28.2 C
Bengaluru
Wednesday, July 3, 2024

2019 ಕಾವೇರಿ ತಂತ್ರಾಂಶದಲ್ಲಿ ತಿದ್ದುಪಡಿ ಪ್ರಕರಣ: ಸಿಸಿಬಿ ಪೊಲೀಸರ ಚಾರ್ಜಶೀಟ್ ಡಿಟೇಲ್ಸ್!

ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಸ್ತಾವೇಜುಗಳಿಗೆ ಸಂಬಂಧಿಸಿದ ದತ್ತಾಂಶದಲ್ಲಿ ಅನಧಿಕೃತ ತಿದ್ದುಪಡಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಐದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ದೋಷಾರೋಪ ಪಟ್ಟಿಯ ಪ್ರತಿ ರೆವಿನ್ಯೂ ಫ್ಯಾಕ್ಟ್ ಗೆ ಲಭ್ಯವಾಗಿದೆ. ಆದರೆ, ಕಂದಾಯ ಕಾನೂನು ನೋಡಿದಾಗ 2019 ರಲ್ಲಿ ಅಂದಿನ ನೋಂದಣಿ ಮಹಾ ಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತ ಡಾ. ತ್ರಿಲೋಕಚಂದ್ರ (IAS ) ರವರು ಸಿಐಡಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ದೂರು ಹೀಗಿತ್ತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿ ದಾಸ್ತವೇಜು ಮಾಡಲು ಮೆ. ಸಿ. ಡಾಕ್ ಪೂನೆ ಅಭಿವೃದ್ಧಿ ಪಡಿಸಿರುವ ಕಾವೇರಿ ತಂತ್ರಾಂಶವನ್ನು ಉಪ ಯೋಗಿಸಲಾಗುತ್ತಿದೆ. ದಸ್ತಾವೇಜುಗಳ ನೊಂದಣಿ ನಂತರ ದಾಸ್ತವೇಜಿನ ಮಾಹಿತಿ ನಮೂದಿಸುವಾಗ ಕೈ ತಪ್ಪಿನಿಂದ ಆಗಿರುವ ತಪ್ಪುಗಳನ್ನು ಸಡಿ ಪಡಿಸಲು ನೋಂದಣಿ ಕಾಯ್ದೆ ಕಲಂ 68 (2) ಅಡಿ ಜಿಲ್ಲಾ ನೋಂದಣಾಧಿಕಾರಿಗಳ ಆದೇಶದಂತೆ ಮಾರ್ಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಸ್ತವೇಜುಗಳಿಗೆ ಸಂಬಂಧಿಸಿದ ಮಾಹಿತಿ ಅನಧಿಕೃತವಾಗಿ ತಿದ್ದುಪಡಿ ಮಾಡಿರುವ ಸಂಬಂಧ ಸ್ಟೇಟ್ ಡಾಟಾ ಸೆಂಟರ್ ರ ಡಟಾ ಬೇಸ್ ನಲ್ಲಿ ಸಿಸ್ಟಮ್ ಅಲರ್ಟ್ ಮಾಡಿದ್ದು ಈ ಕುರಿತು ಸಿ ಡಾಕ್ ಸಂಸ್ಥೆ ವರದಿ ನೀಡಿದ್ದಾರೆ.

