ಸೇರಿದಂತೆ 235 ಇದ್ದಾರೆ. ಈಗಾಗಲೇ ಮೊದಲ ವಿಮಾನದಲ್ಲಿ 212 ಭಾರತೀಯರನ್ನು ಇಸ್ರೇಲ್‌ನಿಂದ ಕರೆತರಲಾಗಿತ್ತು.ಇಸ್ರೇಲ್‌ನಿಂದ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಭಾರತ ಸರ್ಕಾರ ಅಕ್ಟೋಬರ್ 11 ರಂದು ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಿತು. ಅಕ್ಟೋಬರ್ 12ರ ಸಂಜೆ ಇಸ್ರೇಲ್‌ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಹೊರಟಿದ್ದು, ಅಕ್ಟೋಬರ್ 13ರ ಬೆಳಗ್ಗೆ ದೆಹಲಿ ತಲುಪಿತು.