20.8 C
Bengaluru
Thursday, December 19, 2024

2,000 ರೂ. ನೋಟ್ ಬ್ಯಾನ್ ಮಹಿಮೆ,ಸಾಲ ಮರುಪಾವತಿ , ಬ್ಯಾಂಕ್ ಠೇವಣಿ ಮಾಡುವವರ ಸಂಖ್ಯೆ ಹೆಚ್ಚಳ: SBI ಅಧ್ಯಯನ

ನವದೆಹಲಿ ಜೂನ್ 19: ಆರ್.ಬಿ.ಐ. ಮಾಡಿದ 2000 ರೂ. ಮುಖಬೆಲೆಯ ನೋಟ್ ಬ್ಯಾನ್ ಒಂದು ಕಡೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಚಿಲ್ಲರೆ CBDC (ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಮೇಲೆ ಧನಾತ್ಮಕ ಪರಿಣಾಮ ಬೀರಿದೆ, ಎಂದು ಹೇಳಬಹುದು. ಇದಕ್ಕೆ ಸಂಭಂದಿಸಿದಂತೆ ಎಸ್.ಬಿ.ಐ ರವರ ಆಂತರಿಕ ವರದಿಯ ಪ್ರಕಾರ ನೋಟ್ ಹಿಂಪಡಿಕೆಯ ನಂತರ ಬ್ಯಾಂಕ್ ಠೇವಣಿ ಮತ್ತು ಸಾಲ ಮುರುಪಾವತಿಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಮೇ 19 ರಂದು ಬ್ಯಾಂಕಿಂಗ್ ನಿಯಂತ್ರಕರು ಕರೆನ್ಸಿ ನಿರ್ವಹಣೆಯ ಭಾಗವಾಗಿ ಚಲಾವಣೆಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟನ್ನು ಹಿಂಪಡೆಯಲು ನಿರ್ಧರಿಸಿದ್ದರು. ಮೌಲ್ಯದ ಪ್ರಕಾರ ಮಾರ್ಚ್ 23 ರ ವೇಳೆಗೆ 2,000 ಮುಖಬೆಲೆಯ ನೋಟುಗಳ ಪಾಲು (3.62 ಲಕ್ಷ ಕೋಟಿ ರೂ.) ಶೇ.10.8 ರಷ್ಟು ಇತ್ತು.

ಜೂನ್ 8 ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಹೇಳಿಕೆಗಳ ಪ್ರಕಾರ ಸುಮಾರು 1.8 ಲಕ್ಷ ಕೋಟಿ 2,000 ರೂಪಾಯಿ ನೋಟುಗಳು ಈಗಾಗಲೇ ವ್ಯವಸ್ಥೆಗೆ ಮರಳಿವೆ. ಇದರಲ್ಲಿ ಸುಮಾರು 85 ಪ್ರತಿಶತ ಅಥವಾ 1.5 ಲಕ್ಷ ಕೋಟಿ ಠೇವಣಿಗಳಾಗಿ ಬಂದಿದ್ದರೆ ಉಳಿದವು ನೋಟು ವಿನಿಮಯ ಮೂಲಕ ಬಂದಿವೆ.ಇದರಿಂದ ಬ್ಯಾಂಕ್ ಠೇವಣಿ ಹೆಚ್ಚಳ, ಸಾಲ ಮರುಪಾವತಿ, ಬಳಕೆ ಹೆಚ್ಚಳ, ಆರ್‌ಬಿಐ ಚಿಲ್ಲರೆ ಸಿಬಿಡಿಸಿ ಉತ್ತೇಜನ ಮತ್ತು ಸಂಭಾವ್ಯ ಜಿಡಿಪಿ ಉತ್ತೇಜನಕ್ಕೆ ಕಾರಣವಾಗಬಹುದು ಎಂದು ಎಸ್‌ಬಿಐ ಅಧ್ಯಯನ ಉಲ್ಲೇಖಿಸಿದೆ.

2000 ರೂ. ಕರೆನ್ಸಿ ನೋಟುಗಳ ಹಿಂಪಡೆಯುವಿಕೆಯು ಬ್ಯಾಂಕ್ ಠೇವಣಿಗಳನ್ನು ಹೆಚ್ಚಿಸುತ್ತದೆ, ಸಾಲಗಳ ಮರುಪಾವತಿಯನ್ನು ವೇಗಗೊಳಿಸಿದೆ ಮತ್ತು ಬಳಕೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಚಿಲ್ಲರೆ CBDC (ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಎಸ್‌ಬಿಐ ಅಧ್ಯಯನವು ಕಂಡುಕೊಂಡಿದೆ.

Related News

spot_img

Revenue Alerts

spot_img

News

spot_img