07-12-2018 ರಿಂದ 18-12-2018 ರ ಅವಧಿಯಲ್ಲಿ ನಡೆದಿರುವ ಈ ಅನಧಿಕೃತ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಹಲವು ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿ ಕಾಯ್ದೆ ಕಲಂ 68(2) ಅಡಿ ಜಿಲ್ಲಾ ನೋಂದಣಾಧಿಕಾರಿಗಳ ಆದೇಶವಿಲ್ಲದೇ ಉಪ ನೋಂದಣಾಧಿಕಾರಿಗಳು ದಾಸ್ತವೇಜುಗಳನ್ನು ತಿದ್ದುಪಡಿ ಮಾಡಿ ಅನಧಿಕೃತ ಮಾರ್ಪಡು ಮಾಡಿದ್ದಾರೆ. ಈ ಕುರಿತು ಪರಿಶೀಲಿಸಿ ವರದಿ ನೀಡಲು ಜಿಲ್ಲಾ ನೋಂದಣಾಧಿಕಾರಿಗಳ ತಂಡಕ್ಕೆ ಸೂಚಿಸಿತ್ತು. ಈ ತಂಡ ನೀಡಿರುವ ವರದಿ ಪ್ರಕಾರ ದಸ್ತಾವೇಜಿನ ನೋಂದಣಿ ಸಮಯದಲ್ಲಿ ಉತ್ಪತ್ತಿ ಮಾಡಲಾದ ಸಮ್ಮರಿ ರಿಪೋರ್ಟ್, ನೋಂದಣಿ ನಂತರದ ಸಮ್ಮರಿ ರಿಪೋರ್ಟ್, ಋಣಭಾರ ಪತ್ರಗಳೊಂದಿಗೆ ಕುಲಂಕುಶವಾಗಿ ಪಿರೀಶೀಲಿಸಿ ದಾಸ್ತವೇಜುಗಳಿಗೆ ತಿದ್ದುಪಡಿ ಮಾಡಿರುವ ಅಂಶ ಪತ್ತೆಯಾಗಿರುತ್ತದೆ. ಅನಧಿಕೃತ ತಿದ್ದುಪಡಿಗಳಿಗೆ ಸಂಬಂಧಿಸದಿಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 43 (a) ಮತ್ತು 66 ರ ಪ್ರಕಾರ ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 379 , 406 ಅಡಿ ಕೇಸು ದಾಖಲಿಸಿಕೊಂಡು ಕ್ರಮ ಜುರಗಿಸಲು ಕೋರಿದೆ. ಕಾವೇರಿ ತಂತ್ರಾಂಶ ಮೂಲಕ ಎಲ್ಲಾ ನೋಂದಣಿ ಪ್ರಕ್ರಿಯೆ ಎಚ್‌ಸಿಎಲ್ ಇನ್‌ಫೋಸಿಸ್ಟಮ್ ಲಿ. ಕಂಪನಿ ಇಂಜಿನಿಯರ್ ಗಳು ಹಾಗೂ ಶ್ರೀವನ್ ಸಂಸ್ಥೆ ಹೊರ ಗುತ್ತಿಗೆ ಗಣಕ ಯಂತ್ರ ನಿರ್ವಾಹಕರು ನಿರ್ವಹಿಸಿದ್ದು ಈ ಬಗ್ಗೆ ತನಿಖೆ ನಡೆಸಲು ಕೋರಿದೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು..
ಈ ದೂರನ್ನು ಆಧರಿಸಿ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಪ್ರಕರಣವನ್ನು ಸಿಸಿಬಿ ಆರ್ಥಿಕ ಅಪರಾಧ ವಿಭಾಗದಿಂದ ತನಿಖೆ ನಡೆಸಲು ವರ್ಗಾಯಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಉಪ ನೋಂದಣಾಧಿಕಾರಿಗಳು ಒಳಗೊಂಡಂತೆ ಕೆಲವು ಡಿಟಿಪಿ ಆಪರೇಟರ್, ಇಂಜಿನಿಯರ್ ಗಳು ಸೇರಿದಂತೆ 21 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಆರೋಪಿಗಳ ಪಟ್ಟಿ ಹೀಗಿದೆ… ಸೋಮಕಾಂತನ್, ಕೇಶವ, ಎಸ್‌ಡಿಎ ರಂಗನಾಥ್, ಕೇಶವಪ್ಪ, ಪ್ರಸನ್ನ ವಿ. ಬಿ. ಮಧುಕುಮಾರ್, ಬಿ.ಎಸ್. ಕುಮಾರ್, ಗೋವಿಂದರಾಜು ಎ.ಎಚ್‌. ಚಂದ್ರಶೇಖರ್, ಅರುಣಾ, ರಾಘವೇಂದ್ರ, ಬಿ. ಫಯಾಜ್, ಪ್ರಭು ವಿ. ನಾಗರಾಜು ಡಿ. ಲಕ್ಷ್ಮೀ ನಾರಾಯಣ ಡಿ. ಕುಮಾರ್ ಎಚ್.ಎಸ್. ಶ್ರೀನಿವಾಸ್ ಎಂ. ಅನೀಲ್ ಕುಮಾರ್, ಲಲಿತಾ, ಕೆ.ಆರ್. ನಾಗರಾಜು, ಎಸ್‌.ಎಸ್. ಅರವಿಂದ್ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ.

