27.5 C
Bengaluru
Thursday, January 23, 2025

ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು ಸಿಗುವುದು 20,000 ಪಿಂಚಣಿ!

ಬೆಂಗಳೂರು : ರಾಷ್ಟ್ರೀಯ ಪಿಂಚಣಿ  ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ತಿಂಗಳು 20,000 ರೂ. ನೀಡುತ್ತದೆ. ಈ ಯೋಜನೆಯ ಹೆಸರು ರಾಷ್ಟ್ರೀಯ ಪಿಂಚಣಿ ಯೋಜನೆ. ವೃದ್ಧಾಪ್ಯದಲ್ಲಿಯೂ ಉತ್ತಮ ಆದಾಯ ಪಡೆಯುವುದು  ಬಹಳ ಮುಖ್ಯ. ಕೇಂದ್ರ ಸರ್ಕಾರದ ಅಂತಹ ಯೋಜನೆಯೊಂದನ್ನು ಜಾರಿಕ್ಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ಆದಾಯ ಗಳಿಸಬಹುದು.  ಈ ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ತಿಂಗಳು 20,000 ರೂ. ನೀಡುತ್ತದೆ. ಈ ಯೋಜನೆಯ ಹೆಸರು ರಾಷ್ಟ್ರೀಯ ಪಿಂಚಣಿ ಯೋಜನೆ.

ರಾಷ್ಟ್ರೀಯ ಪಿಂಚಣಿ ಯೋಜನೆಯು ಸರ್ಕಾರದ ಯೋಜನೆಯಾಗಿದೆ. ಈ  ಯೋಜನೆ ಮೂಲಕ ನಿಮ್ಮ ವೃದ್ಧಾಪ್ಯವು ಸುರಕ್ಷಿತವಾಗಿರುತ್ತದೆ. ಈ ಯೋಜನೆಯನ್ನು 2004 ರಲ್ಲಿ ಸರ್ಕಾರಿ ನೌಕರರಿಗಾಗಿ ಪ್ರಾರಂಭಿಸಲಾಯಿತು. ನಂತರ 2009 ರಲ್ಲಿ, ಈ ಯೋಜನೆಯನ್ನು ಎಲ್ಲಾ ವರ್ಗಗಳಿಗೂ ವಿಸ್ತರಿಸಲಾಯಿತು.

40% ವರ್ಷಾಶನ ಹೂಡಿಕೆ ಮಾಡಬೇಕು :
ಈ ಯೋಜನೆಯ ಅಡಿಯಲ್ಲಿ, ಕೆಲಸದ ಅವಧಿಯಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ,  40% ಮೊತ್ತವನ್ನು ವರ್ಷಾಶನದಲ್ಲಿ ಹೂಡಿಕೆ ಮಾಡಬೇಕು. ವರ್ಷಾಶನದ ಮೊತ್ತದಿಂದಲೇ ಪಿಂಚಣಿ ಪಡೆಯುವುದು ಸಾಧ್ಯವಾಗುತ್ತದೆ.

ಯೋಜನೆಯ ಪ್ರಯೋಜನಗಳೇನು ? : 
– ಈ ಯೋಜನೆಯಲ್ಲಿ ನೀವು ರೂ.1000 ದಿಂದ ಹೂಡಿಕೆ ಪ್ರಾರಂಭಿಸಬಹುದು.

– 18 ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯ ಲಾಭ ಪಡೆಯಬಹುದು.

–  ಅಂತಿಮ ವಿಡ್ರಾವಾಲ್ ಮೇಲೆ 60% ಮೊತ್ತ ಟ್ರ್ಯಾಕ್ಸ್ ಫ್ರೀಯಾಗಿರುತ್ತದೆ.

-NPS ಖಾತೆಯಲ್ಲಿನ ಕಾಂಟ್ರೀ ಬ್ಯುಶನ್ ಮಿತಿ 14 ಪ್ರತಿಶತ.

– ವರ್ಷಾಶನ ಖರೀದಿಯಲ್ಲಿ ಹೂಡಿಕೆ ಮಾಡಿದ ಮೊತ್ತ ತೆರಿಗೆ ವಿನಾಯಿತಿಯನ್ನು ಪಡೆಯುತ್ತದೆ.

ಪ್ರತಿ ತಿಂಗಳು ಸಿಗುತ್ತದೆ  20,000 ರೂಪಾಯಿ :

20 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿದರೆ, ನಿವೃತ್ತಿಯ ತನಕ 5.4 ಲಕ್ಷದ ಹಣ ಸಂಗ್ರಹವಾಗುತ್ತದೆ. ಇದರ ಮೇಲೆ 9 ರಿಂದ 12 ಪರ್ಸೆಂಟ್ ರಿಟರ್ನ್ ಇರುತ್ತದೆ. ಇದರಿಂದಾಗಿ ಈ ಹೂಡಿಕೆಯು 1.05 ಕೋಟಿಯಷ್ಟಾಗುತ್ತದೆ. 40 ಶೇ ದಷ್ಟು ಕಾರ್ಪಸ್ ಅನ್ನು ಒಂದು ವರ್ಷಕ್ಕೆ ಪರಿವರ್ತಿಸಿದರೆ, ಈ ಮೊತ್ತ 42.28 ಲಕ್ಷ ರೂ. ಯಾಗುತ್ತದೆ. ಅದರಂತೆ, ಶೇ. 10 ರ ವಾರ್ಷಿಕ ದರದಂತೆ ಲೆಕ್ಕ ಹಾಕಿದರೆ ಪ್ರತಿ ತಿಂಗಳು 21,140 ರೂ ಪಿಂಚಣಿ ಪಡೆಯುವುದು ಸಾಧ್ಯವಾಗುತ್ತದೆ.

Related News

spot_img

Revenue Alerts

spot_img

News

spot_img