23.6 C
Bengaluru
Thursday, December 19, 2024

ರಾಜ್ಯ ಸರಕಾರದಿಂದ ಮತ್ತೆ 21 ತಾಲೂಕು ಬರಪೀಡಿತ ಘೋಷಣೆ

#21 talukas #have # declared drought #affected # state government

ಬೆಂಗಳೂರು;ಮುಂಗಾರು ವೈಫಲ್ಯದಿಂದ ಈಗಾಗಲೇ ಘೋಷಿಸಿರುವ 195 ಬರಪೀಡಿತ ತಾಲೂಕುಗಳ ಪಟ್ಟಿಗೆ ಇದೀಗ ಹೆಚ್ಚುವರಿ ಯಾಗಿ 11 ಜಿಲ್ಲೆಯ 21 ತಾಲೂಕುಗಳನ್ನು ಸೇರಿಸಲು ರಾಜ್ಯ ಅಗತ್ಯ ಸರಕಾರ ತೀರ್ಮಾನಿಸಿದೆ,ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದ ರಾಜ್ಯ ಸರಕಾರ 21 ಬರಪೀಡಿತ 22 ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿ ಪ್ರಕಟ ಮಾಡಿದೆ ಎಂದು ತಿಳಿದುಬಂದಿದೆ.ರಾಜ್ಯ ಸರ್ಕಾರವು ಘೋಷಿಸಿರುವ ಬರಪೀಡಿತ ತಾಲೂಕುಗಳೆಂದರೆ ಚಾಮರಾಜನಗರ, ಯಳಂದೂರು, ಕೆ ಆರ್ ನಗರ, ಬೆಳಗಾವಿ,ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಕಲಘಟಗಿ, ಅಳ್ನಾವರ್, ಆಲೂರು, ಅರಸೀಕೆರೆ,ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ ಹಾಗೂ ದಾಂಡೇಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ.ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ,ಮಾಲೂರು,ತುಮಕೂರು, ಗುಂಡ್ಲುಪೇಟೆ,ಹನೂರು, ಕೊಳ್ಳೇಗಾಲ, ದೇವದುರ್ಗ, ಮಸ್ಕಿ, ಬೇಲೂರು,ಹೊಳೆನರಸೀಪುರ, ಸಕಲೇಶಪುರ, ಶೃಂಗೇರಿ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ, ನರಸಿಂಹರಾಜಪುರ, ಮಂಗಳೂರು, ಮೂಡುಬಿದರೆ, ಬ್ರಹ್ಮಾವರ, ಕಾರವಾರ ಸಾಧಾರಣ ಬರಪೀಡಿತ ಎಂದು ಘೋಷಿಸಲಾಗಿದೆ ಕಂದಾಯ ಇಲಾಖೆ 20 ನಿರ್ವಹಣೆ ಜಂಟಿ ಕಾರ್ಯದರ್ಶಿ ಟಿಸಿ ಕಾಂತರಾಜ್ ಆದೇಶ ಹೊರಡಿಸಿದ್ದಾರೆ.

ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ನಡೆದಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯ ಅನ್ವಯವೇ ಬರ ತಾಲೂಕು ಗಳನ್ನು ಘೋಷಿಸಬೇಕಿರುವುದರಿಂದ ಮೊದಲ ಹಂತದಲ್ಲಿ 191 ತಾಲೂಕುಗಳನ್ನು ಘೋಷಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಬಾಕಿಯಿರುವ 41 ತಾಲೂಕುಗಳ ಪೈಕಿ 21 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಸಮೀಕ್ಷಾ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡ ಬಳಿಕ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಪಟ್ಟಿಯನ್ನು ಮಂಡಿಸಿ, ಅನುಮೋದನೆ ಪಡೆಯಲಾಗುವುದು. ಬಳಿಕ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇ ಗೌಡ ಹೇಳಿದ್ದಾರೆ.ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬರ ಸಮೀಕ್ಷೆ ನಡೆಸಿರುವ ಕೇಂದ್ರ ಅಧ್ಯಯನ ತಂಡವು.ಬೆಳೆ ಸಮೀಕ್ಷೆ ಕುರಿತು ವಾರದಿಯನ್ನ ಪಡೆದುಕೊಂಡಿವೆ ಎನ್ನಲಾಗಿದೆ.

Related News

spot_img

Revenue Alerts

spot_img

News

spot_img