ಸೋಮಕಾಂತನ್ ಮೇಲೆ ಆರೋಪ:
ಸೋಮಕಾಂತನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ದಾಸನಾಪುರದ ಹೊಸ್ಕೂರು ಗ್ರಾಮದಲ್ಲಿ ಒಂದು ಎಕರೆ ಕೃಷಿ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ಡಿಸಿ ಕನ್ವರ್ಷನ್ ಮಾಡಿಸದೇ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಕೆಲವರಿಗೆ ಮಾರಾಟ ಮಡಿದ್ದನು. ನಗರಭಾವೃದ್ಧಿ ಯೋಜನೆಯಿಂದಲೂ ಯಾವುದೇ ಅನುಮತಿ ಪಡೆದಿರಿಲ್ಲ. ಎವರ್ ಗ್ರೀನ್ ಎನ್‌ಕ್ಲೇವ್ ಫೇಸ್ 2 ಹೆಸರಿನಲ್ಲಿ ಭೂ ಪರಿವರ್ತನೆ ಮಾಡದ ಕೃಷಿ ಜಮೀನಿನಲ್ಲಿ ನಿವೇಶನ ಅಭಿವೃದ್ಧಿ ಪಡಿಸಿ ಅವುಗಳನ್ನು ಪರಭಾರೆ ಮಾಡಿ ಈ ನಿವೇಶನಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಸಿದ್ದಾರೆ. ನೋಂದಣಿ ಸಮಯದಲ್ಲಿ ಆರಂಭದಲ್ಲಿ ಸೇಲ್ ಡೀಡ್ ಎಂದು ತೋರಿಸಿದ್ದು ಆ ಬಳಿಕ ಅಗ್ರಿಮೆಂಟ್ ಆಪ್ ಸೇಲ್ ಇಮ್ಯೂವಬಲ್ ಪ್ರಾಪರ್ಟಿ ( ಸ್ವಾಧೀನ ನೀಡಲಾಗಿದೆ. ಕರಾರು ನೀಡಲಾಗಿದೆ) ಎಂದು ನೋಂದಣಿ ಮಾಡಿಸಿದ್ದು, ಆನಂತರ ನೋಂದಣಿ ಮಾಡಿದ ದಾಖಲಾತಿಯಂತೆ ಸೇಲ್ ಡೀಡ್ ಬದಲಾವಣೆ ಮಾಡಲಾಗಿದೆ. ಇಸಿಯಲ್ಲಿ ಅದರ ಸ್ವರೂಪ ಬರುವಂತೆ ಮೋಸ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇ- ಖಾತೆ ಇಲ್ಲದ ಸ್ವತ್ತುಗಳನ್ನು ನೋಂದಣಿ ಮಾಡುವಂತಿಲ್ಲ. ಆದರೂ ಉಪ ನೋಂದಣಾಧಿಕಾರಿಗಳು ಬಿಲ್ಡರ್‌ಗಳು ಅಕ್ರಮ ಎಸಗಿ ಇ ಖಾತೆ ಇಲ್ಲದ ನಿವೇಶನಗಳನ್ನು ನೋಂದಣಿ ಮಾಡಿದ್ದಾರೆ ಎಂದು ದೋಷಾರೋಪಣೆ ಹೊರಿಸಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಈ ಮೇಲಿನ ಆರೋಪ ಹೊರಿಸಲಾಗಿದೆ. ಇದರಲ್ಲಿ ಡಾಟಾ ಎಂಟ್ರಿ ಆಪರೇಟರ್ ್ಗಳನ್ನು, ಕಂಪ್ಯೂಟರ್ ಇಂಜಿನಿಯರ್ ಹಾಗೂ ಕೆಲವು ಉಪ ನೋಂದಣಾಧಿಕಾರಿಗಳನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ.

ಅಸಲಿ ಸತ್ಯ ವೇನು? :
ಸಿಸಿಬಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿಯಲ್ಲಿ ಸಾಕಷ್ಟು ಹುಳುಕುಗಳು ಕಂಡು ಬಂದಿವೆ. ಮೊದಲನೆಯದಾಗಿ ನೋಂದಣಿ ನಿಯಮಗಳನ್ನು ಅರಿಯುವಲ್ಲಿ ಸಿಸಿಬಿ ಪೊಲೀಸರು ವಿಫಲರಾಗಿದ್ದಾರೆ. ನೋಂದಣಿ ನಿಯಮಗಳನ್ನು ನೋಡಿದಾಗ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ದೋಷಾರೋಪ ಹೊರಿಸಿರುವುದು ಅಚ್ಚರಿ ಮೂಡಿಸಿದೆ.

ಕಾನೂನು ತಜ್ಞರು ಹೇಳುವ ಪ್ರಕಾರ ನೋಂದಣಿ ನಿಯಮ 73 ರಲ್ಲಿ ಉಪ ನೋಂದಣಾಧಿಕಾರಿಗಳ ಕರ್ತವ್ಯವನ್ನು ಹೇಳಿದೆ. ” ಬರೆದಕೊಟ್ಟ ಬಗ್ಗೆ ಕ್ರಮಬದ್ಧವಾಗಿ ಇಬ್ಬರು ಪಾರ್ಟಿಗಳ ಒಪ್ಪಿಗೆ ಇದ್ದರೆ, ನೋಂದಣಿಗೆ ತಂದಿದ ದಾಸ್ತವೇಜಿನ ಕ್ರಮ ಬದ್ಧತೆ ಬಗ್ಗೆ ವಿಚಾರಣೆ ನಡೆಸುವುದು ಅಥವಾ ದಾಸ್ತವೇಜು ನೋಂದಣಿ ಬಗ್ಗೆ ಬಾಯಿ ಮಾತಿನ ಅಥವಾ ಲಿಖಿತ ತಕರಾರಿನ ಬಗ್ಗೆ ವಿಚಾರಣೆ ನಡೆಸುವುದು ನೋಂದಣಾಧಿಕಾರಿಯ ಕರ್ತವ್ಯದ ಭಾಗವಾಗಿರುವುದಿಲ್ಲ. ಆದರೆ, ಬರೆದುಕೊಟ್ಟವರು ಓದಲು ಬಾರದವರಾಗಿದ್ದರೆ ಅದನ್ನು ಓದಿ ಹೇಳತಕ್ಕದ್ದು. ಅವಶ್ಯ ವಿದ್ದಲ್ಲಿ ವಿವರಣೆ ಮಾಡಿ ಹೇಳತಕ್ಕದ್ದು. ಅವರ ಅರ್ಥವಾಗದ ಭಾಷೆಯಲ್ಲಿ ಇದ್ದರೆ ಅರ್ಥೈಸಿ ಹೇಳಬೇಕು ಅಷ್ಟೇ.”

(ii) ನೋಂದಣಿಯ ಕೆಳಕಂಡ ಆಧಾರದ ಮೇಲೆ ಯಾವುದೇ ವ್ಯಕ್ತಿ ಆಕ್ಷೇಪಣೆ ಮಾಡಲ್ಪಟ್ಟಿದ್ದರೆ,
(a) ನೋಂದಣಿ ಅಧಿಕಾರಿ ಎದುರು ಬರೆದುಕೊಟ್ಟವರ ಅಥವಾ ಹಕ್ಕು ಸಾಧಿಸುವನಾಗಿ ಕಾಣಬಂದಿದ್ದವು ಅಲ್ಪವಯಿ, ಹುಟ್ಟು ದಡ್ಡ ಅಥವಾ ಹುಚ್ಚನಾಗಿದ್ದಾಗ ,
(b). ಲಿಖಿತವು ನಕಲು ಮಾಡಿದ್ದು,
(c) ಯಾವುದೇ ವ್ಯಕ್ತಿ ಪ್ರತಿನಿಧಿಯಾಗಿ ವಹಿಸಿದವರಾಗಿ ಅಥವಾ ಏಜೆಂಟ್ ಆಗಿ ಅಧಿಕಾರ ಕೊಡದಿದ್ದ ಪಕ್ಷದಲ್ಲಿ
(d) ಪ್ರತಿನಿಧಿ, ಹಸ್ತಾಂತರ ಪಡೆದವ, ಏಜೆಂಟನೆಂದು, ಕಾಣಬಂದ ವ್ಯಕ್ತಿಗೆ ಹಾಗೆಯೇ, ಕಾಣಬರುವ ಅಧಿಕಾರವಿಲ್ಲ. ಮೃತಪಟ್ಟಿದ್ದಾನೆ ಎಂದು ಹೇಳಿ ಪಕ್ಷಗಾರನು ನೋಂದಣಿಗೆ ಅರ್ಜಿ ಸಲ್ಲಿಸಿದ್ದು, ಬರೆದುಕೊಟ್ಟ ವ್ಯಕ್ತಿ ನಿಜವಾಗಿಯೂ ಮೃತಪಟ್ಟಿಲ್ಲ .

ಇಂತಹ ಆಕ್ಷೇಪಣೆಗಳನ್ನು ಮಾತ್ರ ತುಲನೆ ಮಾಡತಕ್ಕದ್ದು. ಋಜವಾತಾದರೆ ನೋಂದಣಿ ತಿರಸ್ಕರಿಸಬಹುದು. ಆದರೆ, ಬರೆದುಕೊಟ್ಟವನು ನೋಂದಣಿ ಅಧಿಕಾರಿಯ ಒಪ್ಪಿಗೆ ಷರಾಗೆ ಸಹಿ ಮಾಡಲು ನಿರಾಕರಿಸಿದರೂ ನೋಂದಣಿ ಘಟಿಸತಕ್ಕದ್ದು ಎಂದು ಹೇಳಿದೆ. ಆದ್ದರಿಂದ ದೋಷಾರೋಪಣ ಪಟ್ಟಿಯಲ್ಲಿ ಮಾಡಿರುವ ಆರೋಪಗಳು ಈ ನಿಯಮದಡಿ ಬರುವುದಿಲ್ಲ ಎನ್ನುತ್ತದೆ ಕಾನೂನು.

ಇದರ ಒಟ್ಟಾರೆ ತಾತ್ಪರ್ಯ ಏನೆಂದರೆ, ಇಬ್ಬರು ಪಕ್ಷಗಾರರು ಒಪ್ಪಿದ ನಂತರ ಯಾವುದೇ ದಾಸ್ತವೇಜನ್ನು ನೋಂದಣಾಧಿಕಾರಿಗಳು ನೋಂದಣಿ ತಿರಸ್ಕರಿಸಿವುಂತಿಲ್ಲ. ( ಈ ಮೇಲಿನ ಅಂಶಗಳು ಹೊರತು ಪಡಿಸಿ). ಅಚ್ಚರಿ ಏನೆಂದರೆ, ಸಿಸಿಬಿ ಪೊಲೀಸರು ಹೊರಿಸಿರುವ ಆರೋಪ ಸಂಬಂಧ ಉಪ ನೋಂದಣಾಧಿಕಾರಿಗಳ ವಿರುದ್ಧ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನಡೆಸಿದ ಇಲಾಖೆ ವಿಚಾರಣೆಯಲ್ಲಿ ಆರೋಪಗಳು ಸಾಬೀತಾಗಿಲ್ಲ ಎಂದು ವರದಿ ನೀಡಿದ್ದಾರೆ. ಆ ಆರೋಪ ಸಾಬೀತಾಗಿಲ್ಲವಾಗಿದ್ದರಿಂದ ಪ್ರಕರಣ ಮುಕ್ತಾಯಗೊಳಿಸಿ ಎಂದು ವರದಿ ನೀಡಿದ್ದಾರೆ. ಇದೇ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರು ತನಿಖೆ ನಡೆಸಿ ಸತ್ಯಾಂಶದ ವರದಿ ಸಲ್ಲಿಸಬೇಕಿತ್ತು. ಸದ್ಯದ ವಿಚಾರ ಏನೆಂದರೆ, ಇದೇ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನೀಡಿದ ವರದಿಯನ್ನು ಮುಂದಿಟ್ಟುಕೊಂಡು ಉಪ ನೋಂದಣಾಧಿಕಾರಿಗಳು ಆರೋಪ ಪಟ್ಟಿಗೆ ತಡೆಯಾಜ್ಞೆ ತಂದಿದ್ದಾರೆ.

ಟೆಕ್ನಿಕಲ್ ಅಂಶ:
ನೋಂದಣಿ ಕಾಯ್ದೆ ಅನ್ವಯ ನೋಂದಣಿ ಸಮಯದಲ್ಲಿ ಇಲಾಖೆಯಿಂದ ಆಗುವ ತಪ್ಪುಗಳನ್ನು ( ಕೈ ಬಿಡುವುದು ಅಥವಾ ಸೇರಿಸುವುದು) ಇದ್ದರೆ, ಅವನ್ನು ಉಪ ನೋಂದಣಾಧಿಕಾರಿಗಳು ಜಿಲ್ಲಾ ನೋಂದಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ, ಜಿಲ್ಲಾ ನೋಂದಣಾಧಿಕಾರಿಗಳ ಅನುಮತಿ ಪಡೆದು ಸರಿ ಪಡಿಸಲು ಅವಕಾಶವಿದೆ. ಇದರಲ್ಲಿ ಕೆಲವು ದಾಸ್ತವೇಜುಗಳಿಗೆ ಜಿಲ್ಲಾಧಿಕಾರಿಗಳಿಗೆ ಅನುಮತಿಸಿದರೂ ಈ ದೋಷಾರೋಪ ಪಟ್ಟಿಯಲ್ಲಿ ಸೇರಿಸಿರುವುದು ಕಂಡು ಬಂದಿದೆ. ಮುಖ್ಯವಾಗಿ ನಿವೃತ್ತ ನ್ಯಾಯಾಧೀಶರು ಇಲಾಖಾ ವಿಚಾರಣೆಯಲ್ಲಿ ಕೂಲಂಕುಶ ವಿಚಾರಣೆಯಿಂದ ಆರೋಪ ಸಾಬೀತಾಗಿಲ್ಲ ಎಂದು ಹೇಳಿರುವುದು ಅತಿ ಮುಖ್ಯ ಅಂಶವಾಗಿದೆ.

ಮತ್ತೊಂದು ವಿಚಾರ ಏನೆಂದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಆರೋಪ ಪಟ್ಟಿಯಲ್ಲಿ ಸೂಚಿಸಿರುವ ಭಾರತೀಯ ದಂಡ ಸಂಹಿತೆ ಅಡಿ ದಾಖಲಿಸಿರುವ ಸೆಕ್ಷನ್ ಗಳು ಒಳ್ಳೆಯ ಉದ್ದೇಶದಿಂದ ನೋಂದಣಿ ಮಾಡಿದ್ದರೆ ನೋಂದಣಾಧಿಕಾರಿಗಳಿಗೆ ಅನ್ವಯ ಆಗುವುದಿಲ್ಲ. ಆರೋಪ ಪಟ್ಟಿಯಲ್ಲಿ ಸೂಚಿಸಿರುವ ದಾಸ್ತವೇಜುಗಳಿಗೆ ಸಂಬಂಧಿಸಿದಂತೆ ಬರೆಸಿಕೊಂಡವರಿಗೆ ಹಾಗೂ ಬರೆದುಕೊಟ್ಟವರಿಗೆ ಡ್ಯಾಮೇಜ್ ಆಗಿದ್ದರೆ ನೇರವಾಗಿ ದೂರು ನೀಡಬಹುದಿತ್ತು. ದೂರು ನೀಡದೇ ಇರುವುದರಿಂದ ಸಂಬಂಧಪಟ್ಟ ದಾಸ್ತವೇಜಿನಲ್ಲಿ ಯಾವುದೇ ಅಕ್ರಮದ ವಹಿವಾಟು ನಡೆಯದ ಕಾರಣ ಈ ದಾಸ್ತವೇಜುಗಳ ತಿದ್ದುಪಡಿ ಅಕ್ರಮ ಎಂದು ಹೇಳಲಿಕ್ಕೆ ಆಗದು ಎಂದು ಕಾನೂನು ತಜ್ಞರು ಹೇಳುತ್ತಾರೆ.

Related News

spot_img

Revenue Alerts

spot_img

News

spot